ಉಳ್ಳಾಲ ನ್ಯೂಸ್ ನೆಟ್‍ವರ್ಕ್
ರಾಜಗುಡ್ಡೆ : ಹರೇಕಳ ಗ್ರಾಮದ ರಾಜಗುಡ್ಡೆಯಲ್ಲಿರುವ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಮಿತಾ ಶೆಟ್ಟಿ ಅವರಿಗೆ ಶಾಲಾ ಎಸ್‍ಡಿಎಂಸಿ, ಗ್ರಾಮಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನ ಕಾಯಕ್ರಮ ನಡೆಯಿತು.ಎಸ್‍ಡಿಎಂಸಿ ಹಿರಿಯ ಸದಸ್ಯ ರಾಮದಾಸ್ ಪೂಂಜ ಮಾತನಾಡಿ ಸನ್ಮಾನ ನೆರವೇರಿಸಿ ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕ ಹಾಗೂ ಕ್ರೀಯಾಶೀಲವಾಗಿ ಸೇವೆ ಸಲ್ಲಿಸಿದ ಕೀರ್ತಿ ಅಮಿತಾ ಅವರದ್ದಾಗಿದ್ದು, ನಿವೃತ್ತ ಜೀವನದಲ್ಲೂ ತಮ್ಮ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕಿ ಅಮಿತಾ ಶೆಟ್ಟಿ ಮಾತನಾಡಿ ನಮ್ಮಿಂದಾಗಿ ಹಲವು ಮಂದಿ ಜೀವನ ಪಾಠ ಕಲಿಸಲು ಸಾಧ್ಯವಾದಂತಹ ಶಿಕ್ಷಕ ವೃತ್ತಿ ಅತ್ಯಂತ ತೃಪ್ತಿ ತಂದಿದೆ. ನನ್ನ ಗ್ರಾಮದಲ್ಲೇ, ಗ್ರಾಮಸ್ಥರ ಸಮ್ಮುಖದಲ್ಲಿ ವೃತ್ತಿಯಿಂದ ನಿವೃತ್ತಿಯಾಗುತ್ತಿರುವುದು ಸಂತಸ ತಂದಿದೆ ಎಂದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸುಗುಣ, ನಿವೃತ್ತ ಮುಖ್ಯ ಶಿಕ್ಷಕಿ ಗಂಗಾಬಾಯಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಶಾಂತ, ಸಮುದಾಯದತ್ತ ಶಾಲೆ ನೋಡೆಲ್ ಶಿಕ್ಷಕರಾದ ಶಿವಕುಮಾರ್ ಹರೇಕಳ, ಸುದರ್ಶನ್,ಪೋಷಕರು, ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಪುಷ್ಪಾ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ವಿನೋದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕ ಎ.ಕೆ.ಬಾಬು ವಂದಿಸಿದರು. ಸಹ ಶಿಕ್ಷಕ ಸುಕುಮಾರ್ ಶೆಟ್ಟಿಗಾರ್ ಕಾರ್ಯಕ್ರಮ ನಿರ್ವಹಿಸಿದರು.



