ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕರೋಪಾಡಿ:ದುಷ್ಕರ್ಮಿಗಳಿಂದ ಕೊಲೆಗೀಡಾದ ಯುವ ನೇತಾರ, ಕರೊಪ್ಪಾಡಿ ಪಂಚಾಯತ್ನ ಉಪಾಧ್ಯಕ್ಷ ಅರಸಳಿಕೆ ಅಬ್ದುಲ್ ಜಲೀಲ್ ಕರೋಪ್ಪಾಡಿ ಯವರ ಮನೆಗೆ ಉಳ್ಳಾಲದ ಯುನೈಟೆಡ್ ಸೋಷಿಯಲ್ ಮೂಮೆಂಟ್ನ ಪ್ರತಿನಿಧಿಗಳಾದ ನಗರದ ಚಾರ್ಟೆಡ್ ಅಕೌಂಟೆಂಟ್ ಯು.ಹೆಚ್. ಅಹ್ಮದ್, ಜಿಲ್ಲಾ ಕಾಂಗ್ರೆಸ್ ನ ವಕ್ತಾರರಾದ ಫಾರೂಕ್ ಉಳ್ಳಾಲ್, ಸರಕಾರಿ ಗುತ್ತಿಗೆದಾರ ಅಹ್ಮದ್ ಬಾವ ಕೊಟ್ಟಾರ, ಉದ್ಯಮಿ ಬಿ.ಎಂ. ಬದ್ರುದ್ದೀನ್ , ಎಸ್.ಎಂ.ಸಿ ಟ್ರಸ್ಟ್ ನ ಮಾಜಿ ಕಾರ್ಯದರ್ಶಿ ಹಾಜಿ ಯು.ಎನ್.ಬಾವ, ಯು.ಬಿ.ಸಿದ್ದೀಕ್, ಯುವ ಮುಖಂಡರುಗಳಾದ ಹೈದರ್ ಉಳ್ಳಾಲ್ ಬೈಲ್ ಹಾಗೂ ಇಬ್ರಾಹಿಂ ಮುಕ್ಕಚೇರಿ ಜೊತೆಯಲ್ಲಿದ್ದರು.
ಮೃತರ ತಂದೆ ಮತ್ತು ಕುಟುಂಬ ಸದಸ್ಯರನ್ನು ಕಂಡು ಸಾಂತ್ವನ ಹೇಳಿದ ನಿಯೋಗ, ಮುತ್ಸದ್ಧಿತನದ ದೂರದರ್ಶಿತ್ವ ನಾಯಕತ್ವವನ್ನು ನಾಡ ಜನ ಬಯಸುತ್ತಿದ್ದು. ಸಂಯಮ ಮತ್ತು ತಾಳ್ಮೆ ಯೊಂದಿಗೆ ಜಲೀಲ್ ರ ಇಚ್ಛೆಯನ್ನೂ ತಾವೇ ಪೂರ್ತಿಸಿ ಕೊಡುವ ಅಗತ್ಯವಿದೆ. ಆದ್ದರಿಂದ ಜನಸೇವೆ ಯನ್ನು ಹಿಂದಿಗಿಂತಲು ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಸುವ ಅಗತ್ಯ ಇದೆ ಎಂದು ಉಸ್ಮಾನ್ ಹಾಜಿ ಕರೊಪ್ಪಾಡಿಯವರಲ್ಲಿ ವಿನಂತಿಸಿತು.



