ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಪ್ರಸ್ತುತ ಕಾಲಘಟ್ಟದಲ್ಲಿ ಅಂತರ್‍ಜಾಲ ವ್ಯವಸ್ಥೆ ಬಲಗೊಳ್ಳುತ್ತಿದೆ.ಇದು ಇಂಟರ್‍ನೆಟ್ ಯುಗ ಇಂಟರ್‍ನೆಟ್‍ನಲ್ಲಿ ಒಳಿತು -ಕೆಡಕು ಎರಡೂ ಇದೆ. ಕೊಳಕನ್ನು ತೆಗೆದು ಪರಿಶುದ್ದ ಸಮಾಜ ನಿರ್ಮಾಣವಾಗಬೇಕಾದರೆ ಇನ್ನರ್‍ನೆಟ್ ಜಾಗೃತಗೊಳ್ಳಬೇಕಾಗಿದೆ ಎಂದು ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ ಹೇಳಿದರು. ಉಳ್ಳಾಲದ ಅಬ್ಬಕ್ಕ ಟಿ.ವಿಯ ನೂತನ ವೆಬ್‍ಸೈಟ್‍ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸುದ್ದಿ ನೀಡುವ ಧಾವಂತದಲ್ಲಿ ಮಾಧ್ಯಮಗಳು ಎಂದೂ ಸಮಾಜಕ್ಕೆ ತಪ್ಪು ಸಮದೆಶವನ್ನು ನೀಡಬಾರದು. ಪ್ರತಿಯೊಂದು ನಾಣ್ಯಕ್ಕೂ ಎರಡು ಮುಖಗಳಿದೆ ಎಂಬುದು ಸೂಚ್ಯವಾಗರಿಬೇಕು ಎಂದರು.
ಶ್ರೀ ಕ್ಷೇತ್ರ ಕಣಂತ್ತೂರಿನ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ಸಭಾಧ್ಯಕ್ಷತೆ ವಹಿಸಿದ್ದರು. ಕಂಕನಾಡಿ ಗರಡಿ ಕ್ಷೇತ್ರದ ಶ್ರೀಮತಿ ಸುಲೋಚನ ಚಿತ್ತರಂಜನ್,ವಿದ್ಯಾರತ್ನ ವಿದ್ಯಾಸಂಸ್ಥೆಯ ಸಂಚಾಲಕಿ ಶ್ರೀಮತಿ ಸೌಮ್ಯ ಆರ್. ಶೆಟ್ಟಿ,ಸೂರಜ್ ಶಿಕ್ಷಣು ಅಧ್ಯಕ್ಷರಾದ ಮಂಜುನಾಥ್ ಎಸ್ ರೇವಣ್ಕರ್, ಉದ್ಯಮಿ ಅನಿಲ್‍ದಾಸ್ ,ಬಿಜೆಪಿ ಕಾರ್ಯಕಾರಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಸಂತೋಷ್‍ಕುಮಾರ್ ರೈ ಬೋಳ್ಯಾರು, ಧಾರ್ಮಿಕ ಪರಷತ್ ಜಿಲ್ಲಾ ಸದಸ್ಯ ಕೃಷ್ಣಗಟ್ಟಿ ಸೋಮೇಶ್ವರ, ನ್ಯಾಯವಾದಿ ಗಂಗಾಧರ್ ಉಳ್ಳಾಲ,ಬಿಜೆಪಿ ಜಿಲ್ಲಾ ಉಪಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್,ಚಂದ್ರಶೇಖರ್ ಉಚ್ಚಿಲ್,ಶಿಬರೂರಿನ ಮುಂದಾಳು ಕುಟ್ಟಿಮೂಲ್ಯ.ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ,ದೊಡ್ಡಯ್ಯ ಮೂಲ್ಯ ಕಟೀಲು,ನಿಶಾರ ವಿದ್ಯಾಸಂಸ್ಥೆಯ ಹಾಜಿ ಅಬ್ಬುಲ್ ರಝಾಕ್,ಉದ್ಯಮಿ ಕೆ.ಸಿ.ಆಳ್ವ, ಸಲಹಾ ನಿರ್ದೇಶಕಿ ಶ್ರೀಮತಿ ಗಿರಿಜಾ.ಬಿ.ಬೊಳ್ಯ ಮುಂತಾದವರು ವೇದಿಕೆಯಲ್ಲಿದ್ದರು.
ಅಬ್ಬಕ್ಕ ಟಿ.ವಿಯ ನಿರ್ದೇಶಕರಾದ ಶಶಿಧರ್ ಪೊಯ್ಯತ್ತಬೈಲ್ ಸ್ವಾಗತಿಸಿದರು,ವಿನ್ಯಾಸಕ ಭವಿತ್ ಎಂಡೆಲ್,ಮಂಜನಾಡಿ ಪ್ರಾಸ್ತಾವನೆಗೈದರು,ನಿರ್ದೆಶಕ ಸುಪ್ರೀತ್ ಭಂಡಾರಿ ಧನ್ಯವಾದವಿತ್ತರು.ಪ್ರಾಧ್ಯಾಪಕ ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.



