ಉಳ್ಳಾಲ್ನ್ಯೂಸ್ ನೆಟವರ್ಕ್
ಕುಂಪಲ : ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ನಡೆದ 10ನೇ ವರ್ಷದ ಏಕಾಹ ಭಜನೋತ್ಸವಕ್ಕೆ ದೀಪ್ತಿ ಅವಿನಾಶ್ ಶೆಟ್ಟಿ ಮಡ್ಯಾರ್, ಪವಿತ್ರ ಗಣೇಶ್ ಗಟ್ಟಿ ಕುಂಪಲ , ಮಮತಾ ಹರೀಶ್ ಪೂಜಾರಿ ಅಂಬ್ಲಮೊಗರು ಶನಿವಾರ ಚಾಲನೆ ನೀಡಿದರು.
ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಮಹಾಪೋಷಕ ಕೇಶವದಾಸ್ ಬಗಂಬಿಲ, ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಚಂದ್ರಹಾಸ್, ಉತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಬಿ.ಜೆ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಆಡಳಿತ ಮಂಡಳಿಯ ಪ್ರವೀಣ್.ಯಸ್. ಕುಂಪಲ, ಸಂಜೀವ ಕುಲಾಲ್, ಹರಿಪ್ರಸಾದ್ ಶೆಟ್ಟಿ, ಮಾಧವ ಬಗಂಬಿಲ, ವೆಂಕಟೇಶ್ ಕುಂಪಲ ಉಪಸ್ಥಿತರಿದ್ದರು.





