ಉಳ್ಳಾಲ ನ್ಯೂಸ್ ನೆಟ್ವರ್ಕ್
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ 50ಕೋಟಿ ರೂ ಬಿಡುಗಡೆಗೊಳಿಸಿದ್ದು ಜಪಾನಿನ ವಿವಿಗಳಲ್ಲಿ ಇರುವ ಮಾದರಿಯಲ್ಲಿ ಪ್ರಥಮವಾಗಿ ಕರ್ನಾಟಕದಲ್ಲಿ ಸುಧಾರಿತ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ತಿಳಿಸಿದ್ದಾರೆ.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಹೊಸ ಸನೆಟ್ ಸಭಂಗಣದಲ್ಲಿ ಗುರುವಾರ ನಡೆದ ಶೈಕ್ಷಣಿಕ ಮಂಡಳಿಯ 2017-18ನೇ ಸಾಲಿನ ಪ್ರಥಮ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು.
ಸುಧಾರಿತ ವಿಜ್ಞಾನ ಸಂಶೋಧನೆಗೆ ಸುಮಾರು 120 ಕೋಟಿಯಷ್ಟು ಖರ್ಚು ಅಂದಾಜಿಸಲಾಗಿದ್ದು ಈ ಬಗ್ಗೆ 120 ಕೋಟಿ ಅನುದಾನವನ್ನು ಬಿಡಗಡೆಗೊಳಿಸಬೇಕೆಂದು ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂಧಿಸಿದ ಸರಕಾರ 100 ಕೋಟಿ ಹಣವನ್ನು ಬಿಡುಗೆಗೊಳಿಸುವ ವಿಶ್ವಾಸ ನೀಡಿದೆ. ಈ ಪೈಕಿ 50 ಕೋಟಿಯನ್ನು ಬಿಡಗಡೆಮಾಡಿ ನಂತರ ಹಂತ ಹಂತವಾಗಿ 25ಕೋಟಿ ರೂ.ಗಳಂತೆ ಅನುದಾನವನ್ನು ಸರಕಾರ ಬಿಡುಗಡೆ ಮಾಡಲಿದೆ. ಸಂಶೋಧನ ಕೇಂದ್ರ ಸ್ಥಾಪನೆಗೆ ನೆಲ್ಯಾಡಿಯಲ್ಲಿ 26 ಎಕರೆ ಜಾಗವನ್ನು ನೀಡಿದೆ. ಬೆಳಪುವಿನಲ್ಲಿ 20ಎಕರೆ ಜಾಗದಲ್ಲಿ ವಿವಿ ಸಂಶೋಧನಾ ಕೇಂದ್ರ ಸ್ಥಾಪನಗೆ 2015 ರಲ್ಲಿ ಶಿಲಾನ್ಯಾಸ ನಡೆದಿತ್ತು ಇದೀಗ ಹೆಚ್ಚುವರಿ 15ಎಕರೆ ಜಾಗವನ್ನು ಸರಕಾರ ನೀಡಿದೆ. ಕೊಣಾಜೆಯಲ್ಲಿ ವಿ.ವಿ ಇರುವ 40 ಎಕರೆ ಜಾಗವನ್ನು ವಿ.ವಿ ಹೆಸರಿಗೆ ಮಾಡಬೇಕೆಂಬ ಬಗ್ಗೆ ಅಂತಿಮ ಮಟ್ಟದ ಶಿಫಾರಸ್ಸನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಅಂತಿಮ ಮಟ್ಟದ ತೀರ್ಮಾನ ಬರಬೇಕಿದೆ.
ವಿವಿಧ ಕಾಲೇಜುಗಳಿಗೆ ಸಂಯೋಜನಾ ಮಂಜೂರಾತಿ
ಪೂತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಜ್ಯುಕೇಶನ್, ಮಾರ್ ಇವೇನಿಯಸ್ ಕಾಲೇಜು ಆಫ್ ಎಜ್ಯುಕೇಶನ್ ಕುಂತೂರು, ಮಂಗಳೂರಿನ ಕರಾವಳಿ ಕಾಲೇಜು ಆಫ್ ಎಜ್ಯಕೇಶನ್ , ಬೆಳ್ತಂಗಡಿಯ ಪ್ರಸನ್ನ ಕಾಲೇಜ್ ಆಫ್ ಎಜ್ಯೂಕೇಶನ್, ಕುಂದಾಪುರ ಬ್ಯಾರೀಸ್ ಕಾಲೇಜು ಆಫ್ ಎಜ್ಯುಕೇಶನ್, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಎಜ್ಯುಕೇಶನ್, ಆಳ್ವಾಸ್ ಕಾಲೇಜು ಆಫ್ ಎಜುಕೇಶನ್ ಮೂಡಬಿದಿರೆ, ಆಳ್ವಾಸ್ ಕಾಲೇಜು ಆಫ್ ಫಿಸಿಕಲ್ ಎಜ್ಯುಕೇಶನ್, ಮಂಗಳೂರು ಸಂತ ಅಲೋಷಿಯಸ್ ಇನ್ಸ್ಟಿಟ್ಯೂಟ್ ಆಫ್ ಎಜ್ಯುಕೇಶನ್, ಪ್ರೇಮಕಾಂತಿ ಕಾಲೇಜ್ ಆಫ್ ಎಜ್ಯುಕೇಶನ್ , ಶ್ರೀನಿವಾಸ್ ಕಾಲೇಜ್ ಆಫ್ ಎಜ್ಯುಕೇಶನ್, ಲೀಲಾವತಿ ಶೆಟ್ಟಿ ಕಾಲೇಜ್ ಆಫ್ ಎಜ್ಯುಕೇಶನ್ , ಅಮೃತ ಕಾಲೇಜ ಆಫ್ ಎಜ್ಯುಕೇಶನ್ ಪಡೀಲ್, ಶ್ರೀ ಗೋಕರ್ಣನಾಥೇಶ್ವರ ಕಾಲೇಜ್ ಆಫ್ ಎಜ್ಯುಕೇಶನ್ ಗೆ 2017-18ನೇ ಸಾಲಿನಲ್ಲಿ ಮುಂದುವರಿಕೆ ಸಂಯೋಜನಾ ಮಂಜೂರಾತಿ ಮಾಡಲಾಗಿದೆ.
ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೇನೇಜ್ಮೆಂಟ್ ವಿದ್ಯಾಸಂಸ್ಥೆಗೆ ಪಿಎಚ್ಡಿ ಇನ್ ಮೆನೇಜ್ಮೆಂಟ್ ಕೋರ್ಸು , ಪದವಿ ಮಟ್ಟದ ಪ್ರಥಮ ವರ್ಷದ ಕೋರ್ಸುಗಳ ಕನ್ನಡ ಭಾಷೆ, ಮತ್ತು ಕನ್ನಡ ಐಚ್ಛಿಕ ವಿಷಯದ ಪಠ್ಯಕ್ರಮದ ಅನುಮೋದನೆಗೆ, ಪಿ.ಎಚ್,ಡಿ ಇನ್ ಸ್ಪೀಚ್ ಂಡ್ ಹಿಯರಿಂಗ್ ಪದವಿಯ ಕೋರ್ಸು ವರ್ಕೀನ ಪರಿಷ್ಕ್ಟತ ಪಠ್ಯಕ್ರಮದ ಅನುಮೋದನೆಗೆ, ಎಂ.ಎ ಇತಿಹಾಸ ಪದವಿಯ ಮೂರು ಮತ್ತು ನಾಲ್ಕನೇ ಸೆಮಿಸ್ಟರ್ ಗಳಿಗೆ ಆಯ್ಕೆ ಆಧಾರತ ಶ್ರೇಯಾಂಕ ಪದ್ದಥಿಯಲ್ಲಿ ರಚಿಸಲಾದ ಪಠ್ಯಕ್ರಮದ ಅನುಮೋದನೆಗೆ, ಎರಡು ವರ್ಷದ ಬಿ.ಇಡಿ ಪದವಿ ನಾಲ್ಕನೇ ಸೆಮಿಸ್ಟರಿನ ಪರಿಷ್ಕøತರ ಪಠ್ಯಕ್ರಮದ ಅನುಮೋದನೆ ಬಗ್ಗೆ ಚರ್ಚಿಸಲಾಯಿತು.
ನೂತನ ಕೋರ್ಸುಗಳು :
ಸೈಬರ್ ಸೆಕ್ಯೂರಿಟಿ(ಸೈಬರ್ ಭದ್ರತೆ) ,ಹಣಕಾಸು ಮತ್ತು ಬ್ಯಾಂಕಿಂಗ್ ತಂತ್ರಜ್ಞಾನದ ಕುರಿತು ಒಂದು ವರ್ಷದ ಸ್ನಾತಕೋತ್ತರ ಡಿಪ್ಲೋಮ , ಎರಡು ವರ್ಷದ ವೈದ್ಯಕೀಯ ಭೌತಶಾಸ್ತ್ರ ಎಂಬ ವಿಷಯದ ಕುರಿತ ನೂತನ ಕೋರ್ಸುಗಳನ್ನು ಈ ವರ್ಷದಿಂದಲೇ ಮಂಗಳೂರು ವಿವಿಯಲ್ಲಿ ಸ್ಥಾಪಿಸಲಾಗುವುದು. ಮಡಿಕೇರಿಯ ಚಿಕ್ಕ ಅಳವಾರಿನಲ್ಲಿರುವ ಕಾಲೇಜಿನಲ್ಲಿ ಈಗಾಗಲೇ 7 ಕೋರ್ಸುಗಳಿದ್ದು ನೂತನವಾಗಿ ಬಾಟನಿ, ರಸಾಯನಶಾಸ್ತ್ರ, ಪರಿಸರ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಮತ್ತು ಪತ್ರಿಕೋದ್ಯಮ ಕೋರ್ಸುಗಳನ್ನು ಆರಂಭಿಸುವ ಬಗ್ಗೆ ಅನುಮೋದನೆಯನ್ನು ನೀಡಲಾಯಿತು.
ಸಮಯ ಬದಲಾಯಿಸಿದ್ದಲ್ಲಿ ಕ್ರಮ:
ಮಂಗಳೂರು ವಿವಿಯ ಅಧೀನದಲ್ಲಿ ಬರುವ ಕೆಲವೊಂದು ಸಂಧ್ಯಾ ಕಾಲೇಜುಗಳಲ್ಲಿ ಮಧ್ಯಾಹ್ನ 2ಗಂಟೆಯಿಂದ ಕಾಲೇಜು ಆರಂಭವಾಗುತ್ತದೆ. ಇದರಿಂದ ಹಗಲು ದುಡಿಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬ ಆರೋಪ ಸಭೆಯಲ್ಲಿ ಕೇಳಿ ಬಂದಿತ್ತು ಇದಕ್ಕೆ ಪ್ರತಿಕ್ರಿಯಿಸಿದ ಕುಲಪತಿಗಳು ಯಾವುದೇ ಸಂಧ್ಯಾ ಕಾಲೇಜುಗಳಲ್ಲಿ ತರಗತಿಗಳನ್ನು ಸಂಜೆ 5.30ಯಿಂದ ಮುಂಚೆ ಆರಂಭಿಸಬಾರದು ಎಂಬ ನಿಯವಿದೆ. ಇದಕ್ಕೆ ವಿರುದ್ಧವಾಗಿ ಮಂಗಳೂರು ವಿವಿಗೆ ಸಂಬಂಧಪಟ್ಟ ಯಾವುದೇ ಸಂಧ್ಯಾ ಕಾಲೇಜು ಮಧ್ಯಾಹ್ನ ಆರಂಭಿಸಿದ್ದರೆ ಅಂತಹ ಕಾಲೇೀಜಿನ ಹೆಸರನ್ನು ನೀಡಿ ಅವರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಮೂರು ಅಧ್ಯಯನ ಪೀಠಗಳ ಪೈಕಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸ್ಥಾಪನೆ ಬಗ್ಗೆ ರಚಿಸಿದ ತಿದ್ದುಪಡಿಯಲ್ಲಿ ನಿವೃತ್ತರ ನೇಮಕಾತಿ ಹಾಗೂ ಅವರನ್ನು ವಿಶೇಷಾಧಿಕಾರಿ ಎಂದು ನೇಮಿಸಿರುವುದನ್ನು ಕೈ ಬಿಡಲಾಗಿದೆ. ಕೋರ್ ಕಮಿಟಿಯಲ್ಲಿ 5 ಬೋಧಕ ಸಿಬ್ಬಂದಿಗಳ ನಾಮ ನಿರ್ದೇಶನದ ಬದಲು 3 ಬೋಧಕ ಸಿಬ್ಬಂದಿಗಳ ನಾಮ ನಿರ್ದೇಶನ ಮಾಡಿ ಅವರನ್ನು ಸಲಹಾ ಸಮಿತಿಗೆ ಸೂಚಿಸಲಾಗಿದೆ. ಹಣಕಾಸು ಅಧಿಕಾರಿಯನ್ನು ಶಾಶ್ವತ ಆಮಂತ್ರಿತರ ಬದಲು ಸದಸ್ಯರು ಎಂದು ನಮೂದನೆ ಮಾಡಲಾಗಿದೆ. ಹಾಗೂ ಮಂಗಳೂರು ವಿವಿಯ ಕೊಂಕಣಿ ಅಧ್ಯಯನ ಪೀಠ ಸ್ಥಾಪಿಸುವ ಬಗ್ಗೆ ರಚಿಸಿದ ಕರಡು ಪರಿನಿಯಮದಲ್ಲಿ ತಿದ್ದುಪಡಿಗಳಿದ್ದು ಈ ಪೈಕಿ ನಿವೃತ್ತರ ನೇಮಕಾತಿಯನ್ನು ಕೈಬಿಡಲಾಗಿದೆ. ಹಣಕಾಸು ಅಧಿಕಾರಿಯನ್ನು ಶಾಶ್ವತ ಆಮಂತ್ರಿತರ ಬದಲು ಸದಸ್ಯರು ಎಂದು ನಮೂದನೆ ಮಾಡಲಾಗಿದೆ. ಎಂದ ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಯಯದಲ್ಲಿ ಬ್ಯಾರಿ ಅಧ್ಯಯನ ಪೀಠವನ್ನು ಸ್ಥಾಪಿಸುವ ಬಗ್ಗೆ ಪಠ್ಯೇತರ ಯೋಜನೆಯಡಿಯಲ್ಲಿ ಶಿಕ್ಷಣ ಇಲಾಖೆಯ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಸರಕಾರದಿಂದ ಯೋಜನೆ ಜಾರಿಯಾದ ಕೂಡಲೇ ಪೀಠದ ಸ್ಥಾಪನೆಮಾಡಲಾಗುವುದು ಎಂದರು.
ಕಾಲೇಜಿಗೆ ದಾನಿಗಳ ಹೆಸರು ನಾಮಕರಣ :
ಮಂಗಳೂರಿನ ರಥಬೀದಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಹಾಯ ಧನವನ್ನು ನೀಡಿರುವ ದಾನಿಗಳ ಹೆಸರನ್ನು ಕಾಲೇಜಿಗೆ ನಾಮಕರಣ ಮಾಡಲು ಸರಕಾರ ಅನುಮತಿಯನ್ನು ನೀಡಿದ್ದು, ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಎಂಬ ಹೆಸರನ್ನು ಡಾ.ಪಿ ದಯಾನಂದ ಪೈ-ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಎಂಬುವುದಾಗಿ ಮರು ನಾಮಕರಣ ಮಾಡುವ ಬಗ್ಗೆ ಅನುಮೋದನೆಯನ್ನು ನೀಡಲಾಯಿತು.
ಈ ಸಂದರ್ಭ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್, ಹಣಕಾಸು ವಿಭಾಗದ ಅಧಿಕಾರಿ ಶ್ರೀಪತಿ ರಾವ್ , ಕುಲಸಚಿವ ಎ.ಎಂ.ಖಾನ್ ಉಪಸ್ಥಿತರಿದ್ದರು.
ರಾಜ್ಯದ ಸರಕಾರಿ ಮತ್ತು ಖಾಸಗಿ ವಿವಿಗಳ ಪೈಕಿ ಉನ್ನತ ಶಿಕ್ಷಣ ಮಂಡಳಿಯಿಂದ ಪ್ರಯೋಗಿಕಾವಾಗಿ ರ್ಯಾಂಕಿಂಗ್ ನೀಡಲಾಗಿದೆ. ಇದಕ್ಕೆ ನೇಮಿಸಲಾಗಿದ್ದ ನೊಡೆಲ್ ಅಧಿಕಾರಿಗಳು ವ್ಯವಸ್ಥೆ ಕೊಟ್ಟಿಲ್ಲ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ಅನುಭವಸ್ಥರು ಎಂದು ನಾನೇ ನೋಡೆಲ್ ಅಧಿಕಾರಿಯಾಗಿ ನೇಮಿಸಿದ್ದೇನು. ಉನ್ನತ ಶಿಕ್ಷಣದ ತರಭೇತಿ ಕೇಂದ್ರಗಳನ್ನು ತುಲನೆ ಮಾಡಿದ ಸಮಿತಿ ರ್ಯಾಂಕಿಂಗ್ ನಲ್ಲಿ ಬಳ್ಳಾರಿ ವಿವಿಗಿಂತಲೂ ಕೆಳಮಟ್ಟದ ಸ್ಥಾನದಲ್ಲಿ ರ್ಯಾಂಕಿಂಗ್ ನೀಡಿದೆ. ಇದಕ್ಕೆ ಕಡತಗಳನ್ನು ಒದಗಿಸುವಲ್ಲಿ ವಿಳಂಬವಾಗಿರುವುದು ಕಾರಣವಾಗಿದೆ. ನನ್ನಿಂದ ತಪ್ಪಾಗಿದ್ದಲ್ಲಿ ಕಾಲು ಹಿಡಿಯಲು ಸಿದ್ಧ.
ಪ್ರೊ.ಕೆ.ಬೈರಪ್ಪ
ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ


