UN NETWORKS
ಕಿನ್ಯ: ಕಿನ್ಯ ಕೀಶವ ಶಿಶು ಮಂದಿರ ಕೊಂಡಾಣ ಮಂಗಳೂರು ವುಡ್ ಇಂಡಸ್ಟ್ರೀಸ್ ವತಿಯಿಂದ ಧ್ವನಿವರ್ದಕವನ್ನು ಕಂಪೆನಿಯ ಪಾಲುದಾರರಾದ ಶ್ರೀದರ ಹೆಗಡೆಯವರು ನೀಡಿದರು. ಶಿಶು ಮಂದಿರದಲ್ಲಿ ನಡೆದ ಶಾರದಾ ಪೂಜಾ ಸಂಧರ್ಭ ಪುಟಾಣಿ ಮಕ್ಕಳಿಂದ ಹಂಸರಾಗ ಭಜನೆಯೊಂದಿಗೆ ಉದ್ಘಾಟಿಸಲಾಯಿತು.
ಈ ಸಂಧರ್ಭ ಶಿಶು ಮಂದಿರ ವಿಶ್ವಸ್ಥ ಮಂಡಳಿಯ ಪ್ರ.ಕಾರ್ಯದರ್ಶಿ ಮೋಹನ್ದಾಸ್ ಶೆಟ್ಟಿ, ವ್ಯವಸ್ಥಾಪಕ ನಾರಾಯಣ ಕಜೆ,ಕಾರ್ಯದರ್ಶಿ ಚೇತನ್ ಪಿಲಿಕೂರು,ಕಿನ್ಯ ಗ್ರಾಮ ಬಿಜೆಪಿ ಅಧ್ಯಕ್ಷ ಪಾರ್ಥ ಸಾರಥಿ,ಸದಾಶಿವ ಆಚಾರ್ಯ,ರಮಾನಾಥ ಮಿತ್ತಡ,ಪುರುಷೋತ್ತಮ ಮಿತ್ತಡ ಮೊದಲಾದವರು ಉಪಸ್ಥಿತರಿದ್ದರು




