Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಗ್ರಾಮ

ತಲಪಾಡಿ ಟೋಲ್‍ಗೇಟ್ ವಿರುದ್ಧ ವಿವಿಧ ಸಂಘಟನೆಗಳ ಪ್ರತಿಭಟನೆ

UllalaVaniBy UllalaVaniFebruary 13, 2017No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ತಲಪಾಡಿ:ತಲಪಾಡಿ ಟೋಲ್‍ಗೇಟ್ ವಿರುದ್ಧ ಕಾಂಗ್ರೆಸ್ ಪ್ರೇರಿತ ಗಡಿನಾಡು ರಕ್ಷಣಾ ವೇದಿಕೆ ಪ್ರತಿಭಟನೆ ಕೈಬಿಡುತ್ತಿದ್ದಂತೆ ಇದೀಗ ತಲಪಾಡಿಯ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಕೇರಳದ ಎಲ್ ಡಿವೈಎಫ್ ಮಂಜೇಶ್ವರ ಹಾಗೂ ಉಳ್ಳಾ¯ ಬ್ಲಾಕ್ ಡಿವೈಎಫ್ ಐ ನೇತೃತ್ವದಲ್ಲಿ ಭಾನುವಾರ ಟೋಲ್ ಗೇಟಿನ ಎರಡು ಭಾಗಗಳಲ್ಲಿ ಪ್ರತಿಭಟನೆ ನಡೆದು, ಕಂಪೆನಿ ಬೇಡಿಕೆಗಳಿಗೆ ಸ್ಪಂಧಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಮುಂದಿಟ್ಟಿದ್ದಾರೆ.

12tol1 12tol2 12tol3 12tol4 12tol5 12tol6

12ullal3 tollgate (30) tollgate (18) tollgate (6) tollgate (3) tollgate (1)ತಲಪಾಡಿಯ ನಾಗರಿಕ ಹಿತರಕ್ಷಣಾ ಸಮಿತಿ, ಖಾಸಗಿ ಬಸ್ಸು ಮಾಲಕರ ಸಂಘ , ಎಸ್ ಎಸ್ ಎಫ್ ತಲಪಾಡಿ ಸೆಕ್ಟರ್, ತಲಪಾಡಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಮಹಿಳಾ ಸಂಘಟನೆಗಳು ಹಾಗೂ ಕೇರಳ ಭಾಗದ ಎಲ್ ಡಿವೈಎಫ್ ಮಂಜೇಶ್ವರ ಹಾಗೂ ಉಳ್ಳಾಲ ಬ್ಲಾಕ್ ಡಿವೈ ಎಫ್ ಐ ಎರಡು ಕಡೆಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.

ಕೆ.ಸಿ.ರೋಡಿನಿಂದ ನಾಗರಿಕ ಹಿತರಕ್ಷಣಾ ಸಮಿತಿ ರ್ಯಾಲಿ ಮೂಲಕ ಟೋಲ್ ತಲುಪಿದರೆ, ಕೇರಳದ ಎಲ್ ಡಿವೈ ಎಫ್ ನೇತೃತ್ವದ ಪ್ರತಿಭಟನಾಕಾರರು ಮೇಲಿನ ತಲಪಾಡಿಯಿಂದ ಟೋಲ್ ವರೆಗೆ ರ್ಯಾಲಿ ಮೂಲಕ ಬಂದಾಗ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದು ಎರಡು ಕಡೆಗಳಲ್ಲಿ ಪ್ರತಿಭಟನಾ ನಿರತರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ನಾಗರಿಕ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿನಯ ನಾಯ್ಕ್ ತಲಪಾಡಿ ಮಾತನಾಡಿ ನವಯುಗ್ ಅವೈಜ್ಞಾನಿಕವಾಗಿ ಟೋಲ್ ನಿರ್ಮಿಸಿದ್ದಾರೆ. ತಲಪಾಡಿಯನ್ನು ಇಬ್ಭಾಗ ನಡೆಸುವ ಟೋಲ್ ಇದಾಗಿದೆ. 200 ಮೀ ನವರು ಟೋಲ್ ನೀಡಿ ಹೋಗುವಂತಹ ವ್ಯವಸ್ಥೆ ಆಗಿದೆ. ಶಾಲೆ, ದೇವಸ್ಥಾನ, ಮಸೀದಿ ಚರ್ಚುಗಳಿಗೆ ಹೋಗಬೇಕಾದರೂ ಟೋಲ್ ನೀಡುವ ಸ್ಥಿತಿ ಇದೆ. ಟೋಲಿನ ಉತ್ತರಭಾಗದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳಿದ್ದು, ಅಲ್ಲಿಗೆ ಬರಬೇಕಾದರೆ ಟೋಲ್ ನೀಡಿಯೇ ಬರುವ ಅನಿವಾರ್ಯತೆ ಎದುರಾಗಿದೆ. ರಾಜ್ಯದ ಸಚಿವರಿಗೆ, ಸಂಸದರಿಗೆ ಮನವಿ ನೀಡಿದ್ದೇವೆ. ಅವರು ಸ್ಪಂಧಿಸುವ ಮೂಲಕ ಸಿಟಿ ಬಸ್ಸುಗಳಿಗೆ ಟೋಲ್ ಪಡೆಯದೆ ಉಚಿತವಾಗಿ ಬಿಡಬೇಕು. ಸ್ಥಳೀಯ ಕಮರ್ಷಿಯಲ್ ವಾಹನಗಳಿಗೆ ಶೇ.50 ರಿಯಾಯಿತಿ ನೀಡಬೇಕು. ಬಲವಂತವಾಗಿ ದಬ್ಬಾಳಿಕೆಯ ಮೂಲಕ ಟೋಲ್ ಸಂಗ್ರಹಿಸುವವರು ತಲಪಾಡಿ, ಕೆ.ಸಿ.ರೋಡು, ಕೋಟೆಕಾರು, ಕೊಲ್ಯ, ತೊಕ್ಕೊಟ್ಟು, ಕಲ್ಲಾಪು , ಜೆಪ್ಪಿನಮೊಗರು ಜಂಕ್ಷನ್ನುಗಳಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಲಿ ಎಂದು ಆಗ್ರಹಿಸಿದ ಅವರು, ಇದು ಸಾಂಕೇತಿಕ ಮುಂದೆ ಉಗ್ರ ಹೋರಾಟ ಎದುರಿಸಬೇಕಾದೀತು ಎಂದರು.

ನಾಗರಿಕ ಹಿತರಕ್ಷಣಾ ಸಮಿತಿಯಲ್ಲಿ ತಲಪಾಡಿ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, , ಉಪಾಧ್ಯಕ್ಷ ಅಬ್ಬಾಸ್ ಉಚ್ಚಿಲ, ಬಂಟರ ಸಂಘ ತಲಪಾಡಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಬಸ್ಸು ಮಾಲಕರ ಸಂಘದ ತಲಪಾಡಿ ವಲಯ ಅಧ್ಯಕ್ಷ ಶರತ್ ಮರೋಳಿ, ಎಸ್.ಎಸ್ ಎಫ್ ತಲಪಾಡಿ ವಲಯದ ಹಕೀಂ, ಅಲ್ತಾಫ್, ನಾಗರಿಕ ಸಮಿತಿ , ಟ್ಯಾಕ್ಸಿ ಚಾಲಕ ಮಾಲಕ ಸಂಘದ ಅಧ್ಯಕ್ಷ ದಿನೇಶ್ ಕುಂಪಲ, ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮೊದಲಾದವರು ಉಪಸ್ಥಿತರಿದ್ದರು.

ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಹಿಂದೆ ಪ್ರತಿಭಟನೆ ನಡೆಸಿದ್ದವರಿಗೆ ಸುಳ್ಳು ಭರವಸೆಗಳನ್ನು ನೀಡಿ ಅವರ ಪ್ರತಿಭಟನೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಆದರೆ ಎಲ್ ಡಿವೈಎಫ್ ಸೂಕ್ತ ಬೇಡಿಕೆಗಳನ್ನು ಈಡೇರಿಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸಲಿದೆ.

ಜೀವನರಾಜ್ ಕುತ್ತಾರ್
ಡಿವೈಎಫ್ ಐ ಕಾರ್ಯದರ್ಶಿ ಉಳ್ಳಾಲ ವಲಯ

ಕೇರಳ-ಕರ್ನಾಟಕ ಮಧ್ಯಭಾಗದಲ್ಲಿ ಇರುವ ಟೋಲ್ ಗೇಟ್ ಎರಡು ಭಾಗದ ಜನರನ್ನು ಕೊಳ್ಳೆ ಹೊಡೆಯುವ ಪ್ರಯತ್ನದಲ್ಲಿದೆ. ಕೇರಳದ ಒಂದು ಕಿ.ಮೀವರೆಗೆ ನಡೆಸಿದ ರಾ.ಹೆ.ಕಾಮಗಾರಿಯೂ ಸರಿಯಾಗಿ ಆಗಿಲ್ಲ. ಆದರೂ ಟೋಲ್ ಸಂಗ್ರಹ ಮಾಡುವ ಮೂಲಕ ಪ್ರಮುಖವಾಗಿ ಕೇರಳದ ಬಡಜನರ ಹೊಟ್ಟೆಗೆ ಹೊಡೆಯುವ ಪ್ರಯತ್ನದಲ್ಲಿ ಕಂಪೆನಿ ನಿರತವಾಗಿದೆ.

ಮಣಿಕಂಠನ್
ಡಿವೈಎಫ್ ಐ ಕಾಸರಗೋಡು ಜಿಲ್ಲಾಧ್ಯಕ್ಷ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ ಪೋಸ್ಟ್: ಕಠಿಣ ಕ್ರಮಕ್ಕೆ ಯು.ಟಿ. ಖಾದರ್ ಸೂಚನೆ

March 3, 2026

ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನ – ವ್ಯಕ್ತಿಯ ರಕ್ಷಣೆ

March 2, 2026

ಮುಡಿಪಿನಲ್ಲಿ “ಗೋ ಗ್ಯಾಸ್” ವಿಶೇಷ ಹೊಸ ವರ್ಷದ ಆಫರ್

February 26, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
KARNATAKA

ಯುಕೆಟಿಎಲ್ ಪರಿಹಾರ ವಿವಾದ: ಕರ್ನಾಟಕಕ್ಕಿಂತ ಕೇರಳದ ರೈತರಿಗೆ ಹೆಚ್ಚಿನ ಪರಿಹಾರ ಸಿಕ್ಕಿದೆಯೇ? ಇಲ್ಲಿದೆ ಅಸಲಿ ಲೆಕ್ಕಾಚಾರ

By UllalaVaniMarch 3, 20260

ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಪ್ರಸರಣ ಮಾರ್ಗವು (UKTL) ದಕ್ಷಿಣ ಕನ್ನಡ ಜಿಲ್ಲೆಯ ಗದ್ದೆ ಮತ್ತು ತೋಟಗಳ ಮೂಲಕ ಹಾದುಹೋಗುತ್ತಿರುವಾಗ,…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ ಪೋಸ್ಟ್: ಕಠಿಣ ಕ್ರಮಕ್ಕೆ ಯು.ಟಿ. ಖಾದರ್ ಸೂಚನೆ

March 3, 2026

ವಿದೇಶಿ ಕರೆನ್ಸಿ ಅಕ್ರಮ ಸಾಗಾಟ – ಓರ್ವ ಪುರುಷ, ಇಬ್ಬರು ಮಹಿಳೆಯರು ಸೆರೆ

March 2, 2026

ಇರಾನ್ ದಾಳಿ ; ಕರಾವಳಿಗರಲ್ಲಿ ಆತಂಕ ಬೇಡ – ಅನಿವಾಸಿ ಭಾರತೀಯರ ಮಾಹಿತಿ

March 2, 2026
1 2 3 … 1,819 Next
Automatic YouTube Gallery

ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್ ಶಿಲಾನ್ಯಾಸ

ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ಶಿಲಾನ್ಯಾಸ; ಹಿರಿಯರಾದ ಮಹಮ್ಮದ್ ಮುಕಚ್ಚೇರಿ ಸಮ್ಮುಖದಲ್ಲೇ ಶಂಕು ಸ್ಥಾಪನೆ

ಕಾಮಗಾರಿಗೆ ಅಡ್ಡಿಪಡಿಸಿದ ಜನರ ಬಗ್ಗೆ ಯು.ಟಿ.ಕೆ ಹೇಳಿದ್ದೇನು..?
#ullalavani #news #Utkhader #Road #Ullala
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್   ಶಿಲಾನ್ಯಾಸ
Now Playing
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ | ಚರಂಡಿ ನಿರ್ಮಾಣಕ್ಕೆ ಸ್ಪಿಕರ್ ಯು.ಟಿ.ಖಾದರ್ ಶಿಲಾನ್ಯಾಸ
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ...
ಉಳ್ಳಾಲ ಖಿಲೇರಿಯಾ ರಸ್ತೆ ಕಾಂಕ್ರಿಟೀಕರಣ ಚರಂಡಿ ನಿರ್ಮಾಣಕ್ಕೆ ಯು.ಟಿ.ಖಾದರ್ ಶಿಲಾನ್ಯಾಸ; ಹಿರಿಯರಾದ ಮಹಮ್ಮದ್ ಮುಕಚ್ಚೇರಿ ಸಮ್ಮುಖದಲ್ಲೇ ಶಂಕು ಸ್ಥಾಪನೆ

ಕಾಮಗಾರಿಗೆ ಅಡ್ಡಿಪಡಿಸಿದ ಜನರ ಬಗ್ಗೆ ಯು.ಟಿ.ಕೆ ಹೇಳಿದ್ದೇನು..?
#ullalavani #news #Utkhader #Road #Ullala
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
Now Playing
ಮಾ.4-8ರಂದು ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮ
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ...
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ;ಮಾ.4ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭ

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಳೀನ್ ಕಟೀಲ್ ಮಾಹಿತಿ

#ullalavani #news #tulunad #ullala #latestnews #breakingnews #package #mangalore #Sasihitlutemple
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d