UN NETWORKS
ಮಂಗಳೂರು: ದ.ಕ.ಜಿಲ್ಲಾ ಸುನ್ನೀ ಜಂಇಯತುಲ್ ಉಲಮಾ ದ ವತಿಯಿಂದ ತ್ರಿವಳಿ ತಲಾಖ್ ವಿವರಣಾ ಸಮಾವೇಶ ಮತ್ತು ಸ್ನೇಹ ಸಂವಾದ ಕಾರ್ಯಕ್ರಮವು ದಿನಾಂಕ 09 – 09 – 2017 ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಮಂಗಳೂರು ಸೂರ್ಯ ಹೋಟೇಲ್ ಸಭಾಂಗಣದಲ್ಲಿ ಜರಗಲಿದೆ. ಅಲ್ ಹಾಜ್ ಮುಹಮ್ಮದಲಿ ಫೈಝಿ ಬಾಳೆಪುಣಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಲಿದ್ದು, ಯು.ಕೆ.ಮುಹಮ್ಮದ್ ಸಅದಿ ವಳವೂರು ಉದ್ಘಾಟಿಸಲಿದ್ದಾರೆ.ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ದಿಕ್ಸೂಚಿ ಭಾಷಣ ಹಾಗೂ ಟಿ.ಯಂ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ವಿಷಯ ಮಂಡನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ವಾಲೆಮುಂಡೋವು ಮಹ್ಮೂದುಲ್ ಫೈಝಿ, ಇಬ್ರಾಹಿಂ ಫೈಝಿ ಕನ್ಯಾನ, ಇಬ್ರಾಹಿಂ ಮದನಿ ಮಂಚಿ, ಖಾಸಿಂ ಮುಸ್ಲಿಯಾರ್ ಕರಾಯ, ಆದಂ ಅಹ್ಸನಿ, ಡಿಕೆ ಉಮರ್ ಸಖಾಫಿ, ಕಂಬಳ ಬೆಟ್ಟು, ಅಬ್ದುರ್ರಶೀದ್ ಝೈನಿ ಸಖಾಫಿ, ಜಿ.ಯಂ. ಮುಹಮ್ಮದ್ ಕಾಮಿಲ್ ಸಖಾಫಿ , ಆತೂರು ಸಅದ್ ಮುಸ್ಲಿಯಾರ್, ಕೆಕೆಯಂ ಕಾಮಿಲ್ ಸಖಾಫಿ, ಸಿದ್ದೀಖ್ ಸಖಾಫಿ ಮೂಳೂರು, ಸಿರಾಜುದ್ದೀನ್ ಸಖಾಫಿ,ಕನ್ಯಾನ ಮುಂತಾದ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮ ದಲ್ಲಿ ಮುಸ್ಲಿಂ ಹಾಗೂ ಇತರ ಧರ್ಮಿಯರಿಗೆ ಸಂಶಯ ನಿವಾರಣೆ ಗೆ ಮುಕ್ತ ಅವಕಾಶ ವಿದ್ದು ಆಸಕ್ತರು ಪ್ರಶ್ನೆ ಗಳನ್ನು ಕೇಳಲು ಅವಕಾಶ ವಿದೆ. ಕಾರ್ಯಕ್ರಮ ದ ನೇರ ಪ್ರಸಾದ ಸಿಲ್ ಸಿಲಾ ಮೀಡಿಯಾ ದಲ್ಲಿ ನೇರಪ್ರಸಾರ ವಿದ್ದು ಯೂ ಟೂಬ್ ನಲ್ಲಿ ಸಾರ್ವಜನಿಕರು ವೀಕ್ಷಿಸಬಹುದು. ಕನ್ನಡ ಭಾಷೆಯ ಲ್ಲಿ ಕಾರ್ಯಕ್ರಮ ನಡೆಯುವುದರಿಂದ ಇದರ ಸದುಪಯೋಗ ಎಲ್ಲರು ಪಡೆದು ಕೊಳ್ಳಬೇಕೆಂದು ಸುನ್ನೀ ಸಾಹಿತ್ಯ ಮಂಡಳಿ, ಮಂಗಳೂರು ಇದರ ಅಧ್ಯಕ್ಷ ಅಬೂ ಶಝ ರವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.



