ಉಳ್ಳಾಲ ನ್ಯೂಸ್ ನೆಟ್ ವರ್ಕ್
ಪಾವೂರು :ಯಾದ್ ಫೌಂಡೇಷನ್ ಮಲಾರ್ ಇದರ ಮೂರನೇ ವರ್ಷದ ವಿದ್ಯಾರ್ಥಿಗಳ ಪುಸ್ತಕ ವಿತರಣಾ ಸಮಾರಂಭವು ಪಾವೂರು ಪಂಚಾಯತ್ ಸಮುದಾಯ ಭವನದಲ್ಲಿ ಸಂಘದ ಗೌರವಾಧ್ಯಕ್ಷರಾದ ಎನ್ ಎಸ್ ಕರೀಂ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಪಜೀರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಭರತ್ ರಾಜ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.ಎಮ್ ಸಿ ಎಫ್ ಪಣಂಬೂರು ಇದರ ಚೀಫ್ ಮ್ಯಾನೇಜರ್ ಎಚ್ ಆರ್ ಸುರೇಶ್. ಪಿ ರವರು ಮಕ್ಕಳಿಗೆ ಪುಸ್ತಕ ವಿತರಿಸಿದರು .ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ಪಿ.ಸುರೇಶ್ ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪಾವೂರು ಗ್ರಾಮದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಯ ಹಾಗೂ ಪ್ರೌಢಶಾಲೆಯ ಸುಮಾರು 300 ವಿಧ್ಯಾರ್ಥಿಗಳಿಗೆ ಈ ಸಂಧರ್ಭದಲ್ಲಿ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು,ತಾಲೂಕು ಪಂಚಾಯತ್ ಸದಸ್ಯರುಗಳಾದ ಬಿ.ಕೆ ಅಬ್ದುಲ್ ಜಬ್ಬಾರ್,ಬಶೀರ್ ಅಹ್ಮದ್,ಸಿದ್ದೀಕ್ ತಲಪಾಡಿ,ಪಾವೂರು ರೋಟರಿ ಕ್ಲಬ್ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ,ಪಶು ಸಂಗೋಪನಾ ಇಲಾಖೆಯ ನಿರ್ದೇಶಕರಾದ ಉಗ್ಗಪ್ಪ ಪೂಜಾರಿ,ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಫಿರೋಝ್, ಉಪಾಧ್ಯಕ್ಷರಾದ ಶ್ರೀಮತಿ ಲೀಲಾವತಿ, ಸದಸ್ಯರುಗಳಾದ ಮಹಮ್ಮದ್ ಇನೋಳಿ,ವಿವೇಕ್ ರೈ,ಎಮ್. ಪಿ ಹಸನ್,ಸಾದಿಕ್ ಇನೋಳಿ,ಶ್ರೀಮತಿ ಜಯಂತಿ,ಶ್ರೀಮತಿ ಚೆನ್ನಮ್ಮ,ಪಾವೂರು ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಡಾ.ಪ್ರಶಾಂತ್ ಕೆ.ಎಸ್,ಪ್ರಾಥಮಿಕ ಶಾಲಾ ಬದ್ರಿಯಾನಗರ ಇದರ ಮುಖ್ಯ ಶಿಕ್ಷಕಿ ಶ್ರೀಮತಿ ಭವಾನಿ,ಪಂಚಾಯತ್ ಮಾಜಿ ಸದಸ್ಯ ನೋಬರ್ಟ್ ಡಿಸಿಲ್ವ,ಡಾ. ಬೋಜರಾಜ್ ಹಾಗೂ ಯಾದ್ ಫೌಂಡೇಷನ್ ಇದರ ಅಧ್ಯಕ್ಷ ರಿಯಾಝ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.





