ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ:ಇಂಡಿಯಾನ್ ಮುಜಾದ್ದೀನ್ ನಂಟಿನ ಹಿನ್ನಲೆ ಹಾಗೂ ಸ್ಫೋಟಕ ಪತ್ತೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಯೋಜನೆ ಹಿನ್ನಲೆ ಉಳ್ಳಾಲದಲ್ಲಿ ಬಂಧಿತರಾಗಿದ್ದ ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಮಹತ್ವದ ತೀರ್ಪುನ್ನು ಬುಧವಾರ ನೀಡಿದೆ.
ಉಳ್ಳಾಲದಲ್ಲಿ 9008ರಲ್ಲಿ ಮಂಗಳೂರು ಪೊಲೀಸರು ಏಳು ಮಂದಿಯನ್ನ ಬಂಧಿಸಿದ್ದರು.ಈ ಪೈಕಿ ಸೈಯ್ಯದ್ ಮಹಮ್ಮದ್ ನೌಷದ್, ಅಹ್ಮದ್ ಬಾವಾ ಅಬೂಬಕ್ಕರ್ ಮತ್ತು ಫಕೀರ್ ಅಹ್ಮದ್ ಆರೋಪ ಸಾಬೀತಾಗಿದ್ದು ಮಂಗಳೂರಿನ ಮೂರನೇ ಹೆಚ್ಚುವರಿ ಜೆಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶೆ ಪುಪ್ಪಾಂಜಲಿ ಜೀವಾವಧಿ ಶಿಕ್ಷೆಯನ್ನು ವಿಧಿಸುವ ಮೂಲಕ ಮಹತ್ವದ ತೀರ್ಪನ್ನು ನೀಡಿದ್ದಾರೆ. ಮಹಮ್ಮದ್ ಆಲಿ, ಜಾವೇದ್ ಅಲಿ, ಮಹಮ್ಮದ್ ರಫೀಕ್, ಶಬೀರ್ ಭಟ್ಕಳ ಇವರನ್ನು ದೋಷಮುಕ್ತಗೊಳಿಸಲಾಗಿದೆ.


