ಉಳ್ಳಾಲ ನ್ಯೂಸ್ ನೆಟ್ವರ್ಕ್
ಉಳ್ಳಾಲ: ಯುವ ಮಿತ್ರರು ಕುಂಪಲ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಶನ್ ನ ಸಹಯೋಗದಲ್ಲಿ ದ.ಕ, ಉಡುಪಿ, ಕಾಸರಗೋಡ್ ತ್ರಿವಳಿ ಜಿಲ್ಲಾ ಮಟ್ಟದ 70 ಕೆ.ಜಿ ವಿಭಾಗದ ಮ್ಯಾಟ್ ಕುಂಪಲ ಕಬಡ್ಡಿ ಚಾಂಪಿಯನ್ಶಿಪ್-2017 ಮೇ.7 ಆದಿತ್ಯವಾರದಂದು ಮಧ್ಯಾಹ್ನ 2 ಗಂಟೆಯಿಂದ ಕುಂಪಲ ಮೂರುಕಟ್ಟೆಯಲ್ಲಿ ನಡೆಯಲಿರುವುದು.
ಈ ಕಬಡ್ಡಿ ಪಂದ್ಯಾಟವು ಪ್ರೋ ಮಾದರಿಯ ನಿಯಮದನುಸಾರ ನಡೆಯಲಿದ್ದು ವಿಜೇತರಿಗೆ ಪ್ರಥಮ ರೂ.15000 ನಗದು ಹಾಗೂ ಎ.ಜಯಣ್ಣ ಸ್ಮಾರಕ ಟ್ರೋಫಿ, ದ್ವಿತೀಯ 10000 ನಗದು ಹಾಗೂ ರಿಷಿ ಹಾರ್ಡ್ವೇರ್ ಟ್ರೋಪಿ, ತೃತೀಯ 5000 ಹಾಗೂ ಸುವರ್ಣ ಎಸೋಸಿಯೇಟ್ ಟ್ರೋಪಿ, ಚತುರ್ಥ 5000 ಹಾಗೂ ಅನುಗ್ರಹ ಸೊಸೈಟಿ ಟ್ರೋಪಿ ಹಾಗೂ ಉತ್ತಮ ದಾಳಿಗಾರ, ಹಿಡಿತಗಾರ ಸವ್ಯಸಾಚಿ ಪ್ರಶಸ್ತಿ ಹಾಗೂಭಾಗವಹಿಸಿದ ಎಲ್ಲಾ ತಂಡಗಳಿಗೂ ಸ್ಮರಣಿಕೆ ಕಾಣಿಕೆ ನೀಡಲಾಗುವುದು, ಮೊದಲು ನೊಂದಾಯಿತ 24 ತಂಡಗಳಿಗೆ ಮಾತ್ರ ಅವಕಾಶ ಎಂದು ಕಬಡ್ಡಿ ಸಂಘಟಕ ಪ್ರವೀಣ್.ಎಸ್.ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



