ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಉತ್ತರ ಪ್ರದೇಶದಲ್ಲಿ ಸರಕಾರ ರಚಿಸುವ ನರೇಂದ್ರ ಮೋದಿಯವರ ಕನಸು ನನಸಾಗಿದ್ದು, ಮುಂದಿನ ಕರ್ನಾಟಕದ ಚುನಾವಣೆಯಲ್ಲಿ ಇದೇ ಮಾದರಿಯ ಪಲಿತಾಂಶ ಬರಲಿದೆ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು.
ಉತ್ತರ ಪ್ರದೇಶ ಮತ್ತು ಉತ್ತರಕಾಂಡದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲವಿಗೆ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ವಿಜಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ಕಾಂಗ್ರೆಸ್‍ನ ಅಪವಿತ್ರ ಮೈತ್ರಿಯನ್ನು ಜನರು ಒಪ್ಪಿಕೊಂಡಿಲ್ಲ. ಉತ್ತರ ಪ್ರದೇಶದ ಮಾದರಿಯಲ್ಲಿ ಮುಂದಿನ ವರ್ಷದ ಕರ್ನಾಟಕದ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸಲಿದ್ದು, ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಹಿರಿಯ ಮುಖಂಡರಾದ ಸೀತರಾಮ ಬಂಗೇರ, ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ದಕ್ಷಿಣ ರೈಲ್ವೇ ಸಲಹಾ ಸಮಿತಿ ಸದಸ್ಯ ಚಂದ್ರಹಾಸ ಅಡ್ಯಂತಾಯ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ, ಬಿಜೆಪಿ ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಮುಖಂಡರಾದ ಸಂಜೀವ ಶೆಟ್ಟಿ ಅಂಬ್ಲಮೊಗರು, ಮುನೀರ್ ಬಾವ, ಮೋಹನ್‍ದಾಸ್ ಶೆಟ್ಟಿ ಕಿನ್ಯ, ಮನೋಜ್ ಆಚಾರ್ಯ, ಅಶ್ರಫ್ ಹರೇಕಳ, ಸುರೇಶ್ ಆಳ್ವ ತಲಪಾಡಿ, ಪ್ರಕಾಶ್ ಸಿಂಪೆÇೀನಿ, ಯಶವಂತ ಅಮೀನ್, ಸಚಿನ್ ಶೆಟ್ಟಿ ಸಾಂತ್ಯಗುತ್ತು, ಲಲಿತಾ ಸುಂದರ್, ಪವಿತ್ರ ಗಟ್ಟಿ, ಗೋಪಿನಾಥ್ ಬಗಂಬಿಲ, ಸುರೇಂದ್ರ ಶೆಟ್ಟಿ, ಗಣೇಶ್ ಕಾಪಿಕಾಡು, ಜೀವನ್ ತೊಕ್ಕೊಟ್ಟು, ಹೇಮಂತ್ ದೇರಳಕಟ್ಟೆ, ದಯಾನಂದ ತೊಕ್ಕೊಟ್ಟು, ದೇವದಾಸ್ ಕೊಲ್ಯ, ಗೀತಾ ಬಾೈ,ರವಿ ರೈ ಪಜೀರು, ನವೀನ್ ಶೆಟ್ಟಿ, ನಿತಿನ್ ಗಟ್ಟಿ, ದಿವ್ಯ ಶೆಟ್ಟಿ, ಪ್ರೇಮಾನಂದ ರೈ, ಉದಯ ಬಲೆತ್ತೋಡು, ಚಂದ್ರಶೇಖರ್ ಶೆಟ್ಟಿ, ರೂಪಾ ಶೆಟ್ಟಿ, ರಮಣಿ ಸೋಮೇಶ್ವರ, ಮಹಮ್ಮದ್ ಅಸ್ಗರ್, ಅಜಿತ್ ತೊಕ್ಕೊಟ್ಟು, ಸುರೇಶ್ ಶೆಟ್ಟಿ ಅಂಬ್ಲಮೊಗರು ಮತ್ತಿತರರು ಉಪಸ್ಥಿತರಿದ್ದರು.



