UN NETWORKS
ಬೋಳಿಯಾರು: ಬೋಳಿಯಾರು ಒಡಕ್ಕಿನಕಟ್ಟೆ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ಗೋವಿಗಾಗಿ ಮೇವು ಎಂಬ ಆಶಯದೊಂದಿಗೆ ಕೆಸರ್ದ ಕಂಡಡ್ ಒಂಜಿ ದಿನ ಗ್ರಾಮೀಣ ಕ್ರೀಡಾಕೂಟ ಹಾಗೂ ಭತ್ತದ ನಾಟಿ ಕಾರ್ಯ ಬೋಳಿಯಾರು ಜಕ್ರಿಬೆಟ್ಟು ಕುಂಟೆಪುಣಿ ಬಾಕಿಮಾರು ಗದ್ದೆಯಲ್ಲಿ ಜರಗಿತು.
ಗದ್ದೆಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತನೆ, ಭತ್ತದ ಕೃಷಿಯನ್ನು ಮರೆತ ಯುವಜನತೆಗೆ ಕೃಷಿ ಚಟುವಟಿಕೆಯತ್ತ ಪ್ರೋತ್ಸಾಹ, ಉತ್ಪತ್ತಿಯಾದ ಭತ್ತದ ಹುಲ್ಲನ್ನು ಗೋ ಶಾಲೆಗೆ ಸಮರ್ಪಿಸುವುದು, ಜಾನಪದ ಕ್ರೀಡೆಗಳ ಜತೆಯಲ್ಲಿ ಮಣ್ಣಿನ ಸಂಪರ್ಕ ಯುವಕರಲ್ಲಿ ಬೆಳೆಯುವಂತೆ ಮಾಡುವುದು, ಊರಿನ ಜನರ ಒಗ್ಗಟ್ಟು, ಸಾಮರಸ್ಯ ಬಲಪಡಿಸುವ ಉದ್ದೇಶ ಕಾರ್ಯಕ್ರಮದ್ದಾಗಿತ್ತು.
ಗದ್ದೆಗೆ ಕೋಣ ಇಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಗತಿಪರ ಕೃಷಿಕರಾದ ಗುಣಕರ ಆಳ್ವ ಬೋಳ್ಯಾರುಗುತ್ತು ಉದ್ಘಾಟಿಸಿದರು. ದೇಜಪ್ಪ ಮೂಲ್ಯ ಮನ್ಕಾರ್, ಸೀತಾರಾಮ ಶೆಟ್ಟಿ ಬೋಳ್ಯಾರು ಪೊಯ್ಯೆ, ಪದ್ಮನಾಭ ಮೂಲ್ಯ ಒಡಕ್ಕಿನಕಟ್ಟೆ, ಶಿವಪ್ಪ ನಾಯ್ಕ್ ಕಟ್ಟದಬಾಗಿಲು ಮುಖ್ಯ ಅತಿಥಿಗಳಾಗಿದ್ದರು. ಲಕ್ಷ್ಮೀಶ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



















