ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಇಲ್ಲಿನ ನಗರಸಭೆ ವ್ಯಾಪ್ತಿಯ ತೊಕ್ಕೊಟ್ಟು ಜಂಕ್ಷನ್ನಿನಲ್ಲಿರುವ ವಿವಿಧ ಹೊಟೇಲ್, ಬೇಕರಿ ಮತ್ತು ಬಾರ್ ಗಳಿಗೆ ಉಳ್ಳಾಲ ನಗರಸಭೆಯ ಆರೋಗ್ಯ ನಿರೀಕ್ಷಕರ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿ ಸ್ವಚ್ಛತೆ , ತೆರಿಗೆ ಹಾಗೂ ವ್ಯಾಪಾರ ಪರವಾನಗಿಯನ್ನು ಪರಿಶೀಲಿಸಲಾಯಿತು.
ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಕಾರ್ಯಾಚರಿಸುತ್ತಿರುವ ಹೊಟೇಲ್‍ಗಳಾದ ವೃಂದಾವನ, ಡೈನ್ ಪಾಯಿಂಟ್, ದಾಮೇರ್ ಫ್ರೆಂಡ್ಸ್ ಚಿಕನ್, ಅಕ್ಷಯ , ಪರಿಮಳ ಬೇಕರಿ ಹಾಗೂ ಸುಧಾ ಬಾರ್ ಆಂಡ್ ರೆಸ್ಟೋರೆಂಟ್ ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಚ್ಛತೆಯಿಲ್ಲದ ಹೊಟೇಲುಗಳಿಗೆ ನೋಟೀಸು ನೀಡುವ ಎಚ್ಚರಿಕೆ ನೀಡಿದರು. ವ್ಯಾಪಾರ ಪರವಾನಗಿಯನ್ನು ನವೀಕರಿಸದ ಮತ್ತು ತೆರಿಗೆ ಪಾವತಿ ಮಾಡದ ಹೊಟೇಲು, ಬೇಕರಿಗಳಿಗೆ ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದರು
. ಈ ಸಂದರ್ಭ ಹಿರಿಯ ಆರೋಗ್ಯ ನಿರೀಕ್ಷಕರುಗಳಾದ ಜಯಶಂಕರ್ ಹಾಗೂ ಸಾಜಿದ್ , ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ್ ಮತ್ತು ಸಿಬ್ಬಂದಿ ಶಿವಪ್ಪ ಅಟ್ಟೋಳೆ ಉಪಸ್ಥಿತರಿದ್ದರು.


















