ಉಳ್ಳಾಲ ನ್ಯೂಸ್ ನೆಟ್ ವರ್ಕ್
ರಾಣಿಪುರ: ರಾಣಿಪುರ ವಿಶ್ವಮಾತೆ ಮರಿಯಮ್ಮನವರ ದೇವಾಲಯಕ್ಕೆ ಒಳಪಟ್ಟ ರೆಜಿನಾ ಚೇಲಿ ಕಾನ್ವೆಂಟಿನ ಸುವರ್ಣ ಮಹೋತ್ಸವ ಇತ್ತಿಚೇಗೆ ನಡೆಯಿತು.
ಮಂಗಳೂರು ದಕ್ಷಿಣ ವಲಯದ ಮುಖ್ಯ ಗುರುಗಳಾದ ಜೆ.ಬಿ. ಸಲ್ದಾನ ಪೆರ್ಮನ್ನೂರು , ರಾಣಿಪುರ ಇಗರ್ಜಿಯ ಧರ್ಮಗುರು ಸಂತೋಷ್ ಡಿ’ಸೋಜಾ, ಮತ್ತು ರಿಶಿವನದ ಗುರು ಅಲ್ವಿಟೊ ದಿವ್ಯ ಬಲಿಪೂಜೆ ಅರ್ಪಿಸಿದರು.
ಸನ್ಮಾನ ಸಮಾರಂಭದಲ್ಲಿ ಬೆಥನಿ ಸಂಸ್ಥೆಯ ಸಹಾಯಕಿ ಮಹಾಮಾತೆ ಭಗಿನಿ ಲಿಲ್ಲಿಸ್ ಬಿ.ಎಸ್. ಹಾಗೂ ಪೆÇ್ರವಿನ್ ಶಿಯಲ್ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಮೆಂಡೊನ್ಸಾ ಬಿ.ಎಸ್ ಇವರನ್ನು ಸನ್ಮಾನಿಸಲಾಯಿತು.
ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಮೀನಾರವರು ಸ್ವಾಗತಿಸಿದರು. ಭಗಿನಿ ಅಮಲ ವಂದಿಸಿದರು. ಹೋಲಿ ಏಂಜಲ್ಸ್ ಶಾಲೆ ಪೆರ್ಮನ್ನೂರಿನ ಭಗಿನಿ ಸಿಸ್ಟರ್ ಸೆನ್ರಿನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು.


