ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ವಿಶ್ವಕ್ಕೆ ಯೋಗ ಶಿಕ್ಷಣ ಭಾರತದ ಒಂದು ಅನನ್ಯ ಕೊಡುಗೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಯೋಗಕ್ಕೆ ಅಂತರಾಷ್ಟ್ರೀಯ ಮಾನ್ಯತೆ ದೊರೆಯುತ್ತಿದ್ದು, ಕರ್ನಾಟಕದಲ್ಲಿ ಪತಂಜಲಿ ಯೋಗ ಶಿಕ್ಷಣ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜನ ಸಾಮಾನ್ಯರನ್ನು ತಲುಪುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಮಂಗಳೂರಿನ ಶ್ರೀ ರಾಮಕೃಷ್ಣ ಮಿಶನ್‍ನ ಅಧ್ಯಕ್ಷ ಸ್ವಾಮಿ ಜಿತಕಾಮನಂದ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಚೆಂಬು ಗುಡ್ಡೆಯ ಮಂಗಳೂರು ವನ್ ವಿದ್ಯಾಸಂಸ್ಥೆಯ ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಕರ್ನಾಟಕ ಇದರ ಸೋಮನಾಥೇಶ್ವರ ವಲಯದ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆದ ಯೋಗ ಪ್ರಶಿಕ್ಷಣ ಶಿಬಿರ `ಯೋಗ ಜೀವನ ದರ್ಶನ -2017′ ಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಕರ್ನಾಟಕ ಸೋಮನಾಥೇಶ್ವರ ವಲಯದ ಜಯರಾಮ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ವನ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ಸುಷ್ಮಾ , ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಗಟ್ಟಿ ವಗ್ಗ, ಇಂಟೆಗ್ರಲ್ ಯೋಗ ಸತ್ಸಂಗ ಮಂಗಳೂರು ಇದರ ಮೆನೆಜಿಂಗ್ ಟ್ರಸ್ಟಿ ಯೋಗಾಚಾರ್ಯ ವಿ.ಎಲ್.ರೇಗೋ,ವಿದ್ಯಾರತ್ನ ವಿದ್ಯಾಸಂಸ್ಥೆ ದೇರಳಕಟ್ಟೆ ಇದರ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಅಕ್ಷರ ಸಂತ ಹರೇಕಳ ಹಾಜಬ್ಬ, ಶ್ರೀ ಜನಾರ್ಧನ ದೇವಸ್ಥಾನ ಕಯ್ಯಾರು ಇದರ ಮಾಜಿ ಆಡಳಿತ ಮೊಕ್ತೇಸರರು ಜಯರಾಮ ಸಾಂತ ಬೋಳಿಯಾರು ಗುತ್ತು, ಭಾಗವಹಿಸಿದ್ದರು. ಯುವಕರ ಯೋಗ ಪ್ರಶಿಕ್ಷಣ ಶಿಬಿರಕ್ಕೆ ಶ್ರೀ ಭಗವತೀ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾತೆಯರ ಯೋಗ ಪ್ರಶಿಕ್ಷಣ ಶಿಬಿರಕ್ಕೆ ಬಬ್ಬುಕಟ್ಟೆಯ ಶಾಲೆಯ ಮುಖ್ಯಶಿಕ್ಷಕಿ ಸೀತಾಲಕ್ಷ್ಮೀ, ಮಕ್ಕಳ ಯೋಗ ಪ್ರಶಿಕ್ಷಣ ಶಿಬಿರಕ್ಕೆ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ,ಕುತ್ತಾರುವಿನ ಗೌರವಾಧ್ಯಕ್ಷ ರಾಮಕೃಷ್ಣ ಕಾಯಂಗಳ, ದಂಪತಿಗಳ ಯೋಗ ಪ್ರಶಿಕ್ಷಣ ಶಿಬಿರಕ್ಕೆ ಶ್ರ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಆರ್ಚಕ ಮಂಜಪ್ಪ ಕಾರ್ನವರು ಚಾಲನೆ ನೀಡಿದರು.
ಪಾವೂರು ಸರಕಾರಿ ಫ್ರೌಡಶಾಲೆ ಮುಖ್ಯ ಶಿಕ್ಷಕ ಡಾ| ಕೆ.ಎಸ್.ಪ್ರಶಾಂತ್ ಕುಮಾರ್, ಕೆಪಿಟಿಯ ನಿವೃತ್ತ ಅಧೀಕ್ಷರು ಪ್ರಕಾಶ್ ಎಚ್., ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಗ್ರಾಮಚಾವಡಿ ಕೊಣಾಜೆಯ ಕೋಶಾಧಿಕಾರಿ ನಾರಾಯಣ ಪೂಜಾರಿ, ಶ್ರೀ ಸೋಮೇಶ್ವರಿ ದೇವಸ್ಥಾನ, ಸೋಮನಾಥ ಉಳಿಯ ಇದರ ಅಧ್ಯಕ್ಷರು ಜೆ. ರವೀಂದ್ರ ನಾಯ್ಕ್, ಕೊಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಲಿತ ಎಸ್. ರಾವ್, `ದಿವ್ಯಾಸ್’ ಯುವ ಸೇವಾ ಆರ್ಗನೈಸೇಶನ್ಸ್ ಮಂಗಳೂರುವಿನ ಅಧ್ಯಕ್ಷ ನಿತೇಶ್ ನಾಯರ್, ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಕರ್ನಾಟಕ ಸೋಮನಾಥೇಶ್ವರ ವಲಯದ ಮಹಿಳಾ ಸಹಸಂಚಾಲಕಿ ಶಮಾ, ಶಿಕ್ಷಣ ಪ್ರಮುಖ್ ಸುಜಯ ಮಾತೆಯರ ಶಿಕ್ಷಣ ಪ್ರಮುಖ್ ವಾಣಿ, ಚಿಕಿತ್ಸಾತ್ಮಕ ಪ್ರಮುಖರು ರಾಜ್‍ಮೋಹನ್, ಕೊಲಾರ ವಿಭಾಗದ ಮುಖ್ಯಸ್ಥೆ ಭಾರತಿ, ಯೋಗ ಶಿಕ್ಷಕರಾದ ಕವಿತ, ಶಶಿಕಲಾ ,ಮಹೇಶ್,ರಾಕೇಶ್ ಉಪಸ್ಥಿತರಿದ್ದರು.
ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಸಂಚಾಲಕರು ಲಕ್ಷ್ಮೀ ತ್ಯಾಗರಾಜ್ ತುಮಕೂರು ,ಮಾತೃ ಭೋಜನ ಬೌದ್ಧಿಕ್ ನೆರವೇರಿಸಿದರು.
ಯೋಗ ಶಿಕ್ಷಕಿ ವಿಪುಲ ಸ್ವಾಗತಿಸಿದರು. ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ ಕರ್ನಾಟಕ ಯುವಕರ ಪ್ರಮುಖ್ ಆದರ್ಶ್ ಪ್ರಾಸ್ತಾವನೆಗೈದರು.
ಶಿಕ್ಷಕ ಪ್ರಮುಖ್ ವಿಜಯಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು. ಗೀತಾ ವಂದಿಸಿದರು.






















