Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ವಿಜೃಂಭಣೆಯ ಚತುರ್ಥಿಗೆ ಅದ್ಧೂರಿ ಚಾಲನೆ

UllalaVaniBy UllalaVaniAugust 25, 2017Updated:August 25, 2017No Comments3 Mins Read
Facebook Twitter Pinterest LinkedIn Tumblr Email WhatsApp
ಕೋಟೆಕಾರು ಶ್ರೀ ಶೃಂಗೇರಿ ಮಠದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪನೆಗೊಂಡ ಗೌರಿ-ಗಣೇಶ
Share
Facebook Twitter LinkedIn Pinterest Email WhatsApp

ಗಲ್ಲಿಯಿಂದ ಹಿಡಿದು ದಿಲ್ಲಿಯ ವರೆಗೆ ಪ್ರತಿಯೊಂದು ಹಿಂದೂಗಳು ಆಚರಿಸುವ ಸಂಭ್ರಮದ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಎಲ್ಲಾ ಶುಭ ಕಾರ್ಯಗಳಲ್ಲೂ ಮೊದಲ ಪೂಜೆಯನ್ನು ಪಡೆಯುವ ವಿಘ್ನೇಶ್ವರನ್ನು ಈ ದಿನದಂದು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತದೆ. ವರ್ಷಂಪ್ರತಿಯಂತೆ ಈ ಭಾರಿಯು ಕೂಡ ಸಂಭ್ರಮದ ಗೌರಿ ಗಣೇಶ ಹಬ್ಬ ಮತ್ತೆ ಬಂದಿದೆ. ಸಂಬಂಧಗಳ ನಂಟನ್ನು ಗಟ್ಟಿ ಮಾಡುವ ಚತುರ್ಥಿ ಹಬ್ಬ ಆಚರಿಸುವುದೆಂದರೆ ಹಿಂದೂಗಳಿಗೆ ಅದು ಎಲ್ಲಿಲ್ಲದ ಖುಷಿ. ಅದರಲ್ಲೂ ಕೂಡ ಹಬ್ಬಗಳು ಬಂತೆಂದರೆ ಸಾಕು ಸಂಭ್ರಮ ಸಡಗರ ಮನೆಯಲ್ಲಿಯೂ ಮನದಲ್ಲಿಯೂ ಮೂಡಿರುತ್ತದೆ.

ಮೊನ್ನೆ ಮೊನ್ನೆಯಷ್ಟೇ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸವಿಯನ್ನು ಉಂಡ ನಮಗೆ ಅದರ ಬೆನ್ನ ಹಿಂದೆಯೇ ಗೌರಿ-ಗಣೇಶ ಹಬ್ಬ ಬಂದಿರುವುದು ಇನ್ನೊಂದು ಸಡಗರವೇ ಸರಿ. ಅಷ್ಟಮಿಯ ಸಿಹಿ ಮುಗಿಯುತ್ತ ಬರುತ್ತಿದ್ದಂತೆ ಇದೀಗ ಗೌರಿ ಗಣೇಶ ಹಬ್ಬದ ಸಿಹಿ ಉನ್ನಲು ತಯಾರಾಗುತ್ತಿದ್ದೇವೆ.
ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ಮಹತ್ತರವಾದ ಹಬ್ಬವಾಗಿದ್ದು. ಹಿರಿಯರು ಕಿರಿಯರಿಗೆ ಬಹುಮಾನವಾಗಿ ಕೊಟ್ಟು ಹೋದ ಹಬ್ಬವೆಂದರೂ ತಪ್ಪಗಲಾರದು. ಹಬ್ಬಗಳ ಆಚರಣೆಯಿಂದ ಐಕ್ಯತೆಯ ಭಾವನೆ ಮೂಡಿ ಭಾಂದವ್ಯ ವೃದ್ಧಿಸುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ.
DSC_7872 DSC_7867 DSC_7865 DSC_7862

DSC_7877 DSC_7876DSC_7860

ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 31 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಗಣೇಶನ ಪ್ರತಿಷ್ಠಾಪನೆ ಇಂದು ಬೆಳಿಗ್ಗೆ ನಡೆಯಿತು. ವೇದಮೂರ್ತಿ ಸೋಮೇಶ್ವರ ಶ್ರೀ ಸುಬ್ರಹ್ಮಣ್ಯ ಬಾಶ್ರೀತ್ತಾಯ ಇವರಿಂದ ಗಣೇಶ ವಿಗ್ರಹ ಪ್ರತಿಷ್ಠೆ ನಡೆಯಿತು. ರವೀಂದ್ರ ಕೊಟ್ಟಾರಿ ದೆಕ್ಕಾಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭತ್ತದ ತೆನೆ ಪೂಜೆ ನಡೆದು ನೆರೆದ ನೂರಾರು ಭಕ್ತಾಧಿಗಳಿಗೆ ತೆನೆ ವಿತರಣೆ ನಡೆಯಿತು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.

IMG-20170824-WA0041

ಕೋಟೆಕಾರು ಶ್ರೀ ಶೃಂಗೇರಿ ಮಠದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪನೆಗೊಂಡ ಗೌರಿ-ಗಣೇಶ
ಕೋಟೆಕಾರು ಶ್ರೀ ಶೃಂಗೇರಿ ಮಠದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಪ್ರತಿಷ್ಠಾಪನೆಗೊಂಡ ಗೌರಿ-ಗಣೇಶ

ಹಬ್ಬದ ತಯಾರಿ:

ಯಾವುದೇ ಹಬ್ಬವಾದರೂ ಅದಕ್ಕೆ ಸಂಭ್ರಮದ ತಯಾರಿ ಹಬ್ಬದ ಒಂದು ವಾರದ ಮುಂಚೆಯೆ ನಡೆಯುತ್ತಿರುತ್ತದೆ. ಗೌರಿ ಗಣೇಶ ಹಬ್ಬವೆಂದರೆ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವ ಕಾರಣ ಈ ಹಬ್ಬದ ಸಡಗರ ತುಸು ಜೊರೆ ಎಂದರೆ ತಪ್ಪಗಲಾರದು. ಗೌರಿಯನ್ನು ಮನೆಗೆ ಬರಮಾಡಿಕೊಳ್ಳಲು ಮುತ್ತೈದೆಯರು ಹೊಸ ಬಟ್ಟೆ ಬರೆಗಳನ್ನು ಖರೀದಿಸಿ ಹಬ್ಬದ ದಿನ ಅದನ್ನು ಧರಿಸಿ ದೇವಿಯನ್ನು ಪೂಜೆಯ ಮೂಲಕ ಮನೆಗೆ ಬರಮಾಡಿಕೊಳ್ಳುತ್ತಾರೆ.

ಕಬ್ಬು ತಿನ್ನುವ ಹಬ್ಬ:

ಹಿಂದೂ ಸಂಪ್ರದಾಯದ ಪ್ರಕಾರ ಚತುರ್ಥಿ ಹಬ್ಬವನ್ನು ಗಣೇಶ ಹಬ್ಬ ಎಂದು ಪರಿಗಣಿಸಲಾಗಿದ್ದು ಕಬ್ಬು ಈ ದಿನದ ವಿಶೇಷಗಳಲ್ಲಿ ಒಂದು. ಗಣಪತಿಯ ಶಿರವು ಆನೆಯ ಶಿರವಾದ ಕಾರಣ ಗಜನಾಯಕನನ್ನು ಕಬ್ಬುಗಳಿಂದ ಅಲಂಕರಿಸಲಾಗುತ್ತದೆ. ಈ ಹಬ್ಬದಂದು ಪ್ರತಿಯೊಂದು ಮನೆಯಲ್ಲಿಯೂ ಕೂಡ ಕಬ್ಬನ್ನು ತೋರಣವಾಗಿ ಕಟ್ಟುತ್ತಾರೆ. ಅಷ್ಟೇ ಅಲ್ಲದೆ ಕಬ್ಬಿನಿಂದ ಗಣೇಶನನ್ನು ಮಂಟಪವನ್ನು ಅಲಂಕರಿಸುತ್ತಾರೆ. ಮನೆಗಳಿಗೆ ಕಬ್ಬುಗಳನ್ನು ತಮ್ಮ ವಾಹನಗಳಲ್ಲಿ ಹಿಡಿದುಕೊಂಡು ಹೋಗುವುದನ್ನು ನೋಡಿದರೆ ತಿಳಿಯುತ್ತದೆ ಈ ಹಬ್ಬಕ್ಕೆ ಕಬ್ಬು ಎಷ್ಟು ಪ್ರಾಮುಖ್ಯವೆಂದು. ಅಷ್ಟೆ ಅಲ್ಲದೆ ನಗರಗಳ ಪ್ರಮುಖ ಬೀದಿಗಳಲ್ಲಿ ಕಬ್ಬುಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುವುದನ್ನು ಕಾಣಬಹುದಾಗಿದೆ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ:

ವಿಘ್ನ ವಿನಾಶಕ ಎಂದೆ ಕರೆಯಲ್ಪಡುವ ಏಕದಂತನಿಗೆ ಯಾವುದೇ ಕಾರ್ಯಕ್ರಮದಲ್ಲಿಯೂ ಕೂಡ ಮೊದಲು ಪೂಜೆ ನಡೆಯಬೇಕು ಎಂಬುವುದು ವಾಡಿಕೆ. ಅದರಂತೆಯೇ ಗಣೇಶ ಹಬ್ಬದಂದು ಪ್ರತಿಯೊಂದು ದೇವಸ್ಥಾನಗಳಲ್ಲಿ ವಿನಾಯಕನಿಗೆ ವಿಶೇಷವಾದ ಪೂಜೆಗಳು ನೆರವೇರುತ್ತದೆ. ಸ್ವರ್ಣ ಗೌರಿ ಹಬ್ಬದಂದೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಶುರುವಾಗುತ್ತದೆ. ಈ ದಿನ ದಂದು ಮನೆಯವರೆಲ್ಲರೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳಲ್ಲಿ ಪಾಲ್ಗೋಳುತ್ತಾರೆ. ಪ್ರತಿಯೊಂದು ದೇವಸ್ಥಾನದಲ್ಲಿಯೂ ಕೂಡ ವಿಶೇಷ ಪೂಜೆಯಿದ್ದು ಲೋಕ ಕಲ್ಯಾಣಕ್ಕಾಗಿ ಗಣೇಶನಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ.

ಮನೆಯಲ್ಲಿ ವಿಶಿಷ್ಟ ಭೋಜನ:

ಈ ಹಬ್ಬದಂದು ಪ್ರತಿಯೊಂದು ಹಿಂದೂ ಮನೆಗಳಲ್ಲಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಈ ಹಬ್ಬದಂದು ಮನೆಯ ಗೃಹಿಣಿಯ ಮುಂಜಾನೆಯೇ ಎದ್ದು ಮನೆಯನ್ನೆಲ್ಲಾ ಗುಡಿಸಿ ಸಾರಿಸಿ ರಂಗೋಲಿಯನ್ನು ಇಡುವ ಮೂಲಕ ಹಬ್ಬದ ತಯಾರಿ ನಡೆಯತ್ತದೆ. ಬಾಂಧವ್ಯಗಳನ್ನು ಬೆಸೆಯುವ ಹಬ್ಬಗಳಾದುದರಿಂದ ಮನೆಯವರೆಲ್ಲರೂ ಸೇರಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮನೆವರು ದಿನವಿಡಿ ಗಣೇಶನನ್ನು ಸ್ತುತಿಸುತ್ತ ವಿಧ ವಿಧವಾದ ಅಡುಗೆಗಳನ್ನು ಮಾಡುತ್ತಾರೆ. ಮನೆಯಲ್ಲಿ ಗಣೇಶನಿಗೆ ಪ್ರಿಯವಾದ ಚಕ್ಕುಲಿ, ಕೊಡುಬಲೆ ಕಜ್ಜಾಯ, ಮೊದಕ, ಲಡ್ಡು ಹೀಗೆ ಹತ್ತು ಹಲವಾರು ರೀತಿಯ ಭಕ್ಷಗಳನ್ನು ತಯಾರಿಸಿ ಗಣಪತಿಗೆ ನೆವೈಧ್ಯವಾಗಿ ಇಟ್ಟರೆ ಇನ್ನು ಕೆಲವರು ಅಂಗಡಿಗಳಲ್ಲಿ ಗಣೇಶ ಹಬ್ಬಕ್ಕೆಂದೆ ವಿಶೇಷವಾಗಿ ತಯಾರಿಸಿದ ಸಿಹಿತಿಂಡಿಗಳನ್ನು ತಂದು ದೇವರಿಗೆ ಬಡಿಸುತ್ತಾರೆ ಗಣಪತಿಯನ್ನು ತಿಂಡಿಬೊಕ ಎಂದು ತಮಾಷೆ ಮಾಡುವುದುಂಟು ಕಾರಣ ಗಣಪತಿಗೆ ಸಿಹಿ ಭಕ್ಷಗಳೆಂದರೆ ಎಲ್ಲಿಲ್ಲದ ಪ್ರೀತಿ ಆದ್ದರಿಂದ ಈ ಹಬ್ಬದಂದು ವಿಶಿಷ್ಟ ಭಕ್ಷಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.

ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಕೂರಿಸುವುದು:

ಗಣೇಶ ಹಬ್ಬ ರಾಷ್ಟ್ರೀಯ ಹಬ್ಬವಾದುದರಿಂದ ದೇಶದ ಎಲ್ಲ ಕಡೆಗಳಲ್ಲಿಯೂ ಸಹ ಗಣೇಶ ಹಬ್ಬವನ್ನು ಆಚರಿಸುವುದನ್ನು ಕಾಣುತ್ತೇವೆ. ಅದರಲ್ಲೂ ಸಹ ಮಹಾರಾಷ್ಟ್ರ ಹಾಗೂ ದಕ್ಷಿಣ ಭಾಗಗಳಲ್ಲಿ ಈ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಗಣೇಶ ಹಬ್ಬದಂದು ನಗರದ ಬೀದಿಗಳಲ್ಲಿ ಗಣೇಶ ವಿಗ್ರಹಗಳನ್ನು ಕುಳ್ಳಿರಿಸಿ ವಿವಿಧ ಸಾಂಸ್ಕøತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಸಿ ಸಾರ್ವಜನಿಕರಿಗೆ ಮನೋರಂಜನೆಯನ್ನು ನೀಡುತ್ತಾರೆ. ಸಾರ್ವಜನಿಕವಾಗಿ ಗಣಪತಿಯನ್ನು 3 ಅಥವಾ 7 ದಿನಗಳಲ್ಲಿ ವಿಸರ್ಜಿಸುತ್ತಾರೆ. ಕೆಲವೊಂದು ಮನೆಗಳಲ್ಲಿಯೂ ಕೂಡ ಗಣಪತಿಯ ವಿಗ್ರಹಗಳನ್ನು ಇಡುತ್ತಾರೆ. ಮನೆಯಲ್ಲಿ ಇಟ್ಟ ಗಣಪತಿಯನ್ನು ಅದೇ ದಿನದಂದು ನೀರಿಗೆ ವಿರ್ಸಜಿಸಬೇಕು ಎನ್ನುವುದು ಕೆಲವರ ಮಾತು. ಕೆಲವೊಂದು ಸಂಘ ಸಂಸ್ಥೆಗಳು ಇಡುವ ಗಣಪತಿಯು ಒಂದು ವಾರ ಅಥವಾ ಮೂರು ದಿನಗಳ ನಂತರ ಅತ್ಯಂತ ಸಡಗರಿಂದ ವಿರ್ಸಜಿಸಲಾಗುತ್ತದೆ. ಗಣಪತಿಯ ವಿರ್ಸಜನೆಯನ್ನು ನೋಡಲು ಜನರು ಕ್ಕಿಕ್ಕಿರಿದು ಸೇರುತ್ತಾರೆ.

ಗೌರಿ-ಗಣೇಶ ಹಬ್ಬ ಎರಡನ್ನು ಜತೆಯಲ್ಲಿಯೇ ಆಚರಿಸಲಾಗುತ್ತಿದ್ದು, ಇದು ದೇವರಾಧನೆಯ ಹಬ್ಬವಾದರೂ ಇದರ ಮೂಲತತ್ವ ಸಾಂಸ್ಕ್ರತಿಕ ಹಿನ್ನಲೆಯಿಂದ ಕೂಡಿದೆ. ಯಾವುದೇ ಹಬ್ಬವಾದರೂ ಕೂಡ ಮನೆ ಮಂದಿ ಸೇರಿ ಆಚರಿಸುವುದರೊಂದಿಗೆ ಐಕ್ಯತೆಯ ಭಾವನೆ ಎಲ್ಲರಲ್ಲಿಯೂ ಮೂಡಬೇಕು. ಇಂದು ನಾವು ಆಚರಿಸುವ ಹಬ್ಬದ ಮುಂದಿನ ನಮ್ಮ ಪೀಳಿಗೆ ಇದರ ಮಹತ್ವ ತಿಳಿಯಬೇಕು. ಹಬ್ಬ ಹರಿದಿನಗಳು ಕೇವಲ ಶೀಕಿಯಾಗದೇ ನಮ್ಮ ಧರ್ಮ ನಮ್ಮ ತನವನ್ನು ಎತ್ತಿ ಇಡಿಯಬೇಕು. ಇದು ನಮ್ಮ ಆಶಯ.

UN NETWORS: SPECIAL  STORY

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಪಟ್ಟೋರಿ ಮಸೀದಿ ವತಿಯಿಂದ ವಿಜೃಂಭಣೆಯ ಈದ್ ಮೀಲಾದ್

August 29, 2026

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಿಂದ ನಾಳೆ ಭತ್ತ ಕೃಷಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ

August 29, 2026

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ವೈಭವದ ವರಮಹಾಲಕ್ಷ್ಮಿ ಪೂಜೆ

August 29, 2026
Leave A Reply

Advertise
ಸಂಪರ್ಕಿಸಿ

ಕೋಟೆಕಾರು ಪಟ್ಟಣ ಪಂಚಾಯತ್‌ 80 ನೇ ಸ್ವಾತಂತ್ರೋತ್ಸವ

August 16, 2026

ಮಾಡೂರು ಶಾಲೆಯಲ್ಲಿ ವಿಭಿನ್ನವಾಗಿ ಜರಗಿದ 80 ರ ಸ್ವಾತಂತ್ರ್ಯ

August 16, 2026

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026
All News

ಪಟ್ಟೋರಿ ಮಸೀದಿ ವತಿಯಿಂದ ವಿಜೃಂಭಣೆಯ ಈದ್ ಮೀಲಾದ್

By UllalaVaniAugust 29, 20260

ಉಳ್ಳಾಲ; ಪಟ್ಟೋರಿ ರಹ್ಮಾನಿಯಾ ಜುಮಾ ಮಸೀದಿ ವತಿಯಿಂದ ಈದ್ ಮೀಲಾದ್ ಸಮಾರೋಪ ಕಾರ್ಯಕ್ರಮ ಹಾಗೂ ಮದ್ರಸ ವಿದ್ಯಾರ್ಥಿಗಳ ”ಇಷ್ಖೇ ಮದೀನಾ…

ಮಂಗಳೂರಿಗೆ ಹೈಕೋರ್ಟ್ ಸಂಚಾರಿ ಪೀಠ: ಇದು ಕೇವಲ ವಕೀಲರ ಬೇಡಿಕೆಯಲ್ಲ, ನ್ಯಾಯಕ್ಕೆ ಜನರ ಸಂವಿಧಾನಾತ್ಮಕ ಹಕ್ಕಿನ ಪ್ರಶ್ನೆ

August 29, 2026

ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನಿಂದ ನಾಳೆ ಭತ್ತ ಕೃಷಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ

August 29, 2026

ಗ್ರಾಹಕರಿಗೆ ಉತ್ತಮ ಸೇವೆ ಮೆಸ್ಕಾಂ ಮೆಕ್ಯಾನಿಕ್‌ ಸಂತೋಷ್‌ ಲೋಬೋ ಅವರಿಗೆ ಸಚಿವರಿಂದ ಸನ್ಮಾನ

August 29, 2026
1 2 3 … 2,080 Next
Automatic YouTube Gallery

ಪೊಲೀಸ್ ರೂಟ್ ಮಾರ್ಚ್ | ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್

ಅಹಿತಕರ ಘಟನೆಗಳು ಸಂಭವಿಸದಂತೆ, ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು.
ದೇರಳಕಟ್ಟೆ ನಿತ್ಯಾನಂದನಗರದಿಂದ ಕುತ್ತಾರು ಶ್ರೀ ರಾಜರಾಜೇಶವರಿ ಸಿದ್ಧಿವಿನಾಯಕ ದೇವಸ್ಥಾನದವರೆಗೆ ನಡೆಯಿತು. ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನೇತೃಥ್ವದಲ್ಲಿ ಸಬ್‌ ಇನ್ಸ್‌ ...
ಪೆಕ್ಟರ್‌ ಗಳಾದ ರೇವಣ್ಣ ಸಿದ್ಧಯ್ಯ , ಸಂತೋಷ್ ಹಾಗೂ ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪೊಲೀಸ್ ರೂಟ್ ಮಾರ್ಚ್ | ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್
Now Playing
ಪೊಲೀಸ್ ರೂಟ್ ಮಾರ್ಚ್ | ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್
ಅಹಿತಕರ ಘಟನೆಗಳು ಸಂಭವಿಸದಂತೆ, ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ...
ಅಹಿತಕರ ಘಟನೆಗಳು ಸಂಭವಿಸದಂತೆ, ಹಬ್ಬ ಹರಿದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಉಳ್ಳಾಲ ಠಾಣಾ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು.
ದೇರಳಕಟ್ಟೆ ನಿತ್ಯಾನಂದನಗರದಿಂದ ಕುತ್ತಾರು ಶ್ರೀ ರಾಜರಾಜೇಶವರಿ ಸಿದ್ಧಿವಿನಾಯಕ ದೇವಸ್ಥಾನದವರೆಗೆ ನಡೆಯಿತು. ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನೇತೃಥ್ವದಲ್ಲಿ ಸಬ್‌ ಇನ್ಸ್‌ ...
ಪೆಕ್ಟರ್‌ ಗಳಾದ ರೇವಣ್ಣ ಸಿದ್ಧಯ್ಯ , ಸಂತೋಷ್ ಹಾಗೂ ಪೊಲೀಸ್‌ ಸಿಬ್ಬಂದಿ ಭಾಗವಹಿಸಿದ್ದರು.

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಗ್ರಾಮಚಾವಡಿ: ಬಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮದಿನಾಚರಣೆ
Now Playing
ಗ್ರಾಮಚಾವಡಿ: ಬಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮದಿನಾಚರಣೆ
ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ವತಿಯಿಂದ ನಡೆದ ...
ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 172ನೇ ಜನ್ಮದಿನೋತ್ಸೋವ

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version