ಉಳ್ಳಾಲ ನ್ಯೂಸ್ ನೆಟ್ವರ್ಕ್
ನರಿಂಗಾನ : ನರಿಂಗಾನ ವಿದ್ಯಾನಗರದ ರಕ್ತೇಶ್ವರಿ ಕಟ್ಟೆಯ ಶ್ರೀ ರಕ್ತೇಶ್ವರಿ ಅಮ್ಮನವರ ಸನ್ನಿಧಿಯ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ತೃತೀಯ ವರ್ಧಂತಿ ಉತ್ಸವ ಎ.23 ರಂದು ನಡೆಯಲಿದ್ದು ಆಮಂತ್ರಣ ಪತ್ರಿಕೆಯ ಬಿಡುಗಡೆ ಇತ್ತೀಚೆಗೆ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಅಮ್ಮೆಂಬಳ ಸದಾಶಿವ ನಾವಡ ಇವರು ಬಿಡುಗಡೆಗೊಳಿಸಿದರು. ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ ಮಹಾದ್ವಾರವನ್ನು ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ವೇದಮೂರ್ತಿ ವಾಸುದೇವ ಆಸ್ರಣ್ಣ ಸಮರ್ಪಣೆ ನಡೆಸಲಿದ್ದಾರೆ. ಬೋಳಂತಕೋಡಿ ರಾಮಭಟ್ ನೇತೃತ್ವದಲ್ಲಿ ದ್ವಾದಶ ನಾರಿಕೇಳ ಗಣಯಾಗ ಮತ್ತು ಶ್ರೀ ಲಲಿತಾ ಸಹಸ್ರನಾಮ ಯಾಗ ಜರಗಲಿದ್ದು, ಸಾಂಸ್ಕøತಿ ಕಾರ್ಯಕ್ರಮ, ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದರು.





