ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಸಮಾಜದಲ್ಲಿ ಹಿಂದುಳಿದವರ ಸೇವೆ ಮಾಡುವುದರ ಮೂಲಕ ಅಂತವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕಾರ್ಯ ಶ್ಲಾಘನೀಯ ಎಂದು ಮೊೈದೀನ್ ಜುಮಾ ಮಸೀದಿ ಖತೀಬರಾದ ನಝೀರ್ ಅಹ್ಮದ್ ಬೋಲ್ ಮೀನಾರ್ ಹೇಳಿದರು.
ಅವರು ಬಜಾಲ್ ಪಕ್ಕಲಡ್ಕದ ರಿಫಾಯಿಯ್ಯ ದಫ್ ಕಮಿಟಿ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಅಬ್ದುಲ್ ಹಮೀದ್ ಅವರಿಗೆ ನಿರ್ಮಿಸಿದ ಮನೆಯಲ್ಲಿ ದುಆ ನೆರವೇರಿಸಿ ಮಾತನಾಡಿದರು.


ರಿಫಾಯಿಯ್ಯ ದಫ್ ಕಮಿಟಿ ಸದಸ್ಯ ಫೈರೋಝ್ ಉಳ್ಳಾಲ್ ಮಾತನಾಡಿ ರಿಫಾಯಿಯ್ಯ ದಫ್ ಕಮಿಟಿ 13 ವರ್ಷಗಳಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಜಮಾಅತಿನ ಬಡವರ ಹೆಣ್ಣು ಮಕ್ಕಳ ಮದುವೆಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಪುಸ್ತಕ ವಿತರಣೆ, ವೈದಕೀಯ ವೆಚ್ಛಗಳನ್ನು ಭರಿಸುವುದು, ಮನೆ ನಿರ್ಮಾಣ, ಮನೆ ದುರಸ್ತಿಯಂತಹ ಕಾರ್ಯ ಮಾಡುತ್ತಾ ಬಂದಿದ್ದು. ಮುಂದೆಯೂ ಇದೇ ರೀತಿಯಲ್ಲಿ ಇನ್ನಷ್ಟು ಯೋಜನೆಗಳನ್ನು ನಡೆಸಲು ನಿರ್ಧರಿಸಿದೆ ಎಂದರು.
ಈ ಸಂದರ್ಭ ಪಕ್ಕಲಡ್ಕ ರಿಫಾಯಿಯ್ಯ ದಫ್ ಕಮಿಟಿ ಅಧ್ಯಕ್ಷ ಝೈನುದ್ದೀನ್, ಕಾರ್ಯದರ್ಶಿ ಸಬೀರ್ ಅಹ್ಮದ್, ಜೊತೆ ಕಾರ್ಯದರ್ಶಿ ಮುಹಮ್ಮದ್ ಇರ್ಫಾನ್, ಸದಸ್ಯರಾದ ಅನ್ವಾರ್, ಮುಹಮ್ಮದ್ ಅನ್ಸಾರ್, ಮುಹಮ್ಮದ್ ಅನೀಸ್, ಹುಸೈನ್, ಫೈರೋಝ್ ಉಳ್ಳಾಲ್, ಮೋನು, ಹಸನ್ ಹಾಜಿ, ಉದ್ಯಮಿ ಶರೀಫ್, ಉಸ್ಮಾನ್ ಕೋಡಿಮೋಗರ್, ಮನ್ಸೂರು ಕೋಡಿಮೋಗರ್ ಉಪಸ್ಥಿತರಿದ್ದರು.





