ಉಳ್ಳಾಲ ನ್ಯೂಸ ನೆಟ್ ವರ್ಕ್
ಉಳ್ಳಾಲ: ದುರಂತಕ್ಕೀಡಾದ ಬಾರ್ಜ್ನ ಡಿಸೀಲ್ ಸೋರಿಕೆಯಾಗಿದ್ದು, ಸಂಜೆ ವೇಳೆ ಟ್ಯಾಂಕ್ ಕಲ್ಲಿಗೆ ಬಡಿದು ಸ್ಫೋಟಗೊಂಡಿದೆ ಎಂದು ಸ್ಥಳೀಯರು ಆರೋಪಿಸಿರುವ ಸ್ಥಳೀಯರು ಇದರಿಂದಾಗಿ ಮೊಗವೀರಪಟ್ನ ತೀರದಲ್ಲಿ ಸಮುದ್ರದ ನೀರು ತೈಲದಿಂದ ಕೂಡಿದೆ ಎನ್ನಲಾಗುತ್ತಿದೆ.
ಮಂಗಳವಾರ ಸಂಜೆ ವೇಳೆ ಸಮುದ್ರದ ನೀರಿನಲ್ಲಿ ತೈಲಾಂಶ ಪತ್ತೆಯಾಗಿದೆ. ಡಿಸೀಲ್ ಘಾಟು ಸ್ಥಳೀಯವಾಗಿ ವ್ಯಾಪಿಸಿರುವುದರಿಂದ ಬಾರ್ಜ್ನ ಡಿಸೀಲ್ ಟ್ಯಾಂಕಿನಲ್ಲಿ ಸೋರಿಕೆ ಉಂಟಾಗಿದೆ ಅನ್ನುವ ಸಂಶಯಗಳು ವ್ಯಕ್ತವಾಗಿದೆ.
ಬಾರದ ತಜ್ಞರ ತಂಡ :
ಬಾರ್ಜ್ ದುರಂತ ಸಂಭವಿಸಿ ಮೂರು ದಿನಗಳು ಕಳೆದರೂ ಮುಂಬೈನಿಂದ ಬರಬೇಕಾದ ತಜ್ಞರ ತಂಡ ಇನ್ನೂ ಘಟನಾ ಸ್ಥಳವನ್ನು ತಲುಪಿಲ್ಲ. ಸೋಮವಾರ ಭೇಟಿ ನೀಡುವವರಿದ್ದು, ಇಂದು ಕೂಡಾ ತಲುಪಿಲ್ಲ. ಆದರೆ ಸುರತ್ಕಲ್ ತಲುಪಿರುವ ತಂಡ ಜಿಲ್ಲಾಡಳಿತದ ಜತೆಗೆ ಮಾತುಕತೆ ನಡೆಸಿ ಬುಧವಾರದಂದು ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಎನ್ ಎಂ ಪಿಟಿ ಮೂಲಕವೇ ಸ್ಥಳ ತಲುಪಲಿರುವ ತಂಡದ ಜತೆಗೆ ಎಡಿಬಿ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಎಡಿಬಿ ಅಧಿಕಾರಿಗಳ ನಿಯೋಗವೂ ಉಳ್ಳಾಲಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.
ದಡ ಸೇರಿದ ಸೊತ್ತುಗಳು :
ಮಂಗಳವಾರ ಬೆಳಗ್ಗಿನಿಂದ ಬಾರ್ಜ್ನ ಬಿಡಿಭಾಗಗಳು ದಡ ಸೇರಿದ್ದು, ಟಯರ್ ಸುತ್ತಿಕೊಂಡಿರುವ ಟ್ಯಾಂಕ್ ಮತ್ತು ಬೃಹತ್ ಗಾತ್ರದ ಕಬ್ಬಿಣದ ಬಾಗಿಲು ಮೊಗವೀರಪಟ್ನ ಸಮುದ್ರತೀರ ಸೇರಿದೆ.
ಶೇ.60 ರಷ್ಟು ಮುಳುಗಡೆ :
ದುರಂತ ವೇಳೆ ಬಾಜ್ ್ ಹಿಂಬದಿಯ ಒಂದು ಪದರ ಮಾತ್ರ ಮುಳುಗಿರುವುದು ಕಂಡುಬಂದಿತ್ತು. ಎರಡು ದಿನಗಳಲ್ಲಿ ಕಡಿಮೆಯಾಗದ ಸಮುದ್ರದ ಅಲೆಗಳಿಗೆ ಸಿಲುಕಿದ ಬಾಜ್ ್ ಮಂಗಳವಾರದ ಹೊತ್ತಿಗೆ ಇನ್ನಷ್ಟು ಮುಳುಗಡೆ ಹೊಂದಿದ್ದು, ಶೇ.60 ರಷ್ಟು ಮುಳುಗಡೆ ಹೊಂದಿರುವುದು ಮೇಲುನೋಟಕ್ಕೆ ಎದ್ದು ಕಾಣುತ್ತಿದೆ.
ರೀಫ್ ಹಾನಿಗೊಳ್ಳುವ ಭೀತಿ:
ಬಾರ್ಜ್ ಮುಳುಗಡೆ ಹೊಂದಿದಲ್ಲಿ ಕೋಟ್ಯಂತರ ರೂ. ವ್ಯಯಿಸಿ ಕಟ್ಟಲಾಗಿರುವ ರೀಫ್ ಗೂ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ಶಾಶ್ವತ ತಡೆಗೋಡೆಗೆಂದು ಎಡಿಬಿ ಯಿಂದ ಪಡೆದುಕೊಳ್ಳಲಾದ ಹಣವೂ ಸಮುದ್ರಪಾಲಾಗಲಿವೆ ಅನ್ನುವ ಆರೋಪಗಳು ಸ್ಥಳೀಯರದ್ದಾಗಿದೆ.


