UN NETWORKS
ಕೈರಂಗಳ:ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ವತಿಯಿಂದ ಕೆ.ಸಿ.ಸಿ ಮುಡಿಪು ಇದರ ಸಹಕಾರದೊಂದಿಗೆ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ಸಂಸ್ಥೆಯ ಕಛೇರಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ನರಿಂಗಾನ ಗ್ರಾ.ಪಂ ಸದಸ್ಯರಾದ ಮುರಳಿದರ್ ಶೆಟ್ಟಿ ಇವರು ಉಧ್ಘಾಟಿಸಿದರು. ಹಿರಿಯರಾದ ಟಿ.ಕೆ ಇಸ್ಮಾಯಿಲ್ ರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಅವರು ಮಾತನಾಡಿ ಅಲ್-ಅಮೀನ್ ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಇದೇ ಸಂಧರ್ಭದಲ್ಲಿ S.J.M ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮುಹಿಯ್ಯದ್ದೀನ್ ಸಅದಿ ತೋಟಾಲ್ ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಅಹ್ಮದ್ ಕುಂಙಿ,ಪಂ.ಸದಸ್ಯರಾದ ಹನೀಫ್,ಪ್ರಮುಖರಾದ ಅಬ್ಬು ಹಾಜಿ ಪಡಿಕ್ಕಲ್,ಅಕ್ಬರ್ ಪಿ.ಎ,ಮುನೈಝ್ ಕೈರಂಗಳ,ಶರೀಫ್ ಕೈರಂಗಳ,ಹಂಝ ಮತ್ತಿತರು ಉಪಸ್ಥಿತರಿದ್ದರು.ಪ್ರ.ಕಾರ್ಯದರ್ಶಿ ನಯೀಮುಲ್ ಹಕ್ ಸ್ವಾಗತಿಸಿ,ನಾಸೀರ್ ಕಾಯಾರ್ ವಂದಿಸಿದರು.




