ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಮಂಗಳೂರು ಉಳ್ಳಾಲ ಸಮುದ್ರದಲ್ಲಿ ಬಾರ್ಜ್ ಮುಳುಗಡೆ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್ ಕೋಸ್ಟಲ್ ಗಾರ್ಡ್ ಇಲಾಖಾ ಅಧಿಕಾರಿಗಳು ನಾಳೆ ಮುಂಜಾನೆಯಿಂದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಹಿತಿ ಸಿಕ್ಕ ಕೂಡಲೇ ಐ.ಸಿ.ಜಿ.ಎಸ್ ಅಮರ್ತ್ಯ ನೌಕೆ ಸ್ಥಳಕ್ಕೆ ಧಾವಿಸಿದೆ ಈಗಾಗಲೇ ನಾಲ್ವರು ಬಾರ್ಜ್ ಸಿಬಂಧಿ ರಕ್ಷಣೆ ಮಾಡಲಾಗಿದೆ.ಸಮುದ್ರ ಪ್ರಕ್ಷುಬ್ಧಗೊಂಡಿರೋ ಕಾರಣದಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ನಾಳೆ ಮುಂಜಾನೆಯಿಂದ ಕಾರ್ಯಾಚರಣೆ ಆರಂಭಿಸಲಾಗುವುದು ಎಂದಿದ್ದಾರೆ. ಮುಳುಗಡೆ ಭೀತಿಯಲ್ಲಿರೋ ಬಾರ್ಜ್ ಪಕ್ಕದಲ್ಲಿ ಕೋಸ್ಟಲ್ ಗಾರ್ಡ್ ನೌಕೆ ಕಾವಲು ಕಾಯುತ್ತಿದೆ. ಸದ್ಯಕ್ಕೆ ಬಾರ್ಜ್ ನಲ್ಲಿ 23 ಸಿಬ್ಬಂದಿ ಜೀವಭೀತಿಯಲ್ಲಿ ಕಾಲಕಳೆಯುತ್ತಿದ್ದಾರೆ ಅವರಲ್ಲಿ ಒಬ್ಬ ಮಾಸ್ಟರ್, ಇಬ್ಬರು ಚೀಫ್ ಇಂಜಿನಿಯರ್, 12 ಜನ ಆಯಿಲರ್ ಸೇರಿದಂತೆ ರೋಪರ್, ಸೀಮ್ಯಾನ್ಸ್ ಸಿಲುಕಿಕೊಂಡಿದ್ದಾರೆ.
ಸಮುದ್ರದಲ್ಲಿ ಸಿಲುಕಿರುವವರ ಹೆಸರು
ಮಾಸ್ಟರ್ ಮುರಗನ್
ಶೋಭಿತ್
ಉಪೇಂದ್ರ
ಮಿಶ್ರಾ
ಯಾನ್
ರಾಕೇಶ್
ಮನೋಜ್
ತವುಡೆ
ವಿಮಲ್
ಅಜಯ್
ಇನ್ನಿತರರು


