UN NETWORKS
ಉಳ್ಳಾಲ: ದೇಯಿ ಬೈದ್ಯೆತಿ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಔಷಧಿ ವನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಉಳ್ಳಾಲ ವಲಯದ ದೇಯಿ ಬೈದ್ಯೆತಿ ಕೋಟಿ-ಚೆನ್ನಯ್ಯ ಮೂಲಸ್ಥಾನ, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ವತಿಯಿಂದ ಮನವಿ ನೀಡಲಾಯಿತು.
ಈ ಸಂದರ್ಭ ಗೆಜ್ಜೆಗಿರಿ ನಂದನ ಬಿತ್ತಿಲ್, ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ , ಕಾರ್ಯಾಧ್ಯಕ್ಷ ಯಶವಂತ ದೇರಾಜೆ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಲಕ್ಷ್ಮಿ ಪಿಲಾರ್, ಗೆಜ್ಜೆಗಿರಿ ಉಳ್ಳಾಲ ವಲಯ ಮಹಿಳಾ ಸಮಿತಿ ಅಧ್ಯಕ್ಷೆ ನಮಿತಾ ಶ್ಯಾಂ, ರವೀಂದ್ರ ಬಂಗೇರ , ಆನಂದ ಅಸೈಗೋಳಿ, ಜಯಶ್ರೀ ಕರ್ಕೇರ, ಬಿಲ್ಲವ ಸಂಘ ಗ್ರಾಮಚಾವಡಿ ಅಧ್ಯಕ್ಷ ಲಕ್ಷ್ಮಣ ಕೋಟ್ಯಾನ್ , ಬಿಲ್ಲವ ಸಂಘ ಕೊಲ್ಯ ಮಾಜಿ ಅಧ್ಯಕ್ಷ ಬಾಳಪ್ಪ ಪೂಜಾರಿ, ಟಿ.ಮೋಹನ ಕೋಟ್ಯಾನ್ , .ನಾರಾಯಣ ಪೂಜಾರಿ , ಮುತ್ತಪ್ಪ ಪೂಜಾರಿ, ರವಿಚಂದ್ರ ಅಮೀನ್, ಉಮೇಶ್ ಕೈರಂಗಳ , ರವಿ ಕುಮಾರ್ ಕೋಡಿ, ಅಶೋಕ ಪೂಜಾರಿ, ವಿಜಯ ಕುಮಾರ್ ಉಪಸ್ಥಿತರಿದ್ದರು.



