ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಜಗತ್ತಿನಲ್ಲಿ ಸೌಂದರ್ಯ ಆರಾಧಕರ ಸಂಖ್ಯೆಯೇ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಬಡ ಕುಟುಂಬದಲ್ಲಿರುವ ಸೀಳುತುಟಿ ಹೊಂದಿರುವ ಮಕ್ಕಳ ಚಿಕಿತ್ಸೆಯಲ್ಲಿ ಅಂತಾರಾಷ್ಟ್ರೀಯ ಫೌಂಡೇಶನ್ ಹಾಗೂ ನಿಟ್ಟೆ ಆಸ್ಪತ್ರೆ ಜಂಟಿಯಾಗಿ ಕಾರ್ಯಾಚರಿಸಿ ಸೌಂದರ್ಯದ ಜತೆಗೆ ಅವರನ್ನು ಸಮಾಜವನ್ನು ಧೈರ್ಯವಾಗಿ ಎದುರಿಸುವಂತೆ ರೂಪಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಕ್ಕಳ ಸೀಳುತುಟಿ ಫೌಂಡೇಷನ್ನಿನ ಸ್ಥಾಪಕ ಡಾ. ಹರ್ಮನ್ ಸೇಲರ್ ಅಭಿಪ್ರಾಯಪಟ್ಟರು.
ಅವರು ಸೆಂಟರ್ ಫಾರ್ ಅಡ್ವಾನ್ಸ್ಡ್ ಡೆಂಟೊಫೇಷಿಯಲ್ ಆಂಡ್ ಸ್ಟೊಮಾಟೋಗ್ನಾಥಿಕ್ ಸೈನ್ಸಸ್ ಹಾಗೂ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯ ವಿಜ್ಞಾನ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ` ಸರ್ಜಿಕಲ್ ಮೆನೇಜ್ ಮೆಂಟ್ ಕಾಂಪ್ಲೆಕ್ಸ್ ಕ್ರೇನಿಯೋಫೇಷಿಯಲ್ ಅನಾಮಲೀಸ್ ಮತ್ತು ಪ್ರೀಸರ್ಜಿಕಲ್ ನಾಸಲ್ವೀಯೊಲಾರ್ ಮೋಲ್ಡಿಂಗ್ ಕುರಿತ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರಕ್ಕೆ ಸೋಮವಾರ ದೇರಳಕಟ್ಟೆ ಎ.ಬಿ.ಶೆಟ್ಟಿ ಕಾಲೇಜಿನ ವಿಂಶತಿ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸೀಳುತುಟಿ ಹೊಂದಿರುವ ಮಕ್ಕಳು ತಮ್ಮನ್ನು ಪ್ರೀತಿಸುವವರೇ ಇಲ್ಲವೆಂದು ಖಿನ್ನತೆಗೆ ಜಾರಿದ ಹಲವು ಉದಾಹರಣೆಗಳಿವೆ. ಇದರಿಂದ ಸಮಾಜದಲ್ಲಿ ಎಲ್ಲರಂತೆ ಬಾಳಲು ಹಿಂದೇಟು ಹಾಕುವ ಪರಿಸ್ಥಿತಿಯಿತ್ತು. ಇದನ್ನೆಲ್ಲಾ ಗಣನೆಗೆ ತೆಗೆದುಕೊಂಡು ಸ್ಥಾಪನೆಯಾದ ಫೌಂಡೇಷನ್ನಿನಡಿ ವಾರ್ಷಿಕವಾಗಿ ಸಾವಿರಾರು ಮಕ್ಕಳು ಸೀಳುತುಟಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿ ಸಮಾಜವನ್ನು ಎದುರಿಸುವಂತೆ ಮಾಡಿದೆ. ಬಡ ಮಕ್ಕಳ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡಿರುವುದರಿಂದ ಅವರ ಕುಟುಂಬದ ಆಶೀರ್ವಾದವೇ ಫೌಂಡೇಶನ್ ಅನ್ನು ವಿಶ್ವಾದ್ಯಂತ ಬೆಳೆಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿ.ವಿ ಉಪಕುಲಪತಿ ಡಾ.ಯಸ್.ರಮಾನಂದ ಶೆಟ್ಟಿ ಮಾತನಾಡಿ ನೂತನ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಮಕ್ಕಳ ಸೇವೆಯಲ್ಲಿ ನಿರತರಾಗಿರುವ ಫೌಂಡೇಶನ್ ಕಾರ್ಯ ವೈಖರಿ ಶ್ಲಾಘನೀಯ. ಜನರಲ್ಲಿ ಆರೋಗ್ಯದ ಕುರಿತ ಜಾಗೃತಿಯ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಶಕ್ತಿಗಳನ್ನು ಬಳಸಿಕೊಂಡು ವೃತ್ತಿ ಕೌಶಲ್ಯತೆಯನ್ನು ಕಾಪಾಡಿಕೊಂಡು ರೋಗಿಗಳ ಶುಶ್ರೂಷೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಕ್ಯಾಡ್ಸ್ ನಿರ್ದೇಶಕ ಡಾ.ಎನ್.ಶ್ರೀಧರ್ ಶೆಟ್ಟಿ, ಎ.ಬಿ.ಶೆಟ್ಟಿ ದಂತ ಕಾಲೇಜಿನ ವೈಸ್ ಡೀನ್ ಡಾ. ಮಿತ್ರಾ.ಯನ್.ಹೆಗ್ಡೆ, ಸ್ನಾತಕೋತ್ತರ ಕಲಿಕಾ ವಿಭಾಗದ ನಿರ್ದೇಶಕ ಪ್ರೊ.ಬಿ.ರಾಜೇಂದ್ರ ಪ್ರಸಾದ್, ಎ.ಬಿ.ಶೆಟ್ಟಿ ದಂತ ಕಾಲೇಜಿನ ಡೀನ್ ಪ್ರೊ. ಯು.ಯಸ್.ಕೃಷ್ಣನಾಯಕ್, ಕ್ರೇನಿಯೋಫೇಷಿಯಲ್ ಆರ್ಥಡಾಂಟಿಕ್ಸ್ ನ ಸಲಹೆಗಾರ ಡಾ. ಅರವಿಂದ ಸಿವಕುಮಾರ್
ಓರಲ್ ಆಂಡ್ ಮೆಕ್ಸಿಲೋಫೇಷಿಯಲ್ ಸರ್ಜರಿ ವಿಭಾಗ ಮುಖ್ಯಸ್ಥ ಪ್ರೊ.ಡಾ ವಿಕ್ರಂ ಶೆಟ್ಟಿ ಸ್ವಾಗತಿಸಿದರು. ಡಾ. ಶತಘ್ನು ರೋಯ್ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಂದಕಿಶೋರ್ ಪಿ ವಂದಿಸಿದರು.










