ಉಳ್ಳಾಲ ನ್ಯೂಸ್ ನೆಟ್ ವರ್ಕ್
ಹೊಸದಿಲ್ಲಿ : ಸುಮಾರು 30 ವರ್ಷಗಳ ಕಾಲ ಭಾರತೀಯ ನೌಕಾಪಡೆಗೆ ಅಮೂಲ್ಯವಾದ ಸೇವೆ ಸಲ್ಲಿಸಿದ ಐಎನ್ಎಸ್ ವಿರಾಟ್ ತನ್ನ ಸೇವೆಯಿಂದ ನಿವೃತ್ತಿಯಾಗಲಿದ್ದು ಎರಡನೇ ಬೃಹತ್ ಸಮರ ನೌಕೆಯಾಗಿರುವ ಐಎನ್ಎಸ್ ವಿರಾಟ್ ಸೋಮವಾರ ವಿದಾಯ ಹೇಳಲಿದೆ.
ಐಎನ್ಎಸ್ ವಿರಾಟ್ ಭಾರತೀಯ ನೌಕಾ ಪಡೆಯು ಈ ಮೊದಲು ಬ್ರಿಟನ್ನ ರಾಯಲ್ ನೇವಿಯೊಂದಿಗೆ ಸೇವೆ ಸಲ್ಲಿಸುವ ಮೂಲಕ 27 ಬಾರಿ ವಿಶ್ವ ಪರ್ಯಟನೆ ಮಾಡಿದೆ. ಬರೋಬ್ಬರಿ 11 ಲಕ್ಷ ಕಿ.ಮೀ. ದೂರವನ್ನು ಕ್ರಮಿಸಿದೆ. ಭಾರತೀಯ ನೌಕಾ ಪಡೆ ಕಳೆದ 30 ವರ್ಷಗಳಲ್ಲಿ ಕೈಗೊಂಡಿರುವ ಹಲವಾರು ಸೇನಾ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವ ಐಎನ್ಎಸ್ ವಿರಾಟ್, ಆಪರೇಶನ್ ಪವನ್ ಮತ್ತು ಪರಾಕ್ರಮ್ ಆ ಪೈಕಿ ಪ್ರಮುಖವಾಗಿವೆ.
ಮುಂಬಯಿಯಿಲ್ಲ ಇಂದು ಸೋಮವಾರ ಐಎನ್ಎಸ್ ವಿರಾಟ್ ವಿದಾಯ ಕಾರ್ಯಕ್ರಮ ನಡೆಯಲಿದ್ದು ಸುಮಾರು 21 ಮಾಜಿ ಕಮಾಂಡರ್ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಐಎನ್ಎಸ್ ವಿರಾಟ್ ನೌಕೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಪ್ರಸ್ತಾವವದಲ್ಲಿ ಆಂಧ್ರ ಪ್ರದೇಶ ಸರಕಾರ ಆಸಕ್ತಿ ತೋರಿತ್ತು. ಆದರೆ ಅದಕ್ಕೆ ಸುಮಾರು 1,000 ಕೋಟಿ ರೂ. ಖರ್ಚು ತಗಲುವುದೆಂಬ ಕಾರಣ ಆಸಕ್ತಿ ಕಮರಿ ಹೋಗಿತ್ತು.


