ಉಳ್ಳಾಲ ನ್ಯೂಸ್ ನೆಟ್ವರ್ಕ್
ಮುಡಿಪು: ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟ ಕೊಣಾಜೆ ಕುಂಟಾಳಗುಳಿಯ ಶೇಖರ್ ಅವರ ಕುಟುಂಬಕ್ಕೆ ಕುಂಟಾಳಗುಳಿಯ ಶ್ರೀ ಮಹಾಕಾಳಿ ಸೇವಾ ಮಂಡಳಿ(ರಿ) ಇದರ ವತಿಯಿಂದ ಸಹಾಯಧನವನ್ನು ವಿತರಿಸಲಾಯಿತು.
ಕುಂಟಾಳಗುಳಿ ಶೇಖರ್ (23) ಅವರು ಕಳೆದ ಕೆಲವು ದಿನಗಳ ಹಿಂದೆ ಕೊಣಾಜೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಅವರ ತಂದೆಯೂ ಮೃತಪಟ್ಟಿದ್ದರು. ಕುಟುಂಬದ ಆಧಾರಸ್ಥಂಭವಾಗಿದ್ದ ಶೇಖರ್ ಅವರು ಮೃತಪಟ್ಟ ಕಾರಣ ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಕುಂಟಾಳಗುಳಿಯ ಶ್ರೀ ಮಹಾಸೇವಾ ಮಂಡಳಿಯ ಪದಾಧಿಕಾರಿಗಳು ನಿರ್ಧರಿಸಿ ಧನ ಸಂಗ್ರಹಿಸಿ ಸುಮಾರು 22 ಸಾವಿರ ರೂಪಾಯಿಯ ಚೆಕ್ ಅನ್ನು ಶ್ರ ಮಹಾಕಾಳಿ ವನಸಾನಿಧ್ಯದ ಬಳಿ ಶೇಖರ್ ಅವರ ತಾಯಿಗೆ ಹಸ್ತಾಂತರಿಸಿದರು.
ಈ ಸಂಭರ್ದದಲ್ಲಿ ಶ್ರೀ ಮಹಾಕಾಳಿ ಸೇವಾ ಮಂಡಳಿಯ ಅಧ್ಯಕ್ಷರಾದ ಶಂಕರ್ ಭಟ್, ಪದಾಧಿಕಾರಿಗಳಾದ ಶ್ರಿವಪ್ರಕಾಶ್ ಭಟ್, ಉದಯ ಶೆಟ್ಟಿ, ಉದಯ ಕೃಷ್ಣ, ಡಾ.ಎಸ್.ಎನ್.ಭಟ್, ಕೃಷ್ಣ ಭಟ್, ಶ್ರೀಧರ ಭಟ್, ಕೃಷ್ಣಪ್ಪ ಕಾನ, ಸುಧಾಕರ ಕಾನ, ರವಿ ಕಾನ, ಹರೀಶ್ ನಡುಪದವು, ಯತೀಶ್, ರಿಜೇಶ್, ಜಗದೀಶ್, ರವಿ, ಪ್ರದೀಪ್ ಕುಟಿನ್ಹಾ, ಮಧುಸೂದನ್, ಪದ್ಮನಾಭ, ರೇವತಿ, ಮಹಾಲಿಂಗೇಶ್ವರ ಭಟ್, ಪ್ರದೀಪ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


