UN NETWORKS
ಮಂಗಳೂರು : ದ.ಕ.ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಪಿಎಫ್ಐ ಮತ್ತು ಎಸ್ಡಿಪಿಐ ಮತ್ತಿತರ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಅಗ್ರಹಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಮಂಗಳೂರಿನಲ್ಲಿ ಅಯೋಜಿಸಿದ ” ಮಂಗಳೂರಿನಲ್ಲಿಚಲೋ ಬೈಕ್ ರ್ಯಾಲಿ”ಇಂದು ( ಗುರುವಾರ ) ಅರಂಭಗೊಂಡಿದ್ದು.
Photo: Dinesh R Shetty Annu
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯುಡಿಯೂರಪ್ಪ ,ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ,ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ , ಅರ್ .ಅಶೋಕ,ಯುವಮೋರ್ಚಾ ಅಧ್ಯಕ್ಷ ಪ್ರತಾಪ ಸಿಂಹ, ಅರವಿಂದ ಲಿಂಬಾವಳಿ, ಸಂಸದ ಪ್ರಹ್ಲಾದ ಜೋಶಿ,ನಳಿನ್ ಕುಮಾರ್ ಕಟೀಲು,ಶೋಭಾ ಕರಂದ್ಲಾಜೆ ಮತ್ತಿತರ ನಾಯಕರು ಭಾಗವಹಿಸಿ ರಾಜ್ಯ ಸರಕಾರದ ಅಡಳಿತ ವ್ಯಪಲ್ಯವನ್ನು ಖಂಡಿಸಿ ಅಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ನಗರದ ಜ್ಯೋತಿ ಸರ್ಕಲ್ನಲ್ಲಿ ಪ್ರತಿಭಟನೆ ರ್ಯಾಲಿಯ ಸಭೆಯನ್ನುದ್ದೇಶಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯುಡಿಯೂರಪ್ಪ ಅವರು ಮಾತನಾಡಿ….. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಗೆ ಇಲ್ಲಿಯ ಉಸ್ತುವಾರಿ ಸಚಿವರೇ ಕಾರಣ,. ರಾಜ್ಯದಲ್ಲಿ ಈ ವರೆಗೆ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ರಾಜ್ಯ ಸರಕಾರದ ಅಡಳಿತ ವ್ಯಪಲ್ಯವೇ ಕಾರಣ.ಇಲ್ಲಿನ ಸಚಿವರು ರಾಜೀನಾಮೆ ನೀಡುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ,ನಮ್ಮ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ . ಕೇರಳದಿಂದ ಕೊಲೆಯನ್ನು ನಡೆಸಿ ಈಗ ರಾಜ್ಯಕ್ಕೆ ವೇಣುಗೋಪಾಲ್ ಬಂದಿದ್ದು ಅ ನಂತರ ಇಲ್ಲಿ ಕೋಮು ದಳ್ಳುರಿ ಹಚ್ಚಲು ಹೆಚ್ಚಾಗಿದೆ. ಸಿದ್ದರಾಮಯ್ಯ ಅವರೆ ನಿಮ್ಮರಾಜಕೀಯ ಇನ್ನೂ ಹೆಚ್ಚು ದಿನ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಕೊಲೆಗಡುಕರನ್ನು ಇಟ್ಟುಕೊಂಡು ರಾಜ್ಯಭಾರ ಮಾಡುತ್ತಿದ್ದೀರಾ ಸಚಿವ ಜಾರ್ಜ್ ಅವರ ರಾಜೀನಾಮೆಯನ್ನು ಪಡೆಯುರಿ ಎಂಬುದಾಗಿ ಅಗ್ರಹಿಸಿದ್ದಾರೆ.
ಜಗದೀಶ್ ಶೆಟ್ಟರ್ ಮಾತನಾಡಿ……ರಾಜ್ಯದಲ್ಲಿ ಗಣಪತಿ ಪ್ರಕರಣದ ತನಿಖೆಯನನು ಸಿಬಿಐಗೆ ಕೊಟ್ಟಿದೆ.ಸಿಐಡಿ ಮೂಲಕ ರಾಜ್ಯಸರಕಾರವೇ ಜಾರ್ಜ್ ಗೆ ಕ್ಲಿನ್ ಚಿಟ್ ಕೊಟ್ಟಿತ್ತು.ಈಗ ಸಿಬಿಐ ತನಿಖೆಯಿಂದ ಇಡೀ ಸರಕಾರಕ್ಕೆ ಕಪ್ಪು ಚುಕ್ಕೆ ಬಂದು ಹುಳುಕು ಹೊರಬರಲಿದೆ ಕಾಗ್ರಸ್ ಸರಕಾರದ ಅಂತ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಅಗುತ್ತಾರೆ ಕೆಲವೇ ತಿಂಗಳಿನಲ್ಲೇ. ಇಂದಿರಾಗಾಂಧಿಯ ತುರ್ತುಪರಿಸ್ಥಿತಿ ಅಂದು ಕಂಡದ್ದು ಇಂದು ಸಿದ್ದರಾಮಯ್ಯನ ಕಾಲದಲ್ಲಿ ಅಗಿದೆ.
ಅರ್ ಅಶೋಕ್…….ನಮ್ಮ ಹೋರಾಟ ಪೊಲೀಸರ ಮೇಲೆ ಅಲ್ಲ,ಕೆಂಪಯ್ಯ ,ರಾಮಲಿಂಗಯ್ಯ ರೆಡ್ಡಿ ಮತ್ತು ಸಿದ್ದರಾಮಯ್ಯ ಅವರದ್ದು ಒಂದೊಂದು ಬಾಗಿಲು .ಅವರ ಸಾಮ್ರಜ್ಯದಲ್ಲಿ ಈ ಸರಕಾರ ಇದೆ .ಸರಕಾರದ ಕಾರ್ಯ ವ್ಯಪಲ್ಯತೆ ಹದ ಗೆಟ್ಟಿದೆ. ಬೀದಿ ಬೀದಿಗಳಲ್ಲಿ ಕೊಲೆ ನಡೆಯುತ್ತಿದೆ ಮನೆಯೊಂದು ಮೂರು ಬಾಗಿಲು ಅಗಿದೆ. ಇಡೀ ರಾಜ್ಯದಲ್ಲಿ ಕೊಲೆ ಅಗುತ್ತಿದೆ. ಕಲುಬುರ್ಗಿಯವರ ಕೊಲೆ ನಡೆದು ಇನ್ನೂ ಕೂಡಾ ಹಂತಕರ ಸುಳಿವೆ ಇಲ್ಲ.ಇದೀಗ ಪತ್ರಕರ್ತರಾದ ಗೌರಿ ಲಂಕೇಶ್ ಅವರ ಕೊಲೆ ನಡೆದಿದೆ ಅವರ ಹತ್ಯೆಯನ್ನು ಮಾಡಿದವರನ್ನು ಪತ್ತೆ ಹಚ್ಚಲು ಸರಕಾರ ಇನ್ನೂ ಸರಕಾರ ಎಚ್ಚೆತ್ತಿಲ್ಲ ಕಗ್ಗೊಲೆಗಳ ರಾಜ್ಯದಲ್ಲಿ ನಾವು ಬದುಕುತಿದ್ದೇವೆ ಎಂಬುದಾಗಿ ತಿಳಿಸಿದರು.
ಈಶ್ವರಪ್ಪ ಮಾತನಾಡಿ….. ರಾಹುಲ್ ಗಾಂಧಿ ಒಬ್ಬ ಬಚ್ಚಾ,ಅತನಿಗೆ ಅರ್ ಎಸ್ ಎಸ್ ಭಾರತ ಮಾತೆ ಗೊತ್ತಿಲ್ಲ. ಅವರ ತಾಯಿ ಸೋನಿಯ ಗಾಂಧಿಗೂ ಇಲ್ಲಿನ ಸಂಸ್ಕøತಿ ತಿಳಿದಿಲ್ಲ .ರಾಹುಲ್ ಅವರಿಗೆ ರಾಹು ಹಿಡಿದು ಕಾಗ್ರಸ್ ಸರ್ವನಾಶವಾಗಲಿದೆ ಎಂಬುದಾಗಿ ತಿಳಿಸಿದರು.
ಸಂಸದ ಪ್ರಹ್ಲಾದ ಜೋಷಿ…..ರಾಹುಲ್ ಮತ್ತು ಸಿದ್ದರಾಮಯ್ಯ ಅವರಲ್ಲಿ ನಾನು ಕೇಳುತ್ತಾ ಇದ್ದೇನೆ. ಸಿಮಿಯನ್ನು ಮುಂಬೈ ಸ್ಫೋಟದ ನಂತರ ನಿಷೇಧಿಸಿದ್ದು ಅದು ನಿಷೇಧದ ನಂತರ ಹೊಸ ರೂಪದಲ್ಲಿ ಪಿಎಪ್ಐ ಅಗಿ ಮೂಡಿ ಬಂದಿದೆ. ಅಂತಹ ಭಯೋತ್ದಾದನೆಯನ್ನು ನಡೆಸಿದವರು ಅವರು. ಆ ಸಂಘಟನೆಯನ್ನು ನೀವು ರಾಜ್ಯದಲ್ಲಿ ನಿಷೇಧ ಮಾಡಿ ನೋಡಿ. ಎಂದವರು ತಿಳಿಸಿದರು.
ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ….. ಹೋರಾಟ ಮಾಡುವುದು ನಮ್ಮ ಹಕ್ಕು ಅ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಮಾಡಿರುವುದು ಈ ರಾಜ್ಯ ಸರಕಾರ ಮಾತ್ರ. ರಾಷ್ಟ್ರ ಭಕ್ತಿಯನ್ನು ಮಾಡಿಕೊಂಡು ಇರುವವರನ್ನು ಬಂಧಿಸಿ ಅವರನ್ನು ಕೊಲೆಗಡುಕರಂತೆ ಬಿಂಬಿಸುವ ಈ ಸರಕಾರವನನು ಖಂಡಿಸುತ್ತೇವೆ . ಎಂಬುದಾಗಿ ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ….ರಾಜ್ಯದಲ್ಲಿ ಯುಡಿಯೂರಪ್ಪ ನೇತೃತ್ವದ ಸರಕಾರ ಅಡಳಿತಕ್ಕೆ ಬರುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರ ದ್ರೋಹ,ಭಯೋತ್ದಾದನೆಯನ್ನು ಮಾಡುವ ಸಿಮಿ ಸಂಘಟನೆಯಂತಹ ಸಂಘಟನೆಯನ್ನು ನಿಷೇಧಿಸಲು ಈ ಕ್ಷಣವೇ ಪಣ ತೊಡುತ್ತೇವೆ.
ಬಿಜೆಪಿ ಯುವಮೋರ್ಚ ವತಿಯಿಂದ ಹಮ್ಮಿಕೊಂಡ ಮಂಗಳೂರು ಚಲೋ ಕಾರ್ಯಕ್ರಮದಲ್ಲಿ ನಗರದಜ್ಯೋತಿ ವೃತ್ತದಲ್ಲಿ ಸಮಾವೇಶ ನಡೆಸಿ ನಂತರ ಸಂಸದ ನಳಿನ್ ಕುಮಾರ ಕಟೀಲು ಬೇಕ್ ರ್ಯಾಲಿಗೆ ಶಾಥ್ ನೀಡಿದರು. ಅಶೋಕ್ ಅವರನ್ನು ತಡೆದು ಬೈಕನನು ವಶಪಡಿಸಿದರು. ಜಾಥಾ ನಡೆಇಗೆಯಲ್ಲಿ ಸಹಸ್ರರು ಕಾರ್ಯಕರ್ತರು ಸರಕಾರದ ವಿರುದ್ದ ಘೋಷನೆ ಕೂಗಿ ಜಿಲ್ಲಾಧಿಕಾರಿ ಕಚೇರಿಗೆ ಬೈಕ್ ರ್ಯಾಲಿ ನಡೆಸಲು ತೊಡಗಿದಾಗ ಪೊಲೀಸರು ರ್ಯಾಲಿಯನ್ನು ಅಲ್ಲೇ ತಡೆದರು. ಬ್ಯಾರಿಕೆಡ್ ಗಳನ್ನು ಮುನ್ನುಗಿದಾಗ ಕಾರ್ಯಕರ್ತರನ್ನು ಬಂಧಿಸಲಾಯಿತು.






























