ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಬೈಕಂಪಾಡಿಯ ಚಿತ್ರಾಪುರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ `ಮೊಗವೀರ ಪ್ರೀಮಿಯರ್ ಲೀಗ್ ಸೀಸನ್ -2’ಗೆ ಉಳ್ಳಾಲ ಮೊಗವೀರಪಟ್ಣದ ಮಾರುತಿ ಯುವಕ ಮಂಡಲ ಮತ್ತು ಮಾರುತಿ ಕ್ರಿಕೆಟರ್ಸ್ನ ನೇತೃತ್ವದ ಕ್ರಿಕೆಟ್ ತಂಡ ಸಿದ್ಧಗೊಂಡಿದ್ದು, ತಂಡದ ಜರ್ಸಿ ಬಿಡುಗಡೆ ಕಾರ್ಯಕ್ರಮ ಮಾಯಾ ಹೋಟೆಲ್ನ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಆಯ್ದ ತಂಡಗಳು ಮೊಗವೀರ ಯುವ ವೇದಿಕೆಯ ಆಶ್ರಯದಲ್ಲಿ ನಡೆಯಲಿರುವ ಎಂಪಿಎಲ್ ಸೀಸನ್ -2ರಲ್ಲಿ ಭಾಗವಹಿಸಲಿದ್ದು, ಸಾಂಸ್ಕøತಿಕ ಸಾಮಾಜಿಕ ಮತ್ತು ಕ್ರೀಡೆ ಅದರಲ್ಲೂ ಕ್ರಿಕೆಟ್ನಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಉಳ್ಳಾಲ ಮೊಗವೀರಪಟ್ಣದ ಮಾರುತಿ ಯುವಕ ಮಂಡಲದ ಮಾರುತಿ ಕ್ರಿಕೆಟರ್ಸ್ ತಂಡ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು ಪ್ರದೀಪ್ ಹೆಜಮಾಡಿ ಅವರ ನಾಯಕತ್ವದಲ್ಲಿಕ್ರಿಕೆಟ್ ಪಟುಗಳಾದ ಯಶ್ಪಾಲ್, ಸೂರಜ್, ಸುಶಾಂತ್, ರಾಕೇಶ್, ಕೌಶಿಕ್, ಜೀವನ್, ಅಶ್ವಿತ್, ಅಸ್ವಿನ್, ವರದರಾಜ್, ಸಂದೀಪ್, ಜನಾರ್ಧನ್, ರೂಪೇಶ್, ದೀಕ್ಷಿತ್ ತಂಡದಲ್ಲಿ ಆಟವಾಡಲಿದ್ದಾರೆ.
ಜರ್ಸಿ ಬಿಡುಗಡೆ : ತಂಡದ ಜರ್ಸಿ ಬಿಡುಗಡೆ ಮಾಡಿದ ಮತ್ಸೋದ್ಯಮಿ ಮೋಹನ್ ಬೆಂಗ್ರೆ ಮಾತನಾಡಿ ಪಂದ್ಯಾಟದಲ್ಲಿ ಸೋಲು ಗೆಲುವು ಸಾಮಾನ್ಯ ಕ್ರೀಡಾ ಮನೋಭಾವದಿಂದ ಆಡುವ ಮೂಲಕ ಹಲವಾರು ವರ್ಷಗಳಿಂದ ಪ್ರಸಿದ್ಧಿಯನ್ನು ಪಡೆದಿರುವ ಮಾರುತಿ ಕ್ರಿಕೆಟರ್ಸ್ನ ಹೆಸರನ್ನು ಉಜ್ವಲಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮತ್ಸೋಧ್ಯಮಿ ದಯಾನಂದ ಪುತ್ರನ್ ಉಳ್ಳಾಲ, ರಾಷ್ಟ್ರೀಯ ಕ್ರೀಡಾಪಟು ನಿತಿನ್ ಕುಮಾರ್ ಮೂಲ್ಕಿ, ತಂಡದ ತರಬೇತುದಾರ ಅಶ್ವತ್ ಪುತ್ರನ್, ಕೆಬಿಆರ್ ಸಂಸ್ಥೆಯ ಮಾಲಕ ಇಮ್ರಾನ್, ಮಾರುತಿ ಕ್ರಿಕೆಟರ್ಸ್ನ ಅಧ್ಯಕ್ಷ ಅಧ್ಯಕ್ಷ ಕಿರಣ್ ಕುಮಾರ್, ತಂಡದ ಪ್ರಬಂಧಕ ಮಹೇಶ್ ಉಳ್ಳಾಲ್ ಉಪಸ್ಥಿತರಿದ್ದರು.
ಮಾರುತಿ ಕ್ರಿಕೆಟರ್ಸ್ನ ಅಶ್ವಿನ್ ಕೋಟ್ಯಾನ್, ವರದರಾಜ್ ಬಂಗೇರ, ಸು„ೀರ್ ವಿ. ಅಮೀನ್, ಅನಿಲ್ ಚರಣ್ ತಮ್ಮ ಅನಿಸಿಕೆಗಳನ್ನು ಹೇಳಿದರು.
ತಂಡದ ತರಬೇತುದಾರ ದಿನೇಶ್ ಕರ್ಕೇರ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.



