ಉಳ್ಳಾಲ ನ್ಯೂಸ್ ನೆಟ್ವರ್ಕ್
ಚೆಂಬುಗುಡ್ಡೆ : ಉಳ್ಳಾಲ ನಗರಸಭಾ ವ್ಯಾಪ್ತಿಯ ಚೆಂಬುಗುಡ್ಡೆ ಮಹಾಂಕಾಳಿ ಪಡ್ಪು ಬಳಿ ಪರಿಶಿಷ್ಠ ಜಾತಿ ಮತ್ತು ವರ್ಗಗಳಿಗೆ ಸೇರಿದ ಕಾಲನಿಯಲ್ಲಿ ಎರಡನೇ ಮನೆ ನಿರ್ಮಿಸಲು ಯತ್ನಿಸಿದ್ದ ಮಹಿಳೆಯೊಬ್ಬರ ಪ್ರಯತ್ನಕ್ಕೆ ನಗರಸಭೆ ಅ„ಕಾರಿಗಳು ತಡೆಯೊಡ್ಡಿದ್ದು, ಮಹಿಳೆಯ ವಶದಲ್ಲಿ ಭೂಮಿಯನ್ನು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಗರಸಭೆಯ ವಶಕ್ಕೆ ತೆಗೆದುಕೊಂಡರು.
ಪಾರ್ವತಿ ಯಾನೆ ರಮ್ಯಾ ಕಳೆದ ಒಂದೂವರೆ ವರ್ಷದಿಂದ ಚೆಂಬುಗುಡ್ಡೆ ಮಹಾಂಕಾಳಿಪಡ್ಪುವಿನಲ್ಲಿ ವಾಸಿಸುತ್ತಿದ್ದು, ಪರಿಶಿಷ್ಠ ಜಾತಿ ಪಂಗಡಕ್ಕೆ ಸಂಬಂ„ಸಿದ ಸವಲತ್ತನ್ನು ನಗರಸಭೆಯಿಂದ ಪಡೆದಿದ್ದರು ಎನ್ನಲಾಗಿದೆ. ಕಳೆದ ಮೂರು ತಿಂಗಳಿಂದ ತನ್ನ ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗವನ್ನು ಅತಿಕ್ರಮಿಸಿಕೊಂಡು ಅದರಲ್ಲಿ ಮನೆ ಕಟ್ಟುವ ನಿಟ್ಟಿನಲ್ಲಿ ಸಂಬಂ„ತ ಇಲಾಖೆಯನ್ನು ಸಂಪರ್ಕಿಸಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೇ ವಿಚಾರದಲ್ಲಿ ಕಳೆದ ಎರಡು ತಿಂಗಳಿಂದ ಸ್ಥಳೀಯರಿಗೆ ಮತ್ತು ಪಾರ್ವತಿ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದರಿಂದ ಕೆರಳಿದ ಸ್ಥಳೀಯರು ಉಳ್ಳಾಲ ನಗರಸಭೆಗೆ ದೂರು ನೀಡಿದ್ದರು.
ನಗರಸಭೆಯ ಅ„ಕಾರಿಗಳು ಪರಿಶೀಲನೆ ನಡೆಸಿ ಮಂಗಳವಾರ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಜಾಗವನ್ನು ಉಳ್ಳಾಲ ನಗರಸಭೆಯ ಆ„ೀನಕ್ಕೆ ತೆಗೆದುಕೊಂಡರು. ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ಬಂದಾಗ ಪಾರ್ವತಿ ಪ್ರತಿಭಟಿಸಿದ್ದು, ಬಳಿಕ ರಿಕ್ಷಾದಲ್ಲಿ ತೆರಳಿದರು. ಉಳ್ಳಾಲ ಪೆÇಕಾರಿಗಳುಲೀಸರು ಭದ್ರತೆ ನೀಡಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಹದೇವಪ್ಪ ಮಾತನಾಡಿ ಸರಕಾರದ ಆದೇಶದಂತೆ ಜಾಗವನ್ನು ನಗರಸಭೆಯ ವಶಕ್ಕೆ ನೀಡಿದ್ದು, ಅರ್ಹತೆಯ ಆಧಾರದಲ್ಲಿ ಜಾಗವನ್ನು ಉಪಯೋಗಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದರು.
ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ನಗರಸಭೆ ಅಧ್ಯಕ್ಷ ಹುಸೈನ್ ಕುಂಞ ಮೋನು,ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು,ಸ್ಥಳೀಯ ಕೌನ್ಸಿಲರ್ ಬಾಝಿಲ್ ಡಿ’ಸೋಜ, ಜಯಶಂಕರ್, ನಾಗರಾಜ್, ದಿವಾಕರ್ ಉಪಸ್ಥಿತರಿದ್ದರು.


