ಉಳ್ಳಾಲ ನ್ಯೂಸ್ ನೆಟ್ ವಕ್೯
ಮುಡಿಪು: ದೇರಳಕಟ್ಟೆ ಸಮೀಪದ ಮುಡಿಪು ಬಳಿ ಎಕರೆ 89 ಸೆಂಟ್ಸ್ ವಿಸ್ತೀರ್ಣದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ನೂತನ ಕೇಂದ್ರ ಕಾರಾಗೃಹದಲ್ಲಿ ಹೆಲಿಪ್ಯಾಟ್ ವ್ಯವಸ್ಧೆ ಕೂಡಾ ಇರಲಿದೆ.ಅತ್ಯಾಧುನಿಕ ಆಸ್ಪತ್ರೆ,ಗ್ರಾಂಥಾಲಯ,ಮಹಿಳಾ ಬ್ಯಾರಕ್,ಭದ್ರತಾ,ವ್ಯವಸ್ಥೆ ಜೊತೆಗೆ ಹೆಲಿಪ್ಯಾಡ್ ಕೂಡಾ ನಿರ್ಮಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.
ಸುಮಾರು 200 ಕೋಟಿ ರೂ ವೆಚ್ಚದಲ್ಲಿ ಅತ್ಯಂತ ಭದ್ರತೆ ಹೊಂದಿರುವ ಕಾರಾಗೃಹದಲ್ಲಿ ನಿರ್ಮಿಸಲಾಗುತ್ತಿದ್ದು. ತುರ್ತು ಸಂದರ್ಭಗಳಲ್ಲಿ ಹೆಲಿಕಾಫ್ಟರ್ ಬಳಕೆ ಮಾಡಲು ಪೂರಕವಾಗಿ ಇದನ್ನು ನಿರ್ಮಿಸಲು ಕಾರಾಗೃಹ ಇಲಾಖೆ ನಿರ್ಧಾರ ಕೈಗೊಂಡಿದೆ.ಈ ಮೂಲಕ ರಾಜ್ಯದ ಅತ್ಯಾಧುನಿಕ ಕಾರಾಗೃಹವಾಗಲಿದೆ.
ಪತ್ರಕರ್ತರ ಜೊತೆಗೆ ಮಾತನಾಡಿದ ಇಲಾಖೆ ಪೊಲೀಸ್ ಮಹಾನಿರ್ದೇಶಕ ಎಚ್ ಎನ್ ಸತ್ಯನಾರಾಯಣ ರಾವ್, ಈಗಾಗಲೇ 200ಕೋಟಿ ರೂ.ವೆಚ್ಚದ ಅತ್ಯಾಧುನಿಕ ಕಾರಾಗೃಹ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ದಪಡಿಸಲಾಗಿದ್ದು.ಶೀಘ್ರದಲ್ಲೇ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ ಸರ್ವ ಸುಸಜ್ಜಿತವಾದ ರಾಜ್ಯದ ಬಂದೀಖಾನೆ ಇದಾಗಿರಲಿದ್ದು,ಕಾರಾಗೃಹಕ್ಕೆ ಹೊಂದಿಕೊಂಡಂತೆ ಸಿಬ್ಬಂದಿಗಳಿಗಾಗಿ ಅತ್ಯಾಧುನಿಕ ಸೌಲಭ್ಯಗಳು ಇರುವ 270 ವಸತಿಗೃಹಗಳನ್ನು ಕೂಡಾ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ



