ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಚೆಂಬುಗುಡ್ಡೆ: ಉಳ್ಳಾಲ ವ್ಯಾಪ್ತಿಯ ಚೆಂಬುಗುಡ್ಡೆ, ಉಳ್ಳಾಲ ಅಬ್ಬಕ್ಕ ವೃತ್ತದ ಬಳಿ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೂರು ಕಡೆಗಳಲ್ಲಿ ಶ್ರೀಘ್ರದಲ್ಲಿ ವಿದ್ಯುತ್ ಘಟಕವನ್ನು ಸ್ಥಾಪಿಸುವ ಮೂಲಕ ವಿದ್ಯುತ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಮಂಗಳೂರು ಮೆಸ್ಕಾಂನ ಅಧೀಕ್ಷಕ ಅಭಿಯಂತರ ಮಂಜಪ್ಪ ಅಧಿಕಾರಿಗಳಿಗೆ ಹೇಳಿದರು.
ಚೆಂಬುಗುಡ್ಡೆಯಲ್ಲಿರುವ ಉಳ್ಳಾಲ ಮೆಸ್ಕಾಂ ಕಚೇರಿಯಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಇದೀಗ ಉಳ್ಳಾಲ ವ್ಯಾಪ್ತಿಯ ಚೆಂಬುಗುಡ್ಡೆಯಲ್ಲಿ 33 ಕೆ.ವಿ.ಯ ವಿದ್ಯುತ್ ಘಟಕ ಕಾರ್ಯನಿರ್ವಹಿಸುತ್ತಿದೆ ಇದರಿಂದ ಅಧಿಕ ಒತ್ತಡ ಬೀಳುತ್ತಿದೆ. ಈ ನಿಟ್ಟಿನಲ್ಲಿ ಚೆಂಬುಗುಡ್ಡೆಯಲ್ಲಿ 110 ಕೆ.ವಿ, ಉಳ್ಳಾಲ ಅಬ್ಬಕ್ಕ ವೃತ್ತದ ಬಳಿಕ 33 ಹಾಗೂ ಕೋಟೆಕಾರ್‍ನಲ್ಲಿ 33 ಕೆ.ವಿ. ಸಾಮಥ್ರ್ಯದ ವಿದ್ಯುತ್ ಘಟಕ ನಿರ್ಮಾಣ ಯೋಜನೆಯಿದೆ ಎಂದ ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ವಿದ್ಯುತ್ ಕಾಮಗಾರಿಗೆ ಮುಖ್ಯ ಅಭಿಯಂತರರಿಂದ ಅನುಮತಿ ದೊರಕಿದೆ, 40 ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು ಟೆಂಡರ್ ಪ್ರಕ್ರಿಯೆ ನಡೆದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಆದರೆ ಕಾಮಗಾರಿ ಆರು ತಿಂಗಳಲ್ಲೇ ಮುಗಿಯಲಿದೆ ಎನ್ನುವುದು ಅಸಾಧ್ಯ, ಆದರೂ ಕಳೆದ ನಾಲ್ಕು ವರ್ಷಗಳಲ್ಲಿ ಆಗದ ಕಾಮಗಾರಿ ಒಂದು ವರ್ಷದಲ್ಲೇ ಪೂರ್ತಿಗೊಳಿಸಲಾಗುವುದು ಎಂದು ನಗರಸಭಾಧ್ಯಕ್ಷ ಹುಸೈನ್ ಕುಂಞÂಮೋನು ಅವರ ಮನವಿಗೆ ಉತ್ತರಿಸಿದರು.
ಆನ್ ಲೈನ್ ವ್ಯವಸ್ಥೆ ಜಾರಿ:
ಕೆಇಆರ್‍ಸಿಯಿಂದ ಆದೇಶದಂತೆ ಪ್ರತೀ ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆಯನ್ನು ಪರಿಣಾಮಕಾರಿಯಾಗಿ ನಡೆಸಲಾಗುವುದು. ಇನ್ನು ಗ್ರಾಹಕರಿಗೆ ಸಹಕಾರಿಯಾಗಲು ಶೀಘ್ರದಲ್ಲೇ ವಿದ್ಯುತ್ ಬಿಲ್ ಪಾವತಿಗೆ ಆನ್‍ಲೈನ್ ಸೇವೆ ಆರಂಭಿಸುವ ಯೋಜನೆ ಇದೆ ಎಂದರು.
ಮೆಸ್ಕಾಂಗೆ ಸಂಬಂಧಪಟ್ಟ ಯಾವುದೇ ಕೆಲಸಕ್ಕೆ ಗ್ರಾಮ, ಪಟ್ಟಣ, ಪುರಸಭೆ ಅಥವಾ ನಗರ ಪಂಚಾಯಿತಿಯಿಂದ ಅರ್ಜಿ ಬಂದಲ್ಲಿ 15 ದಿನಗಳ ಒಳಗಾಗಿ ಯೋಜನೆ ರೂಪಿಸಿ, ದೊಡ್ಡ ಮೊತ್ತದ ಕಾಮಗಾರಿ ನಿರ್ವಹಿಸಿದ ಪಕ್ಷದಲ್ಲಿ ಅದರ ಹೊರೆ ಗ್ರಾಹಕರ ಮೇಲೆ ಬೀಳುವುದರಿಂದ ಅಂತಹ ಸಾಹಸಕ್ಕೆ ಇಲಾಖೆ ಕೈಹಾಕುತ್ತಿಲ್ಲ ಎಂದರು.
ಸೇವಾ ಸಿಬ್ಬಂದಿ ವಜಾವೊಂದೇ ಮಾರ್ಗ
ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಸಾಮಾನ್ಯವಾಗಿ ಎದುರಾಗುತ್ತಿದೆ. ಈ ಬಗ್ಗೆ ದೂರು ನೀಡಲು ಮೆಸ್ಕಾಂ ಕಚೇರಿಯಲ್ಲಿ 24 ಗಂಟೆಗಳ ಸಹಾಯವಾಣಿ ಇದೆ. ಆದರೆ ಕರೆ ಮಾಡಿದರೆ ಸ್ವೀಕರಿಸಲು ಯಾರೂ ಇರುವು ಎಂದು ನಗರಸಭಾಧ್ಯಕ್ಷ ಹುಸೈನ್ ಕುಂಞÂಮೋನು, ಸದಸ್ಯ ಮಹಮ್ಮದ್ ಮುಕಚ್ಚೇರಿ ಹಾಗೂ ಗ್ರಾಹಕರು ದೂರಿದರು. ಈ ಸಂದರ್ಭ ಉತ್ತರಿಸಿದ ಮಂಜಪ್ಪ ಅವರು, ಸದ್ಯ ಕರ್ತವ್ಯದಲ್ಲಿರುವ ಇಬ್ಬರನ್ನು ವಜಾಗೊಳಿಸಿ ಹೊಸಬರನ್ನು ನೇಮಿಸುವುದೊಂದೇ ಸಮಸ್ಯೆಗೆ ಪರಿಹಾರ ಎಂದರು.
ಮೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರದಿಂದ ಸೂಚನೆ ಬಂದ ಹಿನ್ನೆಯೆಲ್ಲಿ ಕಳೆದ ವರ್ಷ 1200 ಸಿಬ್ಬಂದಿ ನೇಮಕ ಮಾಡಲಾಗಿದೆ. ಎಲ್ಲರೂ ಅಂಕಗಳ ಆಧಾರದಲ್ಲಿ ಪ್ರಭಾವಿಗಳ ಪತ್ರ ಬಲದೊಂದಿಗೆ ಕೆಲಸಕ್ಕೆ ಸೇರಿದ್ದರು. ಪ್ರತೀ ಘಟಕಕ್ಕೆ ತಲಾ ಹತ್ತು ಸಿಬ್ಬಂದಿ ನೇಮಿಸಲಾಗಿತ್ತು. ಆದರೆ ವರ್ಷದಲ್ಲೇ ಎಲ್ಲರೂ ನಾಪತ್ತೆಯಾಗಿದ್ದು, ನಾಲ್ಕು ಮಂದಿ ಮಾತ್ರವೇ ಉಳ್ಳಾಲ ಘಟಕದಲ್ಲಿ ಉಳಿದಿದ್ದಾರೆ. ಸಿಬ್ಬಂದಿ ಆಯ್ಕೆ ಸಂದರ್ಭ ಸ್ಥಳೀಯರ ಪರಿಗಣನೆ ಅಗತ್ಯ ಎಂದರು.
ನಗರಸಭೆಯ ಸದಸ್ಯ ಬಾಝಿಲ್ ಡಿಸೋಜ, ಉಳ್ಳಾಲ ಮೆಸ್ಕಾಂ ಸಹಾಯಕ ಅಭಿಯಂತರ ದಯಾನಂದ, ರಾಜೇಶ್ ಶೆಟ್ಟಿ, ಪ್ರವೀಣ್, ಕಿರಿಯ ಅಭಿಯಂತರರಾದ ನಿತೇಶ್, ವಿನೋದ್, ಮಂಗಳೂರು ಮೆಸ್ಕಾಂನ ಸಹಾಯಕ ಅಭಿಯಂತರೆ ಮೀನಾ ಶೆಟ್ಟಿ, ಹಿರಿಯ ಲೆಕ್ಕಾಧಿಕಾರಿ ಮೆಲ್ವಿನ್ ಡಿಸೋಜ, ಗುತ್ತಿಗೆದಾರರಾದ ಟಿ.ಎಸ್.ಅಬ್ದುಲ್ಲಾ, ರವಿ ಸುವರ್ಣ, ಬ್ಯಾಝಿಲ್, ಕಿನ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿರಾಜ್ ಕಿನ್ಯ, ಪ್ರಮುಖರಾದ ರವೀಂದ್ರರಾಜ್ ಉಳ್ಳಾಲ್, ಬಾಬು ಶೆಟ್ಟಿ ಕುತ್ತಾರ್ ಮೊದಲಾದವರು ಉಪಸ್ಥಿತರಿದ್ದರು.
ದುರಸ್ತಿ ಹೆಸರಲ್ಲಿ ವಾರಕ್ಕೊಮ್ಮೆ ವಿದ್ಯುತ್ ಕಡಿತಗೊಳಿಸುವ ಪ್ರಕ್ರಿಯೆ ಮೆಸ್ಕಾಂನಲ್ಲಿಲ್ಲ, ಅಷ್ಟಕ್ಕೂ ದುರಸ್ತಿ ಕೆಲಸವಿದ್ದರೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ ಬಳಿಕವಷ್ಟೇ ವಿದ್ಯುತ್ ಕಡಿತಗೊಳಿಸಬೇಕು. ಈ ಬಗ್ಗೆ ಅಧೀಕ್ಷಕ ಅಭಿಯಂತರರಲ್ಲಿ ಅನಮತಿ ಪಡೆಯುವುದು ಅಗತ್ಯವಾಗಿದ್ದರೂ, ಆ ಕೆಲಸ ನಡೆಯುತ್ತಿಲ್ಲ.
ಮಂಜಪ್ಪ,
ಮಂಗಳೂರು ಮೆಸ್ಕಾಂನ ಅಧೀಕ್ಷಕ ಅಭಿಯಂತರ


