ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಇರಾ: ಸಂಘಟನೆಗಳು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದಾಗ ಸಮಾಜ ಅಭಿವೃದ್ಧಿಯೊಂದಿಗೆ ಸಂಘಟನೆಗಳು ಬೆಳೆಯಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಜೈ ಶಕ್ತಿ ಮಿತ್ರ ಮಂಡಳಿ ಸಾಮಾಜಿಕವಾಗಿ ತೊಡಗಿಸುತ್ತಿರುವುದು ಶ್ಲಾಘನೀಯ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಭಿಪ್ರಾಯಪಟ್ಟರು.
ಅವರು ಇರಾ ಜೈ ಶಕ್ತಿ ಮಿತ್ರ ಮಂಡಳಿ ಇದರ 17ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಜೈಶಕ್ತಿ ಮಾತೃಮಂಡಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಜಪಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ವಹಿಸಿ ಮಾತನಾಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಸಂಗಟನೆಗಳ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಜೈಶಕ್ತಿ ಮಿತ್ರ ಮಂಡಳಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮಕ್ಕೆ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕøತ ಅಂತರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಮ್ ಇರಾ ಉದ್ಘಾಟಿಸಿದರು.
ಮಂಗಳೂರು ಕೋಸ್ಟಲ್ ಫಾರ್ಮ್ ಜನರಲ್ ಮ್ಯಾನೇಜರ್ ವೈ, ಬಿ. ಸುಂದರ್, ಚಲನಚಿತ್ರ ನಟ ಮಂಜು ರೈ, ಇರಾ ಸೈಟ್ ಅಂಗನಾಡಿ ಹಿರಿಯ ಸಹಾಯಕಿ ಸುಂದರಿ ಎಸ್.ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಭಾಜಪ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಬೋಳಿಯಾರ್, ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ಡಾ| ಮುನೀರ್ ಬಾವ, ಭಾಜಪ ಮಂಗಳೂರು ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ನವೀನ್ ಶೆಟ್ಟಿ ಕುರ್ನಾಡು, ಕುಕ್ಕಾಜೆ ಮಂಚಿ ಮಹದೇವ ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಅಧ್ಯಕ್ಷ ದೇವದಾಸ್ ಅಡಪ್ಪ, ಭಾಗವಹಿಸಿದ್ದರು.
ಇರಾ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಅಶ್ವತ್ಥಡಿ, ಇರಾ ಗ್ರಾಮ ಪಂಚಾಯತ್ ಸದಸ್ಯೆ ಸೀತಾ ಇರಾ ಸೈಟ್, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಮೊಕ್ತೇಸರ ನಾಗೇಶ್ ಪೂಜಾರಿ, ಇರಾ ಗ್ರಾಮ ಸಮಿತಿ ಭಾಜಪ ಯುವ ಮೋರ್ಚಾ ಅಧ್ಯಕ್ಷ ಅಶೋಕ್ ಕೆಂಜಿಲ, ಹೂ ಹಾಕುವ ಕಲ್ಲು ಹಿಂದೂ ಜಾಗರಣ ವೇದಿಕೆ ವೀರಕೇಸರಿ ಘಟಕ ಸಂಚಾಲಕ ಪ್ರಶಾಂತ್, ಅಧ್ಯಕ್ಷ ಅನಿಲ್ ಕುಮಾರ್ , ಮಾತೃ ಮಂಡಳಿಯ ಜಯಲಲಿತಾ ಪದ್ಮನಾಭ ಇರಾ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಹರೀಶ್ ಇರಾ ಸ್ವಾಗತಿಸಿದರು. ಹೇಮಚಂದ್ರ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು. ಮಾತೃ ಮಂಡಳಿಯ ರೇಖಾ ಅವಿನಾಶ್ ವಂದಿಸಿದರು.
ಚಿತ್ರ : ರಾಮ್ ಇರಾ












