ಉಳ್ಳಾಲ ನ್ಯೂಸ್ ನೆಟ್ವರ್ಕ್
ನಡುಪದವು : ಕೊಣಾಜೆ ನಡುಪದವಿನ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಕಾಲೇಜುಗಳ ಮಂಗಳೂರು ವಲಯ ಮಟ್ಟದ ಅಂತರ್ಕಾಲೇಜು ಫುಟ್ಬಾಲ್ ಪಂದ್ಯಾಟ ಎ.5 ಮತ್ತು 6 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ.
ಪಂದ್ಯಾಟದಲ್ಲಿ ಭಾಗವಹಿಸಲು ಇಚ್ಚಿಸುವ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ಸಂಯೋಜನೆಗೊಳಪಟ್ಟ ತಾಂತ್ರಿಕ ಮಹಾವಿದ್ಯಾಲಯ ತಂಡಗಳು ಎ.5ರ ಬೆಳಿಗ್ಗೆ 9ಕ್ಕೆ ಮೈದಾನದಲ್ಲಿ ತಂಡದ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.



