ಉಳ್ಳಾಲ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಕೌಶಲ್ಯ ತರಭೇತಿ ಕೇಂದ್ರವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್ ಪಾಟೀಲ್ ಶುಕ್ರವಾರ ಉದ್ಘಾಟಿಸಿದರು
ಬಳಿಕ ಮಾತನಾಡಿದ ಅವರು ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ವೈದ್ಯಕೀಯ ಸಂಸ್ಥೆಗಳು ಬೆಳೆದುನಿಂತಿದ್ದು, ಶೈಕ್ಷಣಿಕ ಹಬ್ ಆಗಿ ಪರಿವರ್ತನೆಗೊಂಡಿರುವ ಅವಳಿ ಜಿಲ್ಲೆಗಳಲ್ಲಿ ಆರೋಗ್ಯದ ಕುರಿತು ಜಾಗೃತಿಯ ಮಟ್ಟ ಹೆಚ್ಚಿದೆ ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಉದ್ದೇಶ ರಾಜ್ಯ ಸರಕಾರಕ್ಕಿದೆ. ಈಗಾಗಲೇ 6 ಸರಕಾರಿ ವೈದ್ಯಕೀಯ ಕಾಲೇಜುಗಳು ರಾಜ್ಯದಲ್ಲಿ ಕಾರ್ಯಚರಿಸುತ್ತಿದ್ದು, ಇನ್ನು 6 ಕಾಲೇಜು ಸ್ಥಾಪನೆಗೆ ಸರಕಾರ ಚಿಂತನೆ ನಡೆಸಿದೆ. ಸೂಕ್ತ ವ್ಯವಸ್ಥೆಗಳಿಲ್ಲದ ಸ್ಥಳಗಳಲ್ಲೇ ಸ್ಥಾಪಿಸಲಾಗುವುದು ಎಂದ ಅವರು ಸಿಇಟಿ ಮತ್ತು ನೀಟ್ ಆಧಾರದಲ್ಲಿ ಪ್ರಥಮ 100 ಸೀಟುಗಳನ್ನು ಸರಕಾರಕ್ಕೆ ಮೀಸಲಿರಿಸಲಾಗಿದೆ . ಕಡಿಮೆ ವೆಚ್ಛದಲ್ಲಿ ಹಾಗೂ ಗುಣಮಟ್ಟದ ಚಿಕಿತ್ಸೆ ಮಂಗಳೂರು ಮತ್ತು ಬೆಂಗಳೂರಿನಲ್ಲಿ ದೊರೆಯುವುದರಿಂದ ಹೆಲ್ತ್ ಟೂರಿಸಂಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಈ ಸಂದರ್ಭ ನಿಟ್ಟೆ ವಿ.ವಿ.ಯ ಕುಲಾಧಿಪತಿ ಎನ್. ವಿನಯ ಹೆಗ್ಡೆ, ಸಹಕುಲಾಧಿಪತಿಗಳಾದ ಪ್ರೊ. ಶಾಂತರಾವi ಶೆಟ್ಟಿ, ವಿಶಾಲ್ ಹೆಗ್ಡೆ, ಹಣಕಾಸು ವಿಭಾಗ ನಿರ್ದೇಶಕ ರಾಜೇಂದ್ರ .ಎಂ, ನಿಟ್ಟೆ ವಿ.ವಿ ಕುಲಸಚಿವ ಪ್ರೊ.ಎಂ.ಯಸ್.ಮೂಡಿತ್ತಾಯ , ಕ್ಷೇಮ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ, ಕ್ಷೇಮ ಕುಲಸಚಿವ ಡಾ.ಜೆ.ಪಿ.ಶೆಟ್ಟಿ , ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ. ಕೃಷ್ಣ ನಾಯಕ್, ಫಿಸಿಯೋಥೆರಪಿ ಕಾಲೇಜಿನ ಡೀನ್ ಡಾ.ಧನೇಶ್ ಕುಮಾರ್ , ಫಾರ್ಮಸಿ ವಿಭಾಗದ ಡೀನ್ ಡಾ. ಸಿ.ಯಸ್. ಶಾಸ್ತ್ರಿ, ನರ್ಸಿಂಗ್ ಕಾಲೇಜಿನ ಡೀನ್ ಫಾತಿಮಾ ಡಿಸಿಲ್ವಾ, ವಾಕ್ ಶ್ರವಣ ವಿಭಾಗದ ಡೀನ್ ಪ್ರೊ.ದತ್ತಾತ್ರೇಯ, ಹಾಗೂ ಕೌಶಲ್ಯ ತರಬೇತಿ ಕೇಂದ್ರದ ಮುಖ್ಯಸ್ಥ ಡಾ. ರವೀಂದ್ರ.ಯು.ಯಸ್ ಉಪಸ್ಥಿತರಿದ್ದರು.



