ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಪುತ್ತೂರು ಪಡುಮಲೆಯ ನಂದನಬಿತ್ತ್ಲ್ ಗೆಜ್ಜೆಗಿರಿಯ ದೇಯಿ ಬೈದಿತಿ-ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ಭಾನುವಾರ ನಡೆದ ಗುರುಸಾಯನ ಬೈದ್ಯರು-ಮಾತೆ ದೇಯಿಬೈದಿತಿ, ಬೈದ್ಯೆತಿ ಧರ್ಮಚಾವಡಿ, ಕೋಟಿಚೆನ್ನಯ ಮೂಲಸ್ಥಾನದ ಗರಡಿಯ ಶಿಲಾನ್ಯಾಸ ಸಮಾರಂಭಕ್ಕೆ ಕೊಲ್ಯ ನಾರಾಯಣಗುರು ಮಂದಿರದಿಂದ ಬಿಲ್ಲವ ಸಮುದಾಯದವರು ವಾಹನ ಜಾಥಾ ಮೂಲಕ ತೆರಳಿದರು.
ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಯಶವಂತ ದೇರಾಜೆ, ಚಂದ್ರಶೇಖರ್ ಉಚ್ಚಿಲ್, ನಮಿತಾ ಶ್ಯಾಂ, ಮೋಹನ್ರಾಜ್ ಕೆ.ಆರ್, ಹರೀಶ್ ಅಂಬ್ಲಮೊಗರು, ದೀಪಕ್ ಪಿಲಾರ್, ಹರೀಶ್ ಎ. ಕೊಣಾಜೆ, ಶೇಖರ್ ಕಣೀರುತೋಟ, ಜಗದೀಶ್ ಗೋಳಿಯಾಡಿ ಹಾಗೂ ಪ್ರವೀಣ್ ಬಗಂಬಿಲ ಇದ್ದರು.


