ಉಳ್ಳಾಲ ನ್ಯೂಸ್ ನೆಟ್ ವರ್ಕ್
ಕೊಲ್ಯ: ಹಿಂದು ಸಂಘಟನೆಯ ಕಾರ್ಯಕರ್ತರನ್ನು ಚಪ್ಪಲಿಗೆ ಹೋಲಿಸಿದ ಹಿನ್ನಲೆಯಲ್ಲಿ ಕೊಲ್ಯ ಸಮೀಪ ಕಾರ್ಯಕ್ರಮಕ್ಕೆಂದು ಭಾಗವಹಿಸಲಿದ್ದ ಸಚಿವ ಯು.ಟಿ.ಖಾದರ್ ವಿರುದ್ದ ಹಿಂದು ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಘೇರಾವ್ ಹಾಕಲು ನಿರ್ಧರಿಸಿದ್ದ ಘಟನೆ ಕೊಲ್ಯ ಸಮೀಪ ಭಾನುವಾರ ಸಂಜೆ ನಡೆದಿದೆ.
ಕೊಲ್ಯದಲ್ಲಿ ನಡೆಯುತ್ತಿದ್ದ ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಲು ಸಚಿವ ಖಾದರನ್ನು ಆಹ್ವಾನಿಸಲಾಗಿತ್ತು. ಆದರೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಆಗಮಿಸಿ ಶನಿವಾರ ನಡೆಸಿದ ಸೌಹಾರ್ದ ರ್ಯಾಲಿಯನ್ನು ಖಂಡಿಸಿ ಸಂಘ ಪರಿವಾರಗಳು ಮಂಗಳೂರು ಬಂದ್ಗೆ ಕರೆ ನೀಡಿದ್ದವು . ಇದಕ್ಕೆ ಪ್ರತಿಕ್ರಿಯಿಸಿ ಸಚಿವ ಖಾದರ್ ಹಿಂದು ಸಂಘಟನೆಯ ಕಾರ್ಯಕರ್ತರನ್ನು ಪಿಣರಾಯಿ ಚಪ್ಪಲಿಗೆ ಹೋಲಿಸಿದ್ದರು. ಇದನ್ನು ಖಂಡಿಸಿ ಭಾನುವಾರ ಹಿಂದು ಸಂಘಟನೆಯ ಕಾರ್ಯಕರ್ತರುನ ಕೊಲ್ಯದಲ್ಲಿ ಆಗಮಿಸಲಿದ್ದ ಖಾದರ್ಗೆ ಘೇರಾವ್ ಹಾಕಲು ಜಮಾಯಿಸಿದ್ದರು. ಆದರೆ ಸಚಿವ ಖಾದರ್ ಕಾರ್ಯಕ್ರಮಕ್ಕೆ ಬಾರದೆ ಇದ್ದ ಕಾರಣ ಹಿಂದು ಸಂಘಟನೆಯ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಹಿಂದುರುಗಿದ್ದಾರೆ.




