ಉಳ್ಳಾಲ ನ್ಯೂಸ್ ನೆಟ್ ವರ್ಕ್
ಮುಂಬಯಿ: ರಾಯನ್ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಪ್ರವರ್ತಕಿ-ಆಡಳಿತ ನಿರ್ದೇಶಕಿ ಅಚ್ಚ ತುಳು ಕನ್ನಡದ ಮಹಾನ್ ಸಾಧಕಿ ಮೇಡಂಗ್ರೇಸ್ ಪಿಂಟೊ ಆಡಳಿತ್ವದ ರಾಯಾನ್ ಶೈಕ್ಷಣಿಕ ಸಂಸ್ಥೆಗಳು ಮತ್ತೊಮ್ಮೆತಮ್ಮ ಶಿಕ್ಷಣ ಕ್ಷೇತ್ರದ ಅಪ್ರತಿಮ ಸಾಧನೆಯನ್ನು ಕಳೆದ ಸೋಮವಾರ ಪ್ರಕಟವಾದ ಸೆಂಟ್ರಲ್ ಬೋರ್ಡ್ಆಫ್ ಸೆಕಂಡರಿ ಎಜ್ಯುಕೇಶನ್ (ಸಿಬಿಎಸ್ಇ), ಇಂಡಿಯನ್ ಸೆರ್ಟಿಫಿಕೇಟ್ ಫಾರ್ ಸೆಕಂಡರಿ ಎಜ್ಯುಕೇಶನ್ (ಐಸಿಎಸ್ಇ)ಮತ್ತು ಇಂಡಿಯನ್ ಸ್ಕೂಲ್ಸೆರ್ಟಿಫಿಕೇಟ್(ಐಎಸ್ಸಿ) ಪರೀಕ್ಷಾ ಫಲಿತಾಂಶಗಳಲ್ಲಿ ಪ್ರದರ್ಶಿಸಿದೆ.
ರಾಯಾನ್ ವಿದ್ಯಾಸಂಸ್ಥೆಗಳು ಕಳೆದ ಹಲವು ವರ್ಷಗಳಿಂದ ಸತತವಾಗಿ ಶೇಕಡಾ100 ಫಲಿತಾಂಶಗಳನ್ನು ಪಡೆಯುತ್ತಾ ಬಂದಿದೆ. ಅದೇರೀತಿ ಈ ಬಾರಿಯೂ ಭಿನ್ನವಾಗಿಲ್ಲ. ಇದರೊಂದಿಗೆ ಡಿಸ್ಟಿಂಕ್ಷನ್ಸ್ ಮತ್ತು ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ವಿದ್ಯಾರ್ಥಿಗಳ ಪ್ರಯತ್ನ, ಯಶಸ್ವಿ ಸಾಧನೆ ರಾಯಾನ್ ಸಂಸ್ಥೆಯ ಘನತೆಯನ್ನು ಹೆಚ್ಚಿಸಿದೆ.
ಖಾರ್ಘರ್ಇಲ್ಲಿನರಾಯಾನ್ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಮಾ| ಋಷಿಕೇಶ್ ನಿಕಂ ಐಸಿಎಸ್ಇ ಪರೀಕ್ಷೆಯಲ್ಲಿ ಒಟ್ಟು ಶೇಕಡಾ98.6 ಅಂಕ ಗಳಿಸಿದ್ದಾರೆ. ನನ್ನ ಪರೀಕ್ಷಾ ಸಿದ್ಧತೆಯ ಸಂದರ್ಭ ಶಾಲೆ ಮತ್ತು ಶಾಲೆಯ ಶಿಕ್ಷಕರು ಬಹಳಷ್ಟು ನೆರವು ನೀಡಿದ್ದಾರೆ.ನಮ್ಮ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಪಿಂಟೋ ನನಗೆ ಸ್ಪೂರ್ತಿ ಆಗಿದ್ದಾರೆ.ನನಗೆ ಅವರು ಯಾವಾಗಲೂ ಪ್ರೋತ್ಸಾಹ, ಉತ್ತೇಜನ ನೀಡುತ್ತಾ ಬಂದಿದ್ದಾರೆ.ಅದೇರೀತಿ ನನ್ನ ಹೆತ್ತವರೂ ನನಗೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದಿದ್ದಾರೆ, ಈ ಸಾಧನೆಗೌರವ ಸಮಾನವಾಗಿ ಅವರೆಲ್ಲರಿಗೂ ಸಲ್ಲಬೇಕು ಎಂದು ವಿದ್ಯಾರ್ಥಿ ಋಷಿಕೇಶ್ ಹೇಳಿದ್ದಾರೆ.
ಕಾಂದಿವಲಿ ಅಲ್ಲಿನರಾಯಾನ್ ಸಂಸ್ಥೆಯ ಕೇಂಬ್ರಿಡ್ಜ್ ಶಾಲೆಯ ವಿದ್ಯಾರ್ಥಿನಿ ಕು| ನಂದಿನಿ ನಿಲೊತ್ಪಾಲ್ ಮಜುಂದಾರ್ ಐಸಿಎಸ್ಇ ಪರೀಕ್ಷೆಯಲ್ಲಿ ಶೇಕಡಾ98.2 ಅಂಕಗಳನ್ನು ಗಳಿಸಿದ್ದಾರೆ.“ನನ್ನ ಶಾಲಾ ಶಿಕ್ಷಕರು ಮತ್ತು ಸ್ನೇಹಿತರು ಸಹಾಯದ ಸ್ಥಿರ ಮೂಲಗಳಾಗಿದ್ದಾರೆ.ಎಲ್ಲಾ ಸಂದರ್ಭಗಳಲ್ಲಿ ನನ್ನ ಹಿಂದೆ ಇದ್ದು ಎಲ್ಲಾ ರೀತಿಯಲ್ಲಿ ಪ್ರೋತ್ಸಾಹದಾಯಕರಾಗಿದ್ದ ನನ್ನ ಹೆತ್ತವರಿಗೆ ನಾನು ಚಿರಋಣಿ”ಎಂದು ವಿದ್ಯಾರ್ಥಿನಿ ನಂದಿನಿ ಹೇಳಿದ್ದಾರೆ.
ಮಲಾಡ್ನ ರಾಯಾನ್ಅಂತರಾಷ್ಟ್ರೀಯ ಶಾಲೆಯ ವಿಧ್ಯಾರ್ಥಿ ಮಾ| ಧ್ರುವಿನ್ ಡುಂಗ್ರಾಣಿ ಐಸಿಎಸ್ಇ ಪರೀಕ್ಷೆಯಲ್ಲಿ ಶೇಕಡಾ98 ಅಂಕ ಗಳಿಸಿದ್ದಾರೆ.“ನಮ್ಮ ಶಾಲೆಗೆ ಮೇಡಮ್ ಪಿಂಟೋ ಭೇಟಿ ನೀಡಿದ ಪ್ರತಿಕ್ಷಣವೂ ನಾನು ದೊಡ್ಡ ಮೊತ್ತದ ಆತ್ಮವಿಶ್ವಾಸದ ಅನುಭವವನ್ನು ಮೈಗೂಡಿಸಿಕೊಳ್ಳುತ್ತಿದ್ದೆ ಅವರು ನಮಗಾಗಿ ಪ್ರಾರ್ಥಿಸುತ್ತಿದ್ದರು, ಆಶೀರ್ವಾದಿಸುತ್ತಿದ್ದರು. ಹೆತ್ತವರ ಪ್ರೋತ್ಸಾಹ, ಪ್ರೇರಣೆ ಮಾರ್ಗದರ್ಶನ ಅದ್ಭುತ. ನನ್ನ ಈ ಸಾಧನೆ ಗೌರವ ಎಲ್ಲಾ ಅವರಿಗೆ ಸಲ್ಲಿಸುತ್ತೇನೆ”ಎಂದು ಹೇಳಿದ್ದಾರೆ.
ಶಿಕ್ಷಣ ಕ್ವೇತ್ರದಲ್ಲಿ ರಯಾನ್ ಸಂಸ್ಥೆಯ ಸೇವೆ ಅದ್ಭುತಎಂದು ಧ್ರುವಿನ್ ತಾಯಿ ಹೇಳಿದ್ದಾರೆ. “ನನ್ನ ಮಗನಿಗೆ ಶಾಲೆ ಮಹತ್ತರವಾದ ಪ್ರೋತ್ಸಾಹ ನೀಡಿದೆ. ವಿದ್ಯಾರ್ಥಿಗಳ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕರು ಸದಾ ಸಿದ್ಧರಿದ್ದರು.ನಿಜಕ್ಕೂ ಇದು ಅತ್ಯುತ್ತಮ ಶಾಲೆಯಾಗಿದೆ? ಎಂದು ಧ್ರುವಿನ ತಾಯಿ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಕಾಂದಿವಿಲಿ ರಾಯಾನ್ಅಂತರಾಷ್ಟ್ರೀಯ ಶಾಲೆಯ ಶ್ರೇಷ್ಟ್ಜೀವಿತ್ ಎಂಬ ವಿದ್ಯಾರ್ಥಿ ಶೇಕಡಾ96.2 ಅಂಕಗಳನ್ನು ಗಳಿಸಿದ್ದಾರೆ.“ನನ್ನಕಲಿಕೆಯ ಸಂದರ್ಭ ನನಗೆ ಸಹಾಯ ಮಾಡಲು ನನ್ನ ಶಿಕ್ಷಕರು ಹೆಚ್ಚಿನ ಶ್ರಮಮತ್ತು ನೋವುಗಳನ್ನು ಅನುಭವಿಸಿದ್ದಾರೆ. ಹಾಗಾಗಿ ನನಗೆ ಈ ಸಾಧನೆಗೆ ಸಾಧ್ಯವಾಯಿತು”ಎಂದು ಶ್ರೇಷ್ಟ್ ಜೀವಿತ್ ಹೇಳಿದ್ದಾರೆ.
ನ್ಯೂ ಪನ್ವೇಲ್ ಸೈಂಟ್ಜೋಸೆಫ್ ಹೈಸ್ಕೂಲ್ನ ವಿದ್ಯಾರ್ಥಿ ಗಳಾದ ಆಶಿಲ್ ನಾಯರ್ ಮತ್ತುರೀತು ನಾರ್ಕರ್ ಉನ್ನತ ಶ್ರೇಣಿಯ ಪಟ್ಟಿಯಲ್ಲಿ ನಿಲ್ಲುವ ಇತರ ವಿದ್ಯಾರ್ಥಿಗಳು.ಈ ವಿದ್ಯಾರ್ಥಿಗಳು ರಾಯಾನ್ ಶಿಕ್ಷಣ ಸಂಸ್ಥೆಗೆ, ಶಿಕ್ಷಕರಿಗೆ ಮತ್ತು ಹೆತ್ತವರ ಪ್ರೇರಣೆ ಪ್ರೋತ್ಸಾಹಕ್ಕೆ ಅಭಾರಿಯಾಗಿದ್ದೇವೆ ಎಂದು ಹೇಳಿದ್ದಾರೆ.
ರಾಯಾನ್ ಶಾಲೆಗಳು ಎಲ್ಲಾ ಬೋರ್ಡುಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿವೆ. ಇದು ರಾಯಾನ್ ಸಂಸ್ಥೆಗಳ ಶೈಕ್ಷಣಿಕ ಸಾಮಥ್ರ್ಯವನ್ನು ಸಮರ್ಥಿಸುತ್ತದೆ ಎಂದು ರಾಯಾನ್ಅಂತರಾಷ್ಟ್ರೀಯ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಮೇಡಂಗ್ರೇಸ್ ಪಿಂಟೋ ಈ ವರ್ಷದ ಫಲಿತಾಂಶದ ಕುರಿತು ಸಂತೋಷ ವ್ಯಕ್ತ ಪಡಿಸಿದ್ದು, ಹೆಮ್ಮೆಯಿಂದ ಮಾತನಾಡಿದ್ದಾರೆ. “ಮೊದಲನೆಯದಾಗಿನಾನು ಈ ಫಲಿತಾಂಶಕ್ಕೆಆಶೀರ್ವಾದವಿತ್ತ ನನ್ನಸರ್ವ ಶಕ್ತನಾದ ಜೀಸಸ್ಕ್ರಿಸ್ತರಿಗೆ ಶಿರಬಾಗಿ ವಂದಿಸುತ್ತೇನೆ. ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಗಲಿರುಳು ಶ್ರಮ ವಹಿಸಿದ್ದಾರೆ.ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಅವರ ಹೆತ್ತವರಿಗೆ ಶುಭ ಹಾರೈಕೆಗಳು.ಈ ಸಾಧನೆ ರಾಯಾನ್ ಸಂಸ್ಥೆಯ ಸಾಧನೆಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ”ಎಂದುತಿಳಿಸಿದ್ದಾರೆ.






