ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಪ್ರದಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿಯತ್ತ ಭಾರತ ದಾಪುಗಾಲಿಡುತ್ತಿದ್ದು, ವಿಶ್ವದಾದ್ಯಂತ ಅಭಿವೃದ್ಧಿ ಶೀಲ ದೇಶಗಳುಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದ್ದು ಕಳೆದ ಮೂರು ವರ್ಷಗಳಲ್ಲಿ ವಿಶ್ವಮಾನ್ಯತೆಯನ್ನು ಪಡೆಯುವಂತಾಗಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಕೇಂದ್ರ ಸರಕಾರದ ನರೇಂದ್ರ ಮೋದಿ ನೇತೃತ್ವದ ಸರಕಾರದ ಆಡಳಿತದ ಪ್ರಗತಿಯ ಬಗ್ಗೆ ಏರ್ಪಡಿಸಲಾಗಿದ್ದ ಎಲ್‍ಇಡಿ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ಮಾತನಾಡಿ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅಭಿವದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕು ಎಂದು ಬಯಸಿದ್ದರು. ಅಂದು ಅವರು ಭಾರತೀಯ ಜನತಾ ಪಾರ್ಟಿಗೆ ಹಾಕಿಕೊಟ್ಟ ರಾಜಕೀಯ ಸಿದ್ಧಾಂತವನ್ನು ಇಂದು ಕೇಂದ್ರದ ನರೇಂದ್ರ ಮೋದಿ ಸರಕಾರ ಈಡೇರಿಸುತ್ತಿದೆ. ದೇಶದಲ್ಲಿರುವ ಯುವಕರನ್ನು ಸದೃಡರನ್ನಾಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ಪ್ರಾರಂಬಿಸಿದ ಮುದ್ರಾ ಯೋಜನೆ, ಸ್ಟಾರ್ಟ್‍ಅಪ್‍ಗಳು ಸೇರಿದಂತೆ ಸರ್ವಧರ್ಮದವರ ಅಭಿವೃದ್ಧಿಯ ಪಣ ತೊಟ್ಟಿರುವ ನರೇಂದ್ರ ಮೋದಿಯವರ ಮೂರು ವರ್ಷಗಳ ಆಡಳಿತದಿಂದ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಮಂಗಳೂರು ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಕ್ಷೇತ್ರ ಅಲ್ಪ ಸಂಖ್ಯಾತ ಅಧ್ಯಕ್ಷ ಅಶ್ರಫ್ ಹರೇಕಳ, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸುಳ್ಳೆಂಜೀರು,ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಕರ್ಕೇರ, ಮಹಿಳಾ ಮೋರ್ಚಾ ಅಧ್ಯಕ್ಷೆ ರಮಣಿ ಸೋಮೇಶ್ವರ, ಯುವ ಮೋರ್ಚಾ ಪ್ರ. ಕಾರ್ಯದರ್ಶಿ ಸಚಿನ್ ಶೆಟ್ಟಿ ಸಾಂತ್ಯ, ಮುಖಂಡರಾದ ಯಶವಂತ ಅಮೀನ್, ಹೇಮಂತ್ ಶೆಟ್ಟಿ ದೇರಳಕಟ್ಟೆ, ಸುರೇಂದ್ರ ಶೆಟ್ಟಿ , ಪ್ರಕಾಶ್ ಸಿಂಪೋನಿ
ಆನಂದ ಶೆಟ್ಟಿ ಭಟ್ನಗರ, ಅಜಂತ ಪಿಲಾರ್, ಸುದರ್ಶನ ಶೆಟ್ಟಿ ಅಂಬ್ಲಮೊಗರು, ನಮಿತಾ ಶ್ಯಾಂ, ಪ್ರಶಾಂತ್ ಕಾಪಿಕಾಡ್, ಮೋಹನ್ ರಾಜ್ ಕನೀರುತೋಟ, ರಾಮಕೃಷ್ಣ ಪಟ್ಟೋರಿ, ಪೂರ್ಣಿಮಾ, ಕೋಟೆಕಾರು ಕೌನ್ಸಿಲರ್ ದಿವ್ಯಾ ಶೆಟ್ಟಿ, ಸೋಮೇಶ್ವರ ಗ್ರಾಮ ಪಂಚಾಯತ್ ಸದಸ್ಯ ಗೋಪಾಲಕೃಷ್ಣ, ಪ್ರಫುಲ್ಲಾ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮನೋಜ್ ಅಚಾರ್ಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.









