ತೊಕ್ಕೊಟ್ಟು :ಸೌಹಾರ್ದತೆ ಉಳಿಸುವಲ್ಲಿ ಕ್ರೀಡೆ ಒಂದು ಭಾಗವಾಗಿದ್ದು, ಈ ನಿಟ್ಟಿನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಬೇಕಿದೆ. ಇದರಿಂದ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಲು ಸಾಧ್ಯ ಎಂದು ಅಂತಾರಾಷ್ಟ್ರೀಯ ವೈಟ್ ಲಿಫ್ಟರ್ ಗೀತಾ ಬೈ ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಮಂಗಳೂರು ವನ್ ಶಾಲೆ ಕ್ರೀಡಾಂಗಣದಲ್ಲಿ ಜರಗಿದ ಡಿ ವೈ ಎಫ್ ಐ ನ ಉಳ್ಳಾಲ ವಲಯ ಮಟ್ಟದ ಸಾಂಗತ್ಯ-2017 ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಹದಾಢ್ರ್ಯ ಪಟು ಭಾಸ್ಕರ ತೊಕ್ಕೊಟ್ಟು, ಕುಸ್ತಿಪಟು ಪ್ರಜ್ಞಾ ಕಬೆಕೋಡಿ ಮುಖ್ಯ ಅತಿಥಿಗಳಾಗಿದ್ದರು. ಡಿವೈಎಫ್‍ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ, ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಉದ್ಯಮಿ ರಮೇಶ್ ಮೆಂಡನ್, ಡಿವೈಎಫ್‍ಐ ಉಳ್ಳಾಲ ವಲಯ ಅಧ್ಯಕ್ಷ ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಎಸ್ ಎಫ್ ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಕಾರ್ಯದರ್ಶಿ ಜೀವನರಾಜ್ ಕುತ್ತಾರ್ ಉಪಸ್ಥಿತರಿದ್ದರು.
ಹಂಝ ಕಿನ್ಯಾ ನಿರೂಪಿಸಿದರು. ಸುನಿಲ್ ತೇವುಲ ವಂದಿಸಿದರು.


