UN NETWORKS
ಮಾಡೂರು: ಶತ್ರು ರಾಷ್ಟ್ರವಾದ ಚೀನಾದ ವಸ್ತುಗಳನ್ನು ಮನೆ ಮನೆಯಲ್ಲೂ ಹೆಚ್ಚಾಗಿ ಬಳಕೆ ಮಾಡುವ ಮೂಲಕ ಪರೋಕ್ಷವಾಗಿ ಚೀನಾ ದೇಶಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರು ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ದೇಶಿಯ ಉತ್ಪನ್ನಗಳನ್ನು ಹೆಚ್ಚಾಗಿ ಉಪಯೋಗಿಸಬೇಕಿದೆ ಎಂದು ಡಾ. ಅಣ್ಣಯ್ಯ ಕುಲಾಲ್ ಅಭಿಪ್ರಾಯಪಟ್ಟರು.

ಅವರು ಶಬರಿ ಫ್ರೆಂಡ್ಸ್ ಮಾಡೂರು ಇವರ ಆಶ್ರಯದಲ್ಲಿ 14ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮಾಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಮುದ್ದು ಕೃಷ್ಣ-2017 ಪುಟಾಣಿಗಳ ಪ್ರತಿಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಷ್ಟ ಸುಖವನ್ನು ಸಮ ಪ್ರಮಾಣದಲ್ಲಿ ಸ್ವೀಕರಿಸುವವರು ಮಾತ್ರ ಜೀವನದಲ್ಲಿ ಏಳಿಗೆಯ ಮೆಟ್ಟಿಲನ್ನು ಏರಲು ಸಾಧ್ಯ. ಸಾಧನೆಗೆ ಬಡವರು ಶ್ರೀಮಂತರು ಎಂಬ ಭೇದವಿಲ್ಲ. ಸಾಧನೆ ಮಾಡುವವರು ಮಾತ್ರ ಸಾಧಕರಾಗಿ ಹೊರ ಬರಲು ಸಾಧ್ಯ. ಸ್ವದೇಶಿ ವಸ್ತುಗಳ ಬದಲಿಗೆ ವಿದೇಶಿ ವಸ್ತುಗಳ ಬಳಕೆ ಹೆಚ್ಚಾಗುತ್ತಿದ್ದು ಆಹಾರ ಪದ್ದತಿ, ಉಡುಗೆ ತೊಡುಗೆ ಎಲ್ಲವನ್ನು ಪ್ರಾಶ್ಚ್ಯತೀಕರಣ ಆಕ್ರಮಿಸುತ್ತಿದೆ. ಈ ಮೂಲಕ ದೇಶದ ಸಂಸ್ಕøತಿ ಮಾಯವಾಗುತ್ತಿದ್ದು ಅದರ ಜೊತೆಗೆ ಮಾನವೀಯತೆಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು.
ಅಂದು ಶ್ರೀ ಕ್ರಷ್ಣ ಪರಮಾತ್ಮ ಹೇಳಿಕೊಟ್ಟ ರಾಜಕೀಯ ಮಾರ್ಗವನ್ನು ಪ್ರಸುತ್ತ ರಾಜಕಾರಣಿಗಳು ಅನುಸರಿಸುತ್ತಿದ್ದಾರೆ. ಯುರೋಪ್ ಅಮೇರಿಕದಂತಹ ದೇಶಗಳು ಇಂದು ಕೃಷ್ಣ ಭಗವದ್ಗೀತೆಯ ಸಾಲುಗಳನ್ನು, ಶ್ಲೋಕಗಳನ್ನು ಪಿಎಚ್ಡಿಗಳ ಮೂಲಕ ಅಧ್ಯಯನ ಮಾಡುತ್ತಿದ್ದಾರೆ. ಭಾರತೀಯ ಸಂಸ್ಕøತಿಗಳು ಬದಲಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮುದ್ದು ಕೃಷ್ಣ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಸಂಸ್ಕøತಿಯ ಅನಾವರಣವಾಗುತ್ತಿದ್ದು ಇದು ಕೇವಲ ಸ್ಪರ್ಧೆಗೆ ಮಾತ್ರವಲ್ಲದೇ ಕೃಷ್ಣನ ನೃತ್ಯ ಹಾಗೂ ಹಾಡುಗಳ ಮೂಲಕ ಶ್ರೀ ಕೃಷ್ಣ ಪರಮಾತ್ಮನ ಚರಿತ್ರೆಯನ್ನು ತಿಳಿಯಲು ಸಹಕಾರಿಯಾಗುತ್ತದೆ ಎಂದರು.
ಶ್ರೀ ಕ್ಷೇತ್ರ ಉದ್ಯಾವರ ಮಾಡದ ಅಣ್ಣ ದೈವ ಪಾತ್ರಿ ರಾಜ ಬೆಳ್ಚಪಾಡ
ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪಿ.ಕೃಷ್ಣ ಗಟ್ಟಿ ಸೋಮೇಶ್ವರ ಅಧ್ಯಕ್ಷತೆಯನ್ನು ವಹಿಸಿದ್ದರು. ಆರ್ ಎಸ್ ಎಸ್ ವ್ಯವಸ್ಥಾಪನಾ ಪ್ರಮುಖ್ ಪ್ರೊ. ವಿ. ಜಯರಾಮ್ ಧಾರ್ಮಿಕ ಉಪನ್ಯಾಸ ನೀಡಿದರು.
ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು, ಸುರೇಶ್ ಕೆ.ಪಿ, ಮೋಹನ್ ಯು.ಶೆಟ್ಟಿ, ಅನಿಲ್ ದಾಸ್, ತುಳು ಚಲನಚಿತ್ರ ನಟ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ರಾಷ್ಟ್ರೀಯ ಪವರ್ ಲಿಫ್ಟರ್ ಹೇಮಚಂದ್ರ ಬಬ್ಬುಕಟ್ಟೆ , ಕೆ. ಸೀತಾರಾಮ್ ಬಂಗೇರ ಕೊಲ್ಯ, ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ, ಪದ್ಮನಾಭ ಪಾದೆ, ಪ್ರವೀಣ್ ಕುಮಾರ್ ಉಳ್ಳಾಲ್, ನವೀನ್ ಎಸ್. ಕೋಟೆಕಾರು ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತ ಕ್ರೀಡಾಪಟು ಸ್ವಸ್ತಿಕ್ ಮಾಡೂರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಲತೀಶ್ ಕುಲಾಲ್ ಮಾಡೂರು ಸ್ವಾಗತಿಸಿದರು. ಸುಖೇಶ್ ಮಂಜನಾಡಿ ಹಾಗೂ ಜಯಂತ್ ಸಂಕೋಳಿಗೆ ಕಾರ್ಯಕ್ರಮ ನಿರೂಪಿಸಿದರು.


