ಉಳ್ಳಾಲ್‍ನ್ಯೂಸ್ ನೆಟವರ್ಕ್
ಉಳ್ಳಾಲ: ಬಡವರೆಂದು ಎಲ್ಲೆಡೆಯೂ ಕೈಚಾಚುವ ಪ್ರಯತ್ನ ಮಾಡದಿರಿ, ಇಸ್ಲಾಂ ನ ಚೌಕಟ್ಟಿನೊಳಗೆ ಇದ್ದುಕೊಂಡು ಪ್ರವಾದಿಯವರ ಸಂದೇಶದಂತೆ ಜೀವನ ನಡೆಸುಕೊಂಡು ಬಾಳಬೇಕಿದೆ ಎಂದು ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.
ಅವರು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ವತಿಯಿಂದ ಉಳ್ಳಾಲ ಮಾಸ್ತಿಕಟ್ಟೆ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಂಝಾನ್ ಅಕ್ಕಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಾಲ್ಕು ಜನರ ಒಕ್ಕೂಟ ಸೇರಿಕೊಂಡು ಸಂಸ್ಥೆಯಾಗಿದೆ. ಜನರ ಸಹಕಾರದ ಜತೆಗೆ ಸ್ಥಳೀಯವಾಗಿ ವಿಶ್ವಾಸ ಪಡೆದುಕೊಂಡು ಟ್ರಸ್ಟ್ ಎಲ್ಲಾ ವರ್ಗದ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವಲ್ಲಿ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಯಶಸ್ವಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಉಪಾಧ್ಯಕ್ಷ ಮೊಹಮ್ಮದ್ ತ್ವಾಹ ಮಾತನಾಡಿ ಕಳೆದ ಆರು ವರ್ಷಗಳಿಂದ ಟ್ರಸ್ಟ್ ಯಶಸ್ವಿಯಾಗಿ ಜನರ ಕಷ್ಟಗಳಿಗೆ ಸ್ಪಂಧಿಸುತ್ತಾ ಬಂದಿದೆ. ಮುಂದೆಯೂ ಜನರ ಸಹಕಾರದೊಂದಿಗೆ ಇನ್ನಷ್ಟು ಜನರಿಗೆ ಸಹಕರಿಸಲಿದೆ ಎಂದರು.ಮುಖ್ಯ ಅತಿಥಿಯಾಗಿ ಅಹಮ್ಮದ್ ಬಾವ ಕುಂಬ್ಳೆ ಭಾಗವಹಿಸಿದ್ದರು.ಯು.ಎಂ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಎ.ಎ.ಖಾದರ್, ಯು.ಹೆಚ್.ಸಿದ್ದೀಖ್, ಅಬ್ದುಲ್ ಸಲಾಂ ಉಪಸ್ಥಿತರಿದ್ದರು.
ಟ್ರಸ್ಟ್ ಕೋಶಾಧಿಕಾರಿ ಅಹಮ್ಮದ್ ಬಾವ ಕೊಟ್ಟಾರ ಸ್ವಾಗತಿಸಿದರು. ಯು.ಕೆ.ಮುಹಮ್ಮದ್ ಮುಸ್ತಾಫ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹೆಚ್. ಇಸ್ಮಾಯಿಲ್ ಶಾಫಿ ವಂದಿಸಿದರು.ಈ ಸಂದರ್ಭ 150 ಕುಟುಂಬಗಳಿಗೆ ಅಕ್ಕಿ ವಿತರಣೆ ನಡೆಯಿತು.




















