ಉಳ್ಳಾಲ ನ್ಯೂಸ್ ನೆಟ್ವರ್ಕ್
ಕಟೀಲು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಕಾವ್ಯ ಎಂಬ ಬಾಲಕಿಯ ಅನುಮಾನಾಸ್ಪದ ಸಾವಿಗೆ ನ್ಯಾಯ ಒದಗಿಸಿ ಕೊಡುವಂತೆ ಮಡ್ಯಾರ್ ಫ್ರೆಂಡ್ಸ್ ಮಡ್ಯಾರ್ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಇಂದು ನಡೆಯಿತು.
ಬಾಲಕಿಯ ಸಾವಿಗೆ ಕಾರಣಕರ್ತರಾದವರನ್ನ ಬಂಧಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.ಒಂದು ವೇಳೆ ಈ ತನಿಖೆಯಲ್ಲಿ ಸೂಕ್ತ ನ್ಯಾಯ ದೊರಕದಿದ್ದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರೇ ಆ ಪಾಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.ಒಂದು ವೇಳೆ ಪ್ರಕರಣವನ್ನ ಮುಚ್ಚಿಹಾಕಲು ಪ್ರಯತ್ನಿಸಿದರೆ ನಾವು ಯಾವುದೇ ತರಹದ ಪ್ರತಿಭಟನೆಗೆ ಸಿದ್ದ ಹಾಗೂ ಈ ವಿಷಯದಲ್ಲಿ ಯಾವುದೇ ಸಂಘಟನೆ ಪ್ರತಿಭಟನೆ ಹಮ್ಮಿಕೊಂಡರೆ ನಮ್ಮ ಬೆಂಬಲ ಯಾವಾಗಲೂ ಅವರಿಗೆ ಇದೆ ಎಂದು ತಿಳಿಸಿದರು.
ಸಂಪತ್ ಮಡ್ಯಾರ್ ಪ್ರ.ಕಾರ್ಯದರ್ಶಿ ಯುವ ಕಾಂಗ್ರೆಸ್ ಮಂಗಳೂರು ವಿಧಾನ ಸಭಾ. ಚಂದ್ರಹಾಸ್ ರೈ ಪಿಲಾರ್ ಕಾರ್ಯದ್ಯಕ್ಷರು ಕ.ರ.ವೇ ದ.ಕ ಜಿಲ್ಲೆ ರಂಜಿತ್ ಮಡ್ಯಾರ್,ನಿರಂಜನ್ ಮಡ್ಯಾರ್,ರಾವುಲ್ ಅಂಚನ್,ದೀರಜ್ ಶೆಟ್ಟಿ ಮಡ್ಯಾರ್,ಪವನ್ ಮಡ್ಯಾರ್, ಜಾನೇಶ್ ಮಡ್ಯಾರ್, ಆಕಾಶ್ ಶೆಟ್ಟಿ ಮಡ್ಯಾರ್, ಲೋಯಿಡ್ ಮಡ್ಯಾರ್,ಅಗಷ್ಟಿನ್ ಮಡ್ಯಾರ್,ನೀರಜ್ ಮಡ್ಯಾರ್,ದೀರಜ್ ಕುಲಾಲ್ ಮಡ್ಯಾರ್.



