ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಅಪನಂಬಿಕೆ ಮತ್ತು ವದಂತಿಗಳಿಂದ ನಾಡಿನ ಸ್ವಾಸ್ಥ್ಯ ಕ್ಕೆ ಮಾರಕವಾಗ ಬಹುದಾದ ಪಜೀರ್ ನಿವಾಸಿ ಕಾರ್ತಿಕ್ ರಾಜ್ ಕೊಲೆ ಪ್ರಕರಣವನ್ನು ಜವಾಬ್ದಾರಿ ಹೊತ್ತ ಹದಿನೈದೇ ದಿನಗಳಲ್ಲಿ ಪತ್ತೆ ಮಾಡಿ, ನೈಜ ಆರೋಪಿಗಳನ್ನು ಬಂಧಿಸಲು ಸಾಧ್ಯವಾದ ಎ.ಸಿ.ಪಿ ವೆಲೆಂಟೀನ್ ನೇತೃತ್ವದ ತನಿಖಾ ತಂಡದ ಕಾರ್ಯ ವೈಖರಿಯು ಪ್ರಶಂಸನೀಯ, ಆದ್ದರಿಂದ ಈ ತಂಡದಿಂದಲೇ ಉಳ್ಳಾಲ , ಕೊಣಾಜೆ ಮತ್ತು ಕಮೀಷನರೇಟ್ ವ್ಯಾಪ್ತಿಯಲ್ಲಿ ಇನ್ನೂ ಪತ್ತೆಯಾಗದೇ ಉಳಿದಿರುವ ಪ್ರಕರಣಗಳನ್ನು ತನಿಖೆಗೊಳಪಡಿಸಿ ನ್ಯಾಯ ಒದಗಿಸಿ ಕೊಡುವಂತೆ ಯುನೈಟೆಡ್ ಸೋಶಿಯಲ್ ಮೂಮೆಂಟ್ ಉಳ್ಳಾಲ ಆಗ್ರಹಿಸಿದೆ.
ಸಂಸ್ಥೆಯ ಮುಖ್ಯ ಸಂಘಟಕ ಫಾರೂಕ್ ಉಳ್ಳಾಲ್ ಇವರ ನೇತೃತ್ವದಲ್ಲಿ ಮತ್ತು ಟ್ರಸ್ಟ್ ಸಂಚಾಲಕ ಯು.ಕೆ.ಅಹಮ್ಮದ್ ಬಾವ ಕೊಟ್ಟಾರ ಹಾಗೂ ಟ್ರಸ್ಟ್ ಸದಸ್ಯರ ನಿಯೋಗ ತೆರಳಿ ಉಪ ಅಧೀಕ್ಷಕ ಶಾಂತರಾಜ್ ರವರ ಮೂಲಕ ಮನವಿಯನ್ನು ನೀಡಿತು.
ಈ ಸಂದರ್ಭದಲ್ಲಿ ಎ.ಸಿ.ಪಿ. ವೆಲೆಂಟೀನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ನಿಯೋಗದಲ್ಲಿ ಸಂಸ್ಥೆಯ ಟ್ರಸ್ಟಿ ಗಳಾದ ನಗರದ ಚಾರ್ಟೆಡ್ ಅಕೌಂಟೆಂಟ್ ಯು.ಎಚ್ .ಅಹ್ಮದ್ , ಹಾಜಿ ಯು.ಎನ್ ಬಾವ, ರಝಾಕ್ ಹರೇಕಳ, ರಹ್ಮತ್ತ್ ಬಸ್ತಿ ಪಡ್ಪು, ಯು.ಬಿ. ಸಿದ್ದೀಕ್ ಉಪಸ್ಥಿತರಿದ್ದರು.



