UN NETWORKS
ಮುಡಿಪು: ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದಲ್ಲಿ ವಾಹನ -ಯಂತ್ರೋಪಕರಣ ಪವಿತ್ರೀಕರಣ ಕಾರ್ಯಕ್ರಮವನ್ನು ಸಪ್ಟೆಂಬರ್ 29 ರಂದು ಏರ್ಪಡಿಸಲಾಗಿತ್ತು. ಪವಿತ್ರ ಪರಮ ಪ್ರಸಾದದ ಆರಾಧನೆ ಮತ್ತು ಪವಿತ್ರ ಬಲಿ ಪೂಜೆಯ ಸಮಯದಲ್ಲಿ ವಾಹನ ಚಾಲಕ ಮಾಲೀಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಮಾಡಂತ್ಯಾರ್ ಚರ್ಚ್ ಸಹಾಯಕ ಧರ್ಮಗುರುಗಳು ವಂ. ಆಲ್ವಿನ್ ಡಿಸೋಜ ರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಮುಡಿಪು ಚರ್ಚ್’ನ ಧರ್ಮಗುರುಗಳಾದ ವಂ. ಬೆಂಜಮಿನ್ ಪಿಂಟೊ ರವರು ಪ್ರಯಾಣಿಕರಿಗೋಸ್ಕರ ಪ್ರಾರ್ಥನೆ ನಡೆಸಿ ನೆರೆದ ಭಕ್ತರನ್ನು ಮತ್ತು ಅಸಂಖ್ಯ ವಾಹನಗಳನ್ನು ಪವಿತ್ರಜಲದಿಂದ ಪವಿತ್ರೀಕರಿಸಿದರು. ಇತರ ಧರ್ಮಗುರುಗಳು ಮತ್ತು ಸಹಸ್ರಾರು ಭಕ್ತರು ಹಾಜರಿದ್ದರು.




