ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಮಂಗಳೂರಿನ ಪ್ರತಿಷ್ಠಿತ ಫ್ರೈಡ್ ಡೆವಲಪರ್ಸ್ನಿಂದ ದೇರಳಕಟ್ಟೆ ನಿತ್ಯಾನಂದ ನಗರದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಎದುರು ನೂತನವಾಗಿ ನಿರ್ಮಾಣಗೊಂಡಿರುವ `ಜಾಸ್ಮಿನ್ ಫ್ರೈಡ್’ ವಸತಿ ಸಮುಚ್ಛಯ ಉದ್ಘಾಟನೆಗೊಂಡಿತು,ನೂತನ ವಸತಿ ಸಮುಚ್ಚಯಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ದಕ್ಷಿಣ ಕನ್ನಡ ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ ಮಾತನಾಡಿ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಮಂಗಳೂರಿನ ಹೊರ ವಲಯಗಳು ವಸತಿ ಸಮುಚ್ಚಯ ನಿರ್ಮಾಣಕ್ಕೆ ಪೂರಕವಾಗಿದ್ದು, ದೇರಳಕಟ್ಟೆಯಂತಹ ಆರೋಗ್ಯ ಶಿಕ್ಷಣ ಕ್ಷೇತ್ರದ ಪಕ್ಕ ನಿರ್ಮಾಣಗೊಂಡಿರುವ ಈ ವಸತಿ ಸಮುಚ್ಚಯಕ್ಕೆ ಉತ್ತಮ ಬೇಡಿಕೆಯಿದೆ. ಮಂಗಳೂರು ಸೇರಿದಂತೆ ನಗರದ ಹೊರವಲಯಗಳು ಪ್ರವಾಸೋಧ್ಯಮ ಕ್ಷೇತ್ರವಾಗಿ ಆಬಿವೃದ್ಧಿ ಹೊಂದುತ್ತಿದ್ದು, ಮೂಲಭೂತ ಸೌಕರ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ. ರಶೀದ್ ಮಾತನಾಡಿ ಸರಕಾರದ ಹೊಸ ಹೊಸ ಕಾನೂನುಗಳಿಂದ ಮುಂದಿನ ದಿನಗಳಲ್ಲಿ ವಸತಿ ಖರೀದಿ ತುಂಬಾ ದುಬಾರಿಯಾಗಲಿದ್ದು, ಇನ್ನೆರಡು ತಿಂಗಳು ಖರೀದಿ ನಡೆಸುವವರಿಗೆ ಸುವರ್ಣವಕಾಶವಿದ್ದು, ಅದರಲ್ಲೂ ಸುಂದರವಾಗಿ ನಿರ್ಮಾಣಗೊಂಡಿರುವ ಈ ವಸತಿ ಸಮುಚ್ಚಯದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ವಸತಿ ಲಭ್ಯವಿದ್ದು, ಸ್ಥಳೀಯರು ಇದರ ಸದುಪಯೋಗಪಡಿಸಕೊಳ್ಳಬಹುದು ಎಂದರು.
ಬಿಜೆಪಿ ಮುಖಂಡ ಸಂತೋಷ್ ಕುಮಾರ್ ರೈ ಬೋಳಿಯಾರ್, ಆರ್ಕಿಟೆಕ್ಟ್ ಬಾಬಾ ಅಲಂಕಾರ್, ದಿವಾಕರ್ ಕನ್ಸ್ಟ್ರಕ್ಷನ್ನ ದಿವಾಕರ್, ಬೆಳ್ಮ ಗ್ರಾಮ ಪಂಚಾಯತ್ ಅದ್ಯಕ್ಷ ವಿಜಯಾ ಕೃಷ್ಣಪ್ಪ, ಎಚ್.ಎನ್ ಎಂಡ್ ಫ್ರೈಡ್ ಡೆವಲಪರ್ಸ್ನ ಎಚ್. ಎನ್. ಹಮೀದ್, ಮಹಮ್ಮದ್ ಲಂಡನ್, ಅಶ್ಝಾಯಿ ದುಬಾೈ ಭಾಗವಹಿಸಿದ್ದರು.
ಫ್ರೈಡ್ ಡೆವಲಪರ್ಸ್ನ ಮೆಹಮೂದ್ ಕೆ.ಎಂ. ಮಾತನಾಡಿ ಈ ವಸತಿ ಸಮುಚ್ಚಯ ನಿರ್ಮಾಣಕ್ಕೆ ಆರ್ಕಿಟೆಕ್ಟ್, ಕನ್ಸ್ಟ್ರಕ್ಟರ್ ಸೇರಿದಂತೆ ಹೆಚ್ಚಿನವರ ಸಹಕಾರದಿಂದ ಇಂತಹ ಸುಂದರ ವಸತಿ ಸಮುಚ್ಚಯ ನಿರ್ಮಾಣ ಸಾಧ್ಯವಾಯಿತು. ಉನ್ನತ ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ದಿಗೊಳ್ಳುತ್ತಿರುವ ದೇರಳಕಟ್ಟೆಯ ನಿತ್ಯಾನಂದ ನಗರದಲ್ಲಿ ಸುಸಜ್ಜಿತವಾದ 11 ಹಂತಸ್ತಿನ ವಸತಿ ಸಮುಚ್ಚಯ ಅತ್ಯಾಧುನಿಕ ಸೌಕರ್ಯವನ್ನು ಹೊಂದಿದೆ. 850 ಚ. ಅಡಿಯ ಒಂದು ಬೆಡ್ರೂಂ, 1005, 1070 ಚದರಡಿಯ ಎರಡು ಬೆಡ್ರೂಂ ಮತ್ತು 1425, 1365 ಚದರಡಿಯ ಮೂರು ಬೆಡ್ರೂಂಗಳ ವಸತಿ ನೂತನ ವಸತಿ ಸಮುಚ್ಚಯದಲ್ಲಿದ್ದು, ಗ್ರಾಹಕರಿಗೆ ಆಕರ್ಷಕ ದರದಲ್ಲಿ ಕೆಲವೇ ವಸತಿಗಳು ಲಭ್ಯವಿದೆ ಎಂದು ತಿಳಿಸಿದರು.
ಮನೋಜ್ ಫೆರ್ನಾಂಡಿಸ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.




































