Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಉಳ್ಳಾಲ: ಸೌಹಾರ್ದತೆಗೆ ಸಾಕ್ಷಿಯಾದ ಈದ್ ಸ್ನೇಹ ಸಮ್ಮಿಲನ

UllalaVaniBy UllalaVaniSeptember 6, 2017No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ಶಾಂತಿ ಕದಡುವಂತಹ ಘಟನೆಗಳು ನಡೆಯುವ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಸಮಿತಿ ಎಲ್ಲಾ ಜಾತಿ ಧರ್ಮದವರನ್ನು ಕರೆದು ಈದ್ ಸ್ನೇಹ ಸಮ್ಮಿಲನ ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯ. ಇಂತಹ ಕಾರ್ಯಕ್ರಮವು ಸೌಹಾರ್ದತೆಯನ್ನು ಉಳಿಸಲು ಪೂರಕವಾಗಲಿದೆ ಎಂದು ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದ್ದಾರೆ.

DSC_0187

DSC_0189

DSC_0190

DSC_0191

DSC_0192

DSC_0194

DSC_0195

DSC_0196

DSC_0198

DSC_0199

DSC_0201

DSC_0202

DSC_0203

DSC_0204

ಉಳ್ಳಾಲ ಕೇಂದ್ರ ಜುಮಾ ಮಸೀದಿ ಹಾಗೂ ಸಯ್ಯದ್ ಮದನಿ ದರ್ಗಾ ಆಶ್ರಯದಲ್ಲಿ ಸೋಮವಾರ ದರ್ಗಾ ವಠಾರದಲ್ಲಿ ನಡೆದ ಈದ್ ಸ್ನೇಹ ಸಮ್ಮಿಲನ-2017 ಕಾರ್ಯಕ್ರಮದಲ್ಲಿ ಮಾತನಾಡಿದರು.ವಿವಿಧ ದರ್ಮಗಳು ಇರುವ ಈ ನೆಲದಲ್ಲಿ ವಿವಿಧ ಹಬ್ಬಗಳು ಆಚರಣೆಯಾಗುತ್ತವೆ. ಅವರವರ ವಿಶ್ವಾಸ, ನಂಬಿಕೆಯ ನೆಲೆಯಲ್ಲಿ ಆಚರಣೆಗಳು ನಡೆಯುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ಇಂತಹ ಸ್ನೇಹ ಕೂಟದಿಂದ ಮಾತ್ರ ಸಾಧ್ಯ ಎಂದರು.

ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಮಾತನಾಡಿ ದರ್ಗಾದಿಂದ ಕಳೆದ ಎರಡು ವರ್ಷಗಳಿಂದ ಉಳ್ಳಾಲದಲ್ಲಿ ಶಾಂತಿ, ಸೌಹಾರ್ದತೆ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ, ಇದು ನಿರಂತರ ನಡೆದರೆ ಭಗವಂತ ಪ್ರತಿಫಲ ನೀಡುವುದನ್ನು ಅಲ್ಲಗಳೆಯುವಂತಿಲ್ಲ . ಉಳ್ಳಾಲ ಅಭಿವೃದ್ಧಿ ಹೊಂದುವ ಪ್ರದೇಶವಾಗಿದ್ದರೂ ಸೂಕ್ಷ್ಮ ಪ್ರದೇಶ ಎನ್ನುವ ಹೆಸರು ಬಂದಿರುವುದರಿಂದ ಉದ್ಯಮ ಸ್ಥಾಪನೆಗಾಗಿ ಸರ್ಕಾರ ಜಮೀನು ಮೀಸಲಿಟ್ಟರೂ ಪ್ರಯೋಜನಕ್ಕೆ ಬಂದಿಲ್ಲ, ದರ್ಗಾ ಮುಖಾಂತರ ಶಾಂತಿ ಸ್ಥಾಪನೆಯಾಗಬೇಕಿದೆ, ವೇದಿಕೆಗಳಲ್ಲಿ ಭಾಷಣ ಮಾಡುವವರೂ ಪಾಲಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು.

ಸೂಕ್ಷ್ಮ ಪ್ರದೇಶ ಎನ್ನುವುದು ಉಳ್ಳಾಲಕ್ಕೆ ಶಾಪವಲ್ಲ, ಯಾರೂ ಭೂಮಿಗೆ ಬರುವಾಗ ಅರ್ಜಿ ಹಾಕಿ ಆಯಾ ಧರ್ಮದಲ್ಲಿ ಹುಟ್ಟುವುದಿಲ್ಲ. ಮತ್ಸರ, ದುಶ್ಚಟ, ದ್ವೇಷ ಎನ್ನುವ ರೋಗ ಮನಸ್ಸಿನಿಂದ ದೂರವಾಗಿ, ಹೆತ್ತವರು, ಹಿರಿಯರನ್ನು ಗೌರವಿಸಿದಾಗ ಸಮಾಜ ಶಾಂತಿಯುತವಾಗಿರುತ್ತದೆ ಎಂದು ಮುಖಂಡ ರವೀಂದ್ರರಾಜ್ ಉಳ್ಳಾಲ್ ತಿಳಿಸಿದರು.

ಪೆರ್ಮನ್ನೂರು ಚರ್ಚ್ ಧರ್ಮಗುರು ಫಾ. ಜೆ.ಪಿ. ಸಲ್ದಾನ ಮಾತನಾಡಿ, ಒಂದೇ ಜಾಗದಲ್ಲಿ ಹಲವು ಧರ್ಮಗಳು ಇರುತ್ತವೆ. ಪ್ರಸಕ್ತ ಇರುವ ಹಿಂದು, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ನಡುವೆ ವಿಚಾರಗಳಲ್ಲಿ ಸಮನ್ವಯತೆ ಇದೆ. ಆದರೆ ಪ್ರತಿಯೊಂದು ಕಾರ್ಯವು ಅವರ ವಿಶ್ವಾಸಕ್ಕೆ ತಕ್ಕ ನಡೆಯುತ್ತದೆ. ಮುಸ್ಲಿಮರು ಕರೆಯುವ ಪ್ರವಾದಿ ಇಬ್ರಾಹಿಂರವರನ್ನು ಕ್ರೈಸ್ತ ಧರ್ಮದಲ್ಲಿ ಅಬ್ರಾಹಂ ಎಂದು ಹೇಳಲಾಗುತ್ತದೆ. ಇದೇ ಪ್ರವಾದಿಯವರು ಹಜ್ ಸಮಯದಲ್ಲಿ ಬಲಿಯರ್ಪಿಸಿದ್ದ ಆಡಿನ ಮಾಂಸವನ್ನು ಬಡವರ, ಸ್ನೇಹಿತರ ಮತ್ತು ಕುಟುಂಬದವರಿಗೆ ಹಂಚಲಾಗಿದೆ ಎಂಬ ವಿಚಾರ ಗ್ರಂಥದಲ್ಲಿದೆ. ಇದಕ್ಕೆ ಕ್ರೈಸ್ತ ಧರ್ಮವು ಪ್ರೇರಣೆ ನೀಡುತ್ತದೆ. ಸಮುದಾಯ, ಕೂಟ ಒಂದೇ ಆದರೆ ಮಾತ್ರ ಶಾಂತಿ ಉಳಿಯಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಬಕ್ರೀದ್ ಹಬ್ಬ ತ್ಯಾಗ, ಬಲಿದಾನದ ಸಂಕೇತವಾಗಿದೆ, ಓರ್ವ ಮನುಷ್ಯನ ಬಲಿ ಪಡೆದು ದೇವನಿಗೆ ಏನೂ ಆಗೋದಿಲ್ಲ, ಆದರೆ ತನ್ನ ಆಜ್ಞೆ ಪಾಲಿಸುವ ಬಗ್ಗೆ ನಡೆದ ಪರೀಕ್ಷೆಯೇ ಹಬ್ಬದ ಆಚರಣೆಯಾಗಿದೆ. ಆದರೆ ಇಂದು ದೇವನ ಆಜ್ಞೆ ಪಾಲಿಸುವ ಬದಲು ತಪ್ಪಿ ನಡೆಯುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ ಎಂದರು.

ನಗರಸಭಾಧ್ಯಕ್ಷ ಹುಸೈನ್ ಕುಂಞಮೋನು, ಪೌರಾಯುಕ್ತೆ ವಾಣಿ ವಿ.ಆಳ್ವ, ನಿತ್ಯಾಧ್ಯರ್ ಚರ್ಚ್‍ನ ಧರ್ಮಗುರು ರೆ.ಫಾ.ಎಲಿಯಾಸ್ ಡಿಸೋಜ, ಉಳ್ಳಾಲ ಶ್ರೀ ವೀರಭದ್ರ ದೇವಸ್ಥಾನದ ಅಧ್ಯಕ್ಷ ಐತಪ್ಪ ಶೆಟ್ಟಿಗಾರ್, ನಗರಾಭಿವೃದ್ಧಿ ಮಂಡಳಿ ಸದಸ್ಯ ಮುರಳಿ ತೊಕ್ಕೊಟ್ಟು, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಕೌನ್ಸಿಲರ್ ಇಸ್ಮಾಯಿಲ್ ಪೊಡಿಮೋನು, ಬಾಜಿಲ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಪೂಜಾರಿ, ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯೀಲ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಸಯ್ಯಿದ್ ಮದನಿ ಅರಬಿ ಟ್ರಸ್ಟ್ ಉಪಾಧ್ಯಕ್ಷ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಅಬ್ಬಾಸ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಇಬ್ರಾಹೀಮ್, ಜತೆ ಕಾರ್ಯದರ್ಶಿ ಎ.ಕೆ ಮೊಹಿಯದ್ದೀನ್, ಕೋಶಾಧಿಕಾರಿ ಹಮೀದ್ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.

ದರ್ಗಾ ಸಮಿತಿ ಸದಸ್ಯ ಫಾರೂಕ್ ಉಳ್ಳಾಲ್ ವಂದಿಸಿದರು. ಅಯೂಬ್ ಮಂಚಿಲ ಕಾರ್ಯಕ್ರಮ ನಿರೂಪಿಸಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

June 30, 2026

ಬೀರಿ ಜಂಕ್ಷನ್‌ ತರಕಾರಿ ಅಂಗಡಿ ಮೇಲೆ ಬಿದ್ದ ಮರ

June 29, 2026

ಜೀವನದ ಹಾಡು ನಿಲ್ಲಿಸಿದ ಜ್ಯೂನಿಯರ್‌ ಎಸ್.ಪಿ ಖ್ಯಾತಿಯ ಚಂದ್ರಹಾಸ್‌ ಸುವರ್ಣ

June 29, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

By UllalaVaniJune 30, 20260

ಉಳ್ಳಾಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮದನಿ ಎಜುಕೇಶನ್ ಅಸೋಸಿಯೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಉಚಿತ…

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; 6 ಮಂದಿ ಮೀನುಗಾರರ ರಕ್ಷಣೆ

June 30, 2026

ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ತಾಲೂಕು ಸಂಚಾಲಕರಾಗಿ ಮೂವರ ಮರುನೇಮಕ

June 30, 2026

ಸುಳ್ಯ : ಜುಲೈ 6 ರಂದು ಸಚಿವ ಯು.ಟಿ. ಖಾದರ್‌ಗೆ ಸಾರ್ವಜನಿಕ ಅಭಿನಂದನಾ ಸಮಾರಂಭ

June 30, 2026
1 2 3 … 1,991 Next
Automatic YouTube Gallery

ನಾಟೆಕಲ್ ಅ*#ಪಘಾ*ತ; ಮಾಜಿ ಪ್ರಯಾಣಿಕನೋರ್ವನ ಸ್ಪೋಟಕ ಕಾಮೆಂಟ್...!!

ನಾಟೆಕಲ್ ಬಸ್ ಅ**ಪಘಾ#ತ;# ಕಾಮೆಂಟ್ ಮಾಡಿದ ಮಾಜಿ ಪ್ರಯಾಣಿಕ;ಪಿ.ಎ.ಕಾಲೇಜು ಬಸ್ ನಿರ್ವಹಣೆ ಕುರಿತು ಕಾಮೆಂಟ್

ಹಾಗಾದರೆ ಆ ಕಾಮೆಂಟ್‌ನಲ್ಲಿ ಏನಿದೆ..??
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ನಾಟೆಕಲ್ ಅ*#ಪಘಾ*ತ; ಮಾಜಿ ಪ್ರಯಾಣಿಕನೋರ್ವನ ಸ್ಪೋಟಕ ಕಾಮೆಂಟ್...!!
Now Playing
ನಾಟೆಕಲ್ ಅ*#ಪಘಾ*ತ; ಮಾಜಿ ಪ್ರಯಾಣಿಕನೋರ್ವನ ಸ್ಪೋಟಕ ಕಾಮೆಂಟ್...!!
ನಾಟೆಕಲ್ ಬಸ್ ಅ**ಪಘಾ#ತ;# ಕಾಮೆಂಟ್ ಮಾಡಿದ ಮಾಜಿ ಪ್ರಯಾಣಿಕ;ಪಿ.ಎ.ಕಾಲೇಜು ಬಸ್ ...
ನಾಟೆಕಲ್ ಬಸ್ ಅ**ಪಘಾ#ತ;# ಕಾಮೆಂಟ್ ಮಾಡಿದ ಮಾಜಿ ಪ್ರಯಾಣಿಕ;ಪಿ.ಎ.ಕಾಲೇಜು ಬಸ್ ನಿರ್ವಹಣೆ ಕುರಿತು ಕಾಮೆಂಟ್

ಹಾಗಾದರೆ ಆ ಕಾಮೆಂಟ್‌ನಲ್ಲಿ ಏನಿದೆ..??
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
Now Playing
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ ಉಳ್ಳಾಲ ವೀರರಾಣಿ ...
ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ.) ವತಿಯಿಂದ
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಭಾಷಣ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ, ಕಾವ್ಯಗಾಯನ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version