ಉಳ್ಳಾಲ ನ್ಯೂಸ್ ನೆಟ್ವರ್ಕ್
ಸೋಮೆಶ್ವರ: ಸೋಮೆಶ್ವರ ಆನಂದಾಶ್ರಮ ಫ್ರೌಢಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಆನಂದಾಶ್ರಮ ಪ್ರೌಢಶಾಲೆ, ಪರಿಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ಪರಿಜ್ಞಾನ ವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿ ತಂದ ಆಟಿತಿಂಗಳ ವಿಶೇಷ ತಿನಿಸುಗಳಾದ ಪತ್ರೊಡೆ, ಉಪ್ಪಡ್ ಪಚ್ಚಿಲ್, ಮೆಂತೆ ಉಂಡೆ, ಪೋಡಿ, ಪತ್ತೋಳಿ, ಗಾರಿಗೆ, ಹುರುಳಿ ಚಟ್ನಿ, ಸೇಮೆದಡ್ಯಾ, ಸೊಪ್ಪು ಪಲ್ಯ ಇತ್ಯಾದಿ ಇಪ್ಪತ್ತಕ್ಕೂ ಹೆಚ್ಚು ತಿನಿಸುಗಳನ್ನು ಪ್ರದರ್ಶಿಸಿ ಉತ್ತಮ ಆರೋಗ್ಯಕ್ಕಾಗಿ ಅವುಗಳ ಸೇವನೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರು ಜಿಲ್ಲಾ ಶಾರೀರಿಕ್ ಪ್ರಮುಖ್ ನಾಗೇಶ್ ಕುಂಪಲ, ಸಾರಸ್ವತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎಲ್. ಬೊಂಡಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಎ.ಎಸ್. ರಾಮಚಂದ್ರ ರಾವ್, ಪರಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಕ್ರಮ್ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಗುರುಮೂರ್ತಿ ಪಿ. , ಪರಿಜ್ಞಾನ ವಿದ್ಯಾಲಯದ ಪುಟಾಣಿ ವಿದ್ಯಾರ್ಥಿಗಳ ಅಜ್ಜ-ಅಜ್ಜಿಯಂದಿರು ಉಪಸ್ಥಿತರಿದ್ದರು.




