UN NETWORKS
ಮಂಗಳೂರು: ಕರ್ನಾಟಕ ಜಂಇಯ್ಯತುಲ್ ಉಲಮಾ ಇದರ ವತಿಯಿಂದ ಅಕ್ಟೋಬರ್ ತಿಂಗಳ 8,9 ಮತ್ತು 10 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿರುವ ಉಲಮಾ ಕಾನ್ಫರೆನ್ಸನ್ನು ವಿಜಯಗೊಳಿಸುವಂತೆ ಎಸ್.ಇ.ಡಿ.ಸಿ. ಮುಅಲ್ಲಿಮರಿಗೆ ಕರೆ ನೀಡಿದೆ.
ಅಕ್ಟೋಬರ್ 9 ರ ರಾತ್ರಿ ಹಾಗೂ 10 ರ ಬೆಳಿಗ್ಗಿನ ತರಗತಿಗಳಿಗೆ ಸಮ್ಮೇಳನ ಪ್ರಯುಕ್ತ ವಿದ್ಯಾಭ್ಯಾಸ ಬೋರ್ಡ್ ರಜೆ ಘೋಷಣೆ ಮಾಡಿರುವುದರಿಂದ ಎಲ್ಲಾ ಮುಅಲ್ಲಿಮರು ಕ್ಯಾಂಪಿನಲ್ಲಿ ಭಾಗವಹಿಸುವಂತೆ ಅದು ಮುಅಲ್ಲಿಮರಲ್ಲಿ ವಿನಂತಿಸಿಕೊಂಡಿದೆ.
ಉಲಮಾ ಕಾನ್ಫರೆನ್ಸ್ ಯಶಸ್ವಿಗೆ ಮದನೀಸ್ ಅಸೋಸಿಯೇಷನ್ ಕರೆ:
ಕರ್ನಾಟಕ ಜಂಇಯ್ಯತುಲ್ ಉಲಮಾ ಇದರ ವತಿಯಿಂದ ಅಕ್ಟೋಬರ್ ತಿಂಗಳ 8,9 ಮತ್ತು 10 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿರುವ ಉಲಮಾ ಕಾನ್ಫರೆನ್ಸ್ ನಲ್ಲಿ ಎಲ್ಲಾ ಮದನಿಗಳು ಭಾಗವಹಿಸುವ ಮೂಲಕ ಯಶಸ್ವಿ ಗೊಳಿಸುವಂತೆ ಮದನೀಸ್ ಅಸೋಸಿಯೇಷನ್ ಕೇಂದ್ರ ಸಮಿತಿಯು ಸರ್ವ ಮದನಿಗಳಿಗೆ ಕರೆ ನೀಡಿದೆ.



