ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೋಟೆಕಾರು : ಶಿರಡಿ ಸಾಯಿ ಬಾಬಾರು ಜಗತ್ತಿಗೆ ಶ್ರೇಷ್ಠರು. ಅವರ ತತ್ವ ನಿಷ್ಠೆ ಆಮೋಘವಾದದು ಜಾತಿ ಮತ ಪಂಥವನ್ನು ಮೀರಿದವರು ಎಲ್ಲರ ಹೃದಯವನ್ನು ಗೆದ್ದವರು ಅಂತಹ ಶ್ರೇಷ್ಠನಿಗೆ ಮಂದಿರ ನಿರ್ಮಾಣ ಮಾಡಿ ಆರಾಧನೆ ಮಾಡುವುದು ನಮ್ಮೆಲ್ಲರ ಪರಮ ಭಾಗ್ಯ ಎಂಬುದಾಗಿ ಕೊಲ್ಯ ಮಠದ ಶ್ರೀ ರಮಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಕೋಟೆಕಾರು ಬೀರಿ ಬಳಿಯ ಮಾಡೂರು ಸಾಯಿಧಾಮ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಶ್ರೀ ಶಿರಡಿ ಸಾಯಿಬಾಬಾ ಗುರುಗಳ ಮಂದಿರದ ಬಿಂಬ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಕೋಟೆಕಾರ್ ಬೀರಿ ಶ್ರೀ ಸಿದ್ಧಿವಿನಾಯಕ ಮಂದಿರದಿಂದ ಹೊರಟ ಹಸಿರುಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಂದಿರ ನಿರ್ಮಾಣದ ರೂವಾರಿ ಕೆ.ಪಿ.ಸುರೇಶ್ ಮಾಡೂರು ಅವರನ್ನು ಕೊಲ್ಯಶ್ರೀ ಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅರ್ಚಕ ಶ್ರೀಕಾಂತ್‍ಭಟ್ , ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಹರೇಕಳ, ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಗೌರವಾಧ್ಯಕ್ಷ ಚಂದ್ರಹಾಸ್ ಉಳ್ಳಾಲ,ಅಧ್ಯಕ್ಷ ಬಾಬು ಶ್ರೀ ಶಾಸ್ತ ಕಿನ್ಯಾ,ಚಂದ್ರಶೇಖರ ಉಚ್ಚಿಲ್,ಪ್ರಧಾನ ಕಾರ್ಯದರ್ಶಿ ಬಿ.ನಾರಾಯಣ ಕುಂಪಲ, ಟ್ರಸ್ಟಿ ಕೆ.ಟಿ.ಸುವರ್ಣ, ಅಯ್ಯಪ್ಪ ಸ್ವಾಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ್ ಅಡ್ಯಂತಾಯ, ಕ್ರೆಡಾೈ ಅಧ್ಯಕ್ಷ ಪುಷ್ಪರಾಜ್, ಉದ್ಯಮಿ ರಾಮಣ್ಣ ಶೆಟ್ಟಿ ಮುಂಬೈ, ಶ್ರೀ ಮೂಕಾಂಬಿಕಾ ಕನ್‍ಸ್ಟ್ರಕ್ಷನ್‍ನ ಚಂದ್ರಹಾಸ್ ಪಂಡಿತ್‍ಹೌಸ್, ಉದ್ಯಮಿ ದಿವಾಕರ ಬಗಂಬಿಲ, ಉದ್ಯಮಿ ಮೋಹನ್ ಶೆಟ್ಟಿ , ಮೂಕಾಂಬಿಕಾ ಕನ್‍ಸ್ಟ್ರಕ್ಷನ್‍ನ ಹರಿದಾಸ್ ಕೆ. ಉಪಸ್ಥಿತರಿದ್ದರು.
ಹೊರೆಕಾಣಿಕೆಯ ನೇತೃತ್ವವನ್ನು ದೇವದಾಸ್ ಕೊಲ್ಯ ವಹಿಸಿದ್ದರು. ಪ್ರ.ಸಂಚಾಲಕ ಗೋಪಾಲ ಕುತ್ತಾರ್, ಪ್ರ.ಸಂಘಟನಾ ಕಾರ್ಯದರ್ಶಿ ಶೇಖರ ಕೊಂಡೆವೂರು ,ಕೋಶಾಧಿಕಾರಿ ವಿಜಯ ಉಳ್ಳಾಲ ,ಹರಿಯಪ್ಪ ಸಾಲಿಯಾನ್,ಮೋಹನ್ ರಾಜ್ ಕನೀರುತೋಟ, ಜಯಂತ ಕೊಂಡಾಣ, ಮನೋಹರ ಸುರ್ವಣ ಆತ್ತಾವರ, ಉದಯಕುಮಾರ್ ಶೆಟ್ಟಿ ಕೊಂಡಾಣಗುತ್ತು, ರೋಹಿತ್ ಕುಲಾಲ್, ಕೋಟೆಕಾರು ಗ್ರಾಮ ಪಂಚಾಯತ್ ಅದ್ಯಕ್ಷ ಶೇಖರ ಕನೀರುತೋಟ,ಮಹಾಬಲ ಪೂಂಜಾ ಕಿನ್ಯಾ, ಶಿವಣ್ಣ ಸಾಯಿಧಾಮ, ರವಿರಾಜ್‍ರೈ ಸಾಂತ್ಯಗುತ್ತು, ಶ್ರೀನಿವಾಸ್ ಕೆ.ಪಿ., ರವಿ ಕೊಂಡಾಣ, ಹರಿಪ್ರಸಾದ್ ಸಾಯಿಧಾಮ, ಯಶ್ ಸಾಯಿಧಾಮ, ಧರ್ಮೇಂದ್ರ ಯು.ಎಸ್, ಪ್ರದೀಪ್ ಸಾಯಿಧಾಮ, ವಿ.ನಾಗಾರಾಜ್ ಸಾಯಿಧಾಮ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಬೇಬಿ ಬಲ್ಯ,ಅಧ್ಯಕ್ಷೆ ಸೌಮ್ಯ ಆರ್.ಶೆಟ್ಟಿ, ಪ್ರ.ಕಾರ್ಯದರ್ಶಿ ದಿನಮಣಿ ರಾವ್,ಟ್ರಸ್ಟಿ ಮೈನಾ ಶೇಖರ್ ಮತ್ತು ನಿರ್ಮಲ ಉದಯಕುಮಾರ್ ಮೊದಲಾದವರು ಭಾಗವಹಿಸಿದರು.
ವಿದ್ಯಾಧರ್‍ಶೆಟ್ಟಿ ಸ್ವಾಗತಿಸಿ ಶ್ರೀಕೃಷ್ಣ ಶಿವಕೃಪಾ ವಂದಿಸಿದರು.