ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಅಕ್ರಮವಾಗಿ ಕೇರಳ ಕಡೆಗೆ ಮರಳು ಸಾಗಾಟ ನಡೆಸಲು , ಗುಪ್ತ ಸ್ಥಳದಲ್ಲಿ ನಿಂತಿದ್ದ ಒಂಭತ್ತು ಬೃಹತ್ ಮರಳು ಲಾರಿಗಳನ್ನು ಉಳ್ಳಾಲ ಪೊಲೀಸರು ತಲಪಾಡಿ ತಚ್ಚಣಿ ಎಂಬಲ್ಲಿಂದ ವಶಕ್ಕೆ ಪಡೆದುಕೊಂಡಿದ್ದಾರೆ.
ಪಾವೂರು, ಕಲ್ಲಾಪು ಕಡೆಯಿಂದ ತಂದು ತಚ್ಚಣಿ ಎಂಬಲ್ಲಿ ದಾಸ್ತಾನಿರಿಸಲಾದ ಮರಳನ್ನು 10 ಮತ್ತು 12 ಚಕ್ರಗಳ ಬೃಹತ್ ಲಾರಿಯಲ್ಲಿ ತುಂಬಿಸಿಟ್ಟು, ಇಂದು ಕೇರಳ ಕಡೆಗೆ ಸಾಗಾಟ ನಡೆಸಲು ಯತ್ನಿಸುತ್ತಿದ್ದರು. ಗುಪ್ತ ಸ್ಥಳದಲ್ಲಿ ಒಂಭತ್ತು ಲಾರಿಗಳು ನಿಂತಿರುವ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಒಂಭತ್ತು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ದಾಳಿ ವೇಳೆ ಒಂಭತ್ತು ಲಾರಿಗಳಲ್ಲಿದ್ದ ಚಾಲಕರು ಹಾಗೂ ಕ್ಲೀನರ್ ಗಳು ಪರಾರಿಯಾಗಿದ್ದಾರೆ.
ಒಂಭತ್ತು ಲಾರಿ ಮಾಲೀಕರ ವಿರುದ್ಧ ಅಕ್ರಮ ಮರಳು ಸಾಗಾಟ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.




